Sunday, 15th December 2024

ಮತ್ತೆ ಒಂದಾಗಲಿದ್ದಾರೆ ಸೂರ್ಯ-ಸನ್ನಿಧಿ

ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ, ಅಗ್ನಿಸಾಕ್ಷಿ ಧಾರಾವಾಹಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಆ ಧಾರಾವಾಹಿ ಮುಗಿದು ವರ್ಷಗಳೇ ಉರುಳಿವೆ. ಆದರೂ ಸೂರ್ಯ ಮತ್ತು ಸನ್ನಿಧಿಯ ಜೋಡಿ ಇಂದಿಗೂ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಈಗ ಮತ್ತೆ ಸನ್ನಿಧಿ ಸೂರ್ಯನ ಹೆಸರು ಒಟ್ಟಿಗೆ ಹೇಳಿ ಬರುತ್ತಿದೆ.

ವಿಜಯ್ ಸೂರ್ಯ ಮತ್ತು ವೈಷ್ಣವಿ ಈಗ ಮತ್ತೆ ಒಂದಾಗುತ್ತಿzರೆ. ಹೌದು, ಜೀ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ಸೆಟ್ಟೇರಲು ಸಿದ್ಧವಾಗಿದೆ. ಈ ಧಾರಾವಾಹಿಯಲ್ಲಿ ಅಗ್ನಿಸಾಕ್ಷಿ ಜೋಡಿ ಒಟ್ಟಿಗೆ ನಟಿಸಲಿದ್ದಾರೆ. ಕರ್ಣ ಎನ್ನುವ ಶೀರ್ಷಿಕೆಯಲ್ಲಿ ಧಾರಾವಾಹಿ ಮೋಡಿ ಬರುತ್ತಿದ್ದು, ಸೂರ್ಯ ಸನ್ನಿಧಿ ಮತ್ತೆ ಒಂದಾಗಲಿದ್ದಾರೆ.

ಧಾರವಾಹಿಯ ನಾಯಕನಾಗಿ ವಿಜಯ್ ಸೂರ್ಯ, ನಾಯಕಿ ಆಗಿ ವೈಷ್ಣವಿ ಅಭಿನಯಿಸ ಲಿದ್ದಾರೆ. ಕರ್ಣನಾಗಿ ವಿಜಯ್ ಸೂರ್ಯ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದಲ್ಲೂ ನಾಯಕನಾಗಿ ಅಭಿನಯಸಿದ್ದ ವಿಜಯ್ ಸೂರ್ಯ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಬಿಗ್‌ಬಾಸ್ ಮನೆಗೆ ಪ್ರವೇಶಿಸಿದ್ದ ವೈಷ್ಣವಿ ರಿಯಾಲಿಟಿ ಶೋ ಪ್ರಿಯರ ಮೆಚ್ಚುಗೆ ಪಡೆದಿದ್ದರು.

ಬಿಗ್‌ಬಾಸ್ ಮನೆಯಿಂದ ಹೊರ ಬಂದ ವೈಷ್ಣವಿಗೆ ಹಲವು ಚಿತ್ರಗಳಲ್ಲೂ ಅಅಭಿನಯಿಸಲು ಅವಕಾಶಗಳು ಅರಸಿಬಂದಿವೆ. ಈಗಾಗಲೇ ವೈಷ್ಣವಿ ಸಿನಿಮಾ ವೊಂದರಲ್ಲಿ ನಟಿಸುತ್ತಿದ್ದಾರೆ.