Sunday, 15th December 2024

ಅಭಿಮಾನಿಗಳಿಗೇ ಶಾಕ್​ ನೀಡಿದ ಗಾಯಕ ಅದ್ನಾನ್​ ಸಾಮಿ

ಮುಂಬೈ: ಗಾಯಕ ಅದ್ನಾನ್​ ಸಾಮಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಲ್ಲಿದ್ದಾರೆ.

ಮಾಲ್ಡೀವ್ಸ್​ ಪ್ರವಾಸದಲ್ಲಿರುವ ಗಾಯಕ ಅದ್ನಾನ್​ ತಮ್ಮ ಹಳೆಯ ಫೋಟೋ ಹಾಗೂ ಈಗಿನ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೇ ಶಾಕ್​ ನೀಡಿರುವುದು.

ಬರೋಬ್ಬರಿ 200 ಕೆಜಿಗೂ ಅಧಿಕ ತೂಕವಿದ್ದ ಅದ್ನಾನ್​​ ಕಳೆದ ಕೆಲವು ವರ್ಷ ಗಳಿಂದಲೇ ದೇಹವನ್ನು ಕರಗಿಸಿಕೊಂಡಿದ್ದರು. ಇದೀಗ ಹಂಚಿಕೊಂಡಿರುವ ಫೋಟೋದಲ್ಲಿ ನಾಯಕನಿಗೂ ಮೀರಿಸುವ ಫಿಟ್ನೆಸ್​ ಹೊಂದಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳೇ ಶಾಕ್​ ಆಗಿದ್ದಾರೆ. ನಿಜಕ್ಕೂ ಇದು ನೀವೇ ನಾ ಎಂದು ಕೆಲವರು ಪ್ರಶ್ನಿಸಿದರೆ, ಇನ್ನೂ ಕೆಲವರು ಹೊಗಳಿದ್ದಾರೆ.

ಈಗ ನಾನು ಸಂಪೂರ್ಣವಾಗಿ ಫಿಟ್​ ಆಗಿದ್ದೇನೆ. ತಮ್ಮ ಈಗಿನ ಚಿತ್ರವನ್ನೂ ಸಹ ಹಂಚಿಕೊಂಡಿದ್ದಾರೆ. 50 ವರ್ಷದ ಅದ್ನಾನ್​ ಬರೋಬ್ಬರಿ 230 ಕೆಜಿ ತೂಕವಿದ್ದರು. ಈಗ 75ಕೆಜಿಗೆ ಇಳಿಸಿಕೊಂಡಿದ್ದಾರೆ. ಇದಕ್ಕಾಗಿ ಉತ್ತಮ ಡಯಟ್​ ತೆಗೆದುಕೊಂಡು ದೇಹ ದಂಡಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.