Friday, 20th September 2024

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಸಂಯುಕ್ತ ಹೊರನಾಡ್

ಬೆಂಗಳೂರು: ಪೋಷಕ ನಟಿ ಸುಧಾ ಬೆಳವಾಡಿ ಅವರ ಪುತ್ರಿ ನಟಿ ಸಂಯುಕ್ತ ಹೊರನಾಡ್ ಭಾನುವಾರ ತಮ್ಮ 30ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.

ಸಂಯುಕ್ತ ಹೊರನಾಡ್ 2011ರಂದು ದೂದ್ ಪೇಡಾ ದಿಗಂತ್ ನಟನೆಯ ‘ಲೈಫು ಇಷ್ಟೇನೆ’ ಎಂಬ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಪ್ರಾಣಿ ಪ್ರೇಮಿ ಸಂಯುಕ್ತ ಹೊರನಾಡ್ ತಮ್ಮ ಪ್ರೀತಿಯ ಶ್ವಾನದೊಂದಿಗೆ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

ನಟಿ ಸಂಯುಕ್ತ ಹೊರನಾಡ್ 1991 ಮೇ 23ರಂದು ಜನಿಸಿದರು. ಇಂದು ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಕಲಾವಿದರು ಸಂಯುಕ್ತ ಹೊರನಾಡ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಖ್ಯಾತ ನಟ ಪ್ರಕಾಶ್ ರಾಜ್ ಹಾಗೂ ನೇಹಾ ನಟಿಸಿದ ಚಿತ್ರದಲ್ಲೂ ಸಂಯುಕ್ತಾ ನಟಿಸಿದ್ದಾರೆ.