Saturday, 14th December 2024

ದಿವಂಗತ ನಟ ವಾಸಿಸುತ್ತಿದ್ದ ಫ್ಲ್ಯಾಟ್ ಖರೀದಿಸಿದ ನಟಿ ಅದಾ ಶರ್ಮಾ…!

ಮುಂಬೈ: ಬಾಲಿವುಡ್ ನಟಿ ಅದಾ ಶರ್ಮಾ ಅವರು ದಿವಂಗತ ನಟ ಸುಶಾಂತ್ ಸಿಂಗ್ ವಾಸಿಸುತ್ತಿದ್ದ ಮುಂಬೈ ಫ್ಲ್ಯಾಟ್ ಅನ್ನು ಖರೀದಿಸಿದ್ದಾರೆ ಎನ್ನಲಾಗಿದೆ.

ಸುಶಾಂತ್ ಸಿಂಗ್ ರಜಪೂತ್ ಅವರು 2020 ರಲ್ಲಿ ನಿಧನರಾಗುವ ಮೊದಲು ವಾಸಿಸುತ್ತಿದ್ದ ಮುಂಬೈ ಫ್ಲ್ಯಾಟ್ ಅನ್ನು ಬಾಲಿವುಡ್ ನಟಿ ಅದಾ ಶರ್ಮಾ ಖರೀದಿಸಿದ್ದಾರೆ ಎಂಬ ಸುಳಿವು ನೀಡಿದ್ದಾರೆ, ಈ ಮೂಲಕ ನೀವು ನನ್ನ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರು ತ್ತೀರಿ ಎಂಬ ಸಂದೇಶ ನೀಡಿದ್ದಾರೆ.

ಸಂದರ್ಶನವೊಂದರಲ್ಲಿ ನಟಿ ಅದಾ ಶರ್ಮಾ ಪ್ರತಿಕ್ರಿಯೆ ನೀಡಿದ್ದಾರೆ. ಮುಂಬೈನ ಆ ಫ್ಲ್ಯಾಟ್ ನಾಲ್ಕು ಕೋಣೆಗಳನ್ನು ಹೊಂದಿ ದ್ದು, ಸಮುದ್ರಕ್ಕೆ ಮುಖ ಮಾಡಿ ಮನೆ ನಿರ್ಮಿಸಲಾಗಿದೆ. ಸುಶಾಂತ್ ಸಿಂಗ್ ಸಾವಿನ ನಂತರ ಯಾರೂ ಕೂಡ ಆ ಮನೆಯಲ್ಲಿ ಇರಲು ಧೈರ್ಯ ಮಾಡಿರಲಿಲ್ಲ.