Monday, 16th September 2024

ನಟಿ ವಿ.ಜೆ.ಚಿತ್ರಾ ಆತ್ಮಹತ್ಯೆಗೆ ಶರಣು

ಚೆನ್ನೈ: ತಮಿಳು ಚಿತ್ರರಂಗದ ಹೆಸರಾಂತ ನಟಿ ವಿ.ಜೆ.ಚಿತ್ರಾ ಆತ್ಮಹತ್ಯೆಗೆ ಶರಣಾಗಿದ್ದು, ಪಾಂಡಿಯನ್​ ಸ್ಪೋರ್ಸ್​ನಲ್ಲಿ ಮುಲ್ಲೈ ಪಾತ್ರದಲ್ಲಿ ಖ್ಯಾತಿಗಳಿಸಿದ್ದ ನಟಿಯ ಶವ ನಜರೆತ್​​ಪಟ್ಟೈನ ಪಂಚತಾರಾ ಹೋಟೆಲ್​ನಲ್ಲಿ ಪತ್ತೆಯಾಗಿದೆ.

ಚಿತ್ರಾ ಇವಿಪಿ ಫಿಲಂ ಸಿಟಿಯಲ್ಲಿ ಶೂಟಿಂಗ್​​ ಮುಗಿಸಿ ತಮ್ಮ ಹೋಟೆಲ್​ ಕೋಣೆಗೆ ಮರಳಿದ್ದರು ಎನ್ನಲಾಗಿದೆ. ಮೃತ ನಟಿಗೆ ಉದ್ಯಮಿ ಹೇಮಂತ್​ ಎಂಬವರ ಜೊತೆ ವಿವಾಹ ಕೂಡ ನಿಶ್ಚಯವಾಗಿತ್ತು. ವಿಜೆ ಚಿತ್ರಾ ತಮಿಳು ಚಿತ್ರರಂಗದಲ್ಲಿ ವಿವಿಧ ಚಾನೆಲ್​ಗಳ ನಿರೂಪಕರಾಗಿ ಕೆಲಸ ಮಾಡಿದ್ದಾರೆ.

ಪ್ರಸ್ತುತ ಪಾಂಡಿಯನ್​ ಸ್ಟೋರ್ಸ್ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ವಿಜೆ ಚಿತ್ರಾ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ ಎಂದು ಶಂಕಿಸಲಾಗಿದೆ. ಪ್ರತಿಭಾವಂತ ನಟಿ ನಿಧಕ್ಕೆ ಅಭಿಮಾನಿ ಬಳಗ ಟ್ವಿಟರ್​ ಸೇರಿದಂತೆ ವಿವಿಧ ಸಾಮಾಜಿಕ ಜಾಲ ತಾಣದ ವೇದಿಕೆಗಳಲ್ಲಿ ಕಂಬನಿ ಮಿಡಿದಿದೆ.

Leave a Reply

Your email address will not be published. Required fields are marked *