Thursday, 3rd October 2024

Actress Sara Ali Khan: ಸಾರಾ ಅಲಿಖಾನ್ ಫಿಟ್‌ನೆಸ್‌ಗೆ ಫ್ಯಾನ್ಸ್‌ ಫಿದಾ! ವಿಡಿಯೊ ನೋಡಿ

Actress Sara Ali Khan

ಮುಂಬೈ: ಬಾಲಿವುಡ್ ನಟಿ ಸಾರಾ ಅಲಿ ಖಾನ್ (Actress Sara Ali Khan) ಅವರು ಯಾವಾಗಲೂ ಫಿಟ್ ಆಗಿರಲು ಬಯಸುತ್ತಾರೆ. ಹಾಗಾಗಿ ಅವರು ಆಗಾಗ ಜಿಮ್‌ನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಕೆಲವೊಮ್ಮೆ ತಮ್ಮ ಫಿಟ್‍ನೆಸ್ ವಿಡಿಯೊವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೂ ಫಿಟ್‍ನೆಸ್ ಬಗ್ಗೆ ಸ್ಫೂರ್ತಿ ನೀಡುತ್ತಾರೆ. ಇತ್ತೀಚೆಗೆ ಅವರು ತಾನು ಕಠಿಣವಾದ ವ್ಯಾಯಾಮವೊಂದನ್ನು ಮಾಡುತ್ತಿದ್ದ ವಿಡಿಯೊವನ್ನು ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು ಸದಾ ಫಿಟ್ ಆಗಿ ಇರಬೇಕೆಂಬ ಅವರ ದೃಢವಾದ ಮನಸ್ಥಿತಿಯನ್ನು ಸೂಚಿಸುತ್ತದೆ. ಇದನ್ನು ಕಂಡು ಅವರ ಅಭಿಮಾನಿಗಳು ಸಿಕ್ಕಾಪಟ್ಟೆ ಥ್ರಿಲ್‌ ಆಗಿದ್ದಾರೆ.

ಸಾರಾ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್‍ನಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ. “ನಿಮ್ಮ ದೇಹವನ್ನು ಫಿಟ್‌ ಆಗಿ ಇರಿಸಿಕೊಳ್ಳಿʼʼ ಎಂದು ಬರೆದಿದ್ದಾರೆ. ಇದಕ್ಕೆ ತಕ್ಷಣ ಅಭಿಮಾನಿಗಳು ಪ್ರತಿಕ್ರಿಯಿಸಿ ಫೈರ್ ಎಮೋಜಿಗಳನ್ನು ಹಾಕಿದ್ದಾರೆ. ಅನೇಕರು ಅವರನ್ನು ಸುಂದರಿ ಎಂದು ಕರೆದಿದ್ದಾರೆ. ಇತ್ತೀಚೆಗೆ, ಫಿಟ್‍ನೆಸ್ ತರಬೇತುದಾರ ನಮ್ರತಾ ಪುರೋಹಿತ್ ಅವರು ಸಾರಾ ಅಲಿ ಖಾನ್ ಅವರ ಹೊಸ ಫಿಟ್‌ನೆಸ್‌ ವಿಡಿಯೊವನ್ನು ಹರಿಬಿಟ್ಟಿದ್ದಾರೆ. ವಿಡಿಯೊದಲ್ಲಿ, ಸಾರಾ ಅಲಿ ಖಾನ್ ಬಿಳಿ ಸ್ಪೋರ್ಟ್ಸ್ ಬ್ರಾ ಮತ್ತು ಹಸಿರು ಸೈಕ್ಲಿಂಗ್ ಶಾರ್ಟ್ಸ್ ಧರಿಸಿ, ಕ್ಯಾಡಿಲಾಕ್ ಮೆಷಿನ್ ಮತ್ತು ಲೇಡರ್ ಬ್ಯಾರೆಲ್ ಎರಡರಲ್ಲೂ ತಮ್ಮ ಶಕ್ತಿ ಮತ್ತು ಸಮತೋಲನವನ್ನು ಪ್ರದರ್ಶನ ಮಾಡಿದ್ದಾರೆ. ಕ್ಯಾಡಿಲಾಕ್ ಮೆಷಿನ್‌ನಲ್ಲಿ ಸಾರಾ ತನ್ನ ಮೊಣಕಾಲುಗಳನ್ನು ಟ್ರೆಪೆಜ್‍ಗಳಿಗೆ ಬಿಗಿಯಾಗಿಸಿಕೊಂಡು ತಲೆಕೆಳಗಾಗಿ ನೇತಾಡುವಾಗ ತಲೆಕೆಳಗಾದ ಕ್ರಂಚ್‍ಗಳನ್ನು ಮಾಡುವ ಮೂಲಕ ತನ್ನ ಶಕ್ತಿಯನ್ನು ಪ್ರದರ್ಶಿಸಿದ್ದಾರೆ. ಈ ವ್ಯಾಯಾಮವು ಅವರ ಶಕ್ತಿ ಮತ್ತು ಫಿಟ್‍ನೆಸ್ ಬಗ್ಗೆ ಇರುವ ಒಲವನ್ನು ವ್ಯಕ್ತಪಡಿಸುತ್ತದೆ.

ಕಾರ್ತಿಕ್ ಆರ್ಯನ್ ಮತ್ತು ಸಾರಾ ಅಲಿಖಾನ್ ಇತ್ತೀಚೆಗೆ ಕಾಲ್ ಮಿ ಬೇ ಪ್ರೀಮಿಯರ್‌ನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸುದ್ಧಿಯಾಗಿದ್ದರು. ಒಂದು ಕಾಲದಲ್ಲಿ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿದ್ದ ಕಾರಣ ಈ ಇವೆಂಟ್‍ ಮುಗಿಸಿ ಹೋಗುವಾಗ ಇಬ್ಬರು ಒಬ್ಬರನೊಬ್ಬರು ಆತ್ಮೀಯವಾಗಿ ಅಪ್ಪಿಕೊಂಡಿದ್ದಾರೆ. ಇದು ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ. ಅವರ ಅಪ್ಪುಗೆಯ ವಿಡಿಯೊ ವೈರಲ್ ಆಗಿ ಅಭಿಮಾನಿಗಳು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುವಂತಾಗಿದೆ. ಇಬ್ಬರೂ ಬೇರೆಯಾಗಿ ನಾಲ್ಕು ವರ್ಷಗಳ ನಂತರ ಮತ್ತೆ ತಮ್ಮ ಪ್ರಣಯವನ್ನು ಮುಂದುವರಿಸಬಹುದು ಎಂದು ಅನೇಕರು ಆಶ್ಚರ್ಯ ಪಟ್ಟಿದ್ದಾರೆ.

ಇದನ್ನೂ ಓದಿ:ರೀಲ್‍ಗಾಗಿ ಹಾವಿನೊಂದಿಗೆ ಸರಸ! ಜೀವ ಕಳೆದುಕೊಂಡ ಯುವಕ

ರಾಜ್ ಶಮಾನಿ ಅವರೊಂದಿಗಿನ ಇತ್ತೀಚಿನ ಸಂದರ್ಶನದಲ್ಲಿ, ಕಾರ್ತಿಕ್ ತಮ್ಮ ಡೇಟಿಂಗ್ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಕಾರ್ತಿಕ್ ಡೇಟಿಂಗ್‌ನಲ್ಲಿ ʼಕುಖ್ಯಾತʼ ಎಂಬ ಮಾತು ಕೇಳಿ ಬಂದ ಹಿನ್ನೆಲೆಯಲ್ಲಿ ಕಾರ್ತಿಕ್ ಸ್ಪಷ್ಟನೆ ನೀಡಿದ್ದಾರೆ. ”ನನ್ನ ವೈಯಕ್ತಿಕ ಜೀವನವು ನನ್ನ ಜೀವನದ ಒಂದು ಹಂತದಲ್ಲಿ ಹೆಚ್ಚು ಚರ್ಚೆಯ ವಿಷಯವಾಯಿತು. ಅಂದಿನಿಂದ ಅದು ಹಾಗೆಯೇ ಇದೆ. ಆದರೆ ಒಂದು ವಿಷಯ ಖಚಿತವಾಗಿದೆ. ಪ್ರೀತಿಯನ್ನು ಯಾರೂ ಸಹ ಖರೀದಿಸಲು ಸಾಧ್ಯವಿಲ್ಲ. ನಾನು ಯಾರೊಂದಿಗೂ ಡೇಟಿಂಗ್ ಮಾಡುತ್ತಿಲ್ಲ. ನನ್ನನ್ನು ರೊಮ್ಯಾಂಟಿಕ್ ಹೀರೋ ಎಂದು ಕರೆಯಲಾಗುತ್ತದೆ. ಆದರೆ ನಾನು ಪ್ರೀತಿಯಲ್ಲಿ ದುರದೃಷ್ಟಶಾಲಿಯಾಗಿದ್ದೇನೆ” ಎಂದು ಅವರು ಹೇಳಿದ್ದಾರೆ.