Monday, 16th September 2024

ಭಾರತದ ಕೊರೋನಾ ಲಸಿಕೆ ಡ್ರೈವ್ ಬಗ್ಗೆ ನಟಿ ಪ್ರಿಯಾಂಕಾ ಮೆಚ್ಚುಗೆ

ನವದೆಹಲಿ : ದೇಶಾದ್ಯಂತ ಕೊರೊನಾ ವ್ಯಾಕ್ಸಿನ್​​ ವಿತರಣೆಯಾಗುತ್ತಿದ್ದು, ಬಾಲಿವುಡ್​ ನಟಿ ಹಾಗೂ ಯುನಿಸೆಫ್ ಗುಡ್‌ವಿಲ್ ರಾಯಭಾರಿ ಪ್ರಿಯಾಂಕಾ ಚೋಪ್ರಾ ಭಾರತದ ಕೊರೋನಾ ಲಸಿಕೆ ಡ್ರೈವ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟ್ವಿಟ್ಟರ್​​ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ, ಬೃಹತ್ ಕೋವಿಡ್ ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭಿಸಿರುವ ಭಾರತೀಯ ಅಧಿಕಾರಿಗಳು, ವೈದ್ಯಕೀಯ ಮತ್ತು ಆರೋಗ್ಯ ತಂಡಗಳಿಗೆ ಅಭಿನಂದನೆಗಳು. ಜನರನ್ನು ಉಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿರುವ ನಮ್ಮ ಕೊರೊನಾ ವಾರಿಯರ್ಸ್​​​ಗೆ ಎಂದೆಂದಿಗೂ ಕೃತಜ್ಞರಾಗಿರಬೇಕು ‘ ಎಂದು ಬರೆದಿದ್ದಾರೆ.

ಕಳೆದ ಶನಿವಾರ ಕೋವ್ಯಾಕ್ಸಿನ್​ ಬೃಹತ್ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.

Leave a Reply

Your email address will not be published. Required fields are marked *