Saturday, 14th December 2024

Aishwarya Rai Bachchan: ‘ನಮ್ಮ ನಡುವೆ ಏನಿಲ್ಲ’ ಪತಿ ಜತೆ ಫೋಟೋ ತೆಗೆಸಿಕೊಂಡು ಐಶ್ವರ್ಯಾ ರೈ ರವಾನಿಸಿದ ಸಂದೇಶವೇನು?

Aishwarya Rai Bachchan

ಮುಂಬೈ : ನಟ ಹಾಗೂ ನಟಿಯರ ಜೀವನದಲ್ಲಿ ಡಿವೋರ್ಸ್ ಒಂದು ಸಾಮಾನ್ಯ ವಿಷಯ. ಈ ಹಿಂದೆ ಅನೇಕ ನಟ ನಟಿಯರು ತಮ್ಮ ಸಂಗಾತಿಗೆ ಡಿವೋರ್ಸ್ ನೀಡಿ ಬೇರೆ ಮದುವೆ ಮಾಡಿಕೊಂಡಿದ್ದರು. ಆದರೆ ಕಳೆದ ಕೆಲವು ತಿಂಗಳುಗಳಿಂದ, ಬಾಲಿವುಡ್ ತಾರಾ ಜೋಡಿ ಐಶ್ವರ್ಯಾ(Aishwarya Rai Bachchan) ಮತ್ತು ಅಭಿಷೇಕ್ ಬೇರ್ಪಡುತ್ತಾರೆ ಎಂಬ ಊಹಾಪೋಹಗಳು ಕಾಡ್ಗಿಚ್ಚಿನಂತೆ ಹರಡಿವೆ. ಈ ವದಂತಿಗಳ ನಡುವೆ, ಐಶ್ವರ್ಯಾ ಅವರ 2016 ರ ಚಲನಚಿತ್ರ ಸರಬ್ಜಿತ್‌ನ ಪ್ರೀಮಿಯರ್‌ ಥ್ರೋಬ್ಯಾಕ್ ಘಟನೆಯು ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಕಾಣಿಸಿಕೊಂಡಿದೆ. ಇದರಲ್ಲಿ ನಟ ಅಭಿಷೇಕ್ ಅವರು ತಮ್ಮ ಪತ್ನಿ  ಐಶ್ವರ್ಯ ಜೊತೆ  ನಡೆದುಕೊಂಡ ರೀತಿಯನ್ನು  ಎತ್ತಿ ತೋರಿಸುತ್ತಿದೆ.  

Aishwarya Rai Bachchan

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ, ಅಭಿಷೇಕ್ ಇತರ ಸೆಲೆಬ್ರಿಟಿಗಳೊಂದಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಪಾಪರಾಜಿಗಳು ಐಶ್ವರ್ಯಾ ಮತ್ತು ಅಭಿಷೇಕ್ ಅವರು ಒಟ್ಟಿಗೆ ನಿಂತು ಫೋಟೋ ತೆಗೆದುಕೊಳ್ಳಲು ವಿನಂತಿಸಿದ್ದಾರೆ. ಆಗ ಐಶ್ವರ್ಯಾ ರೈ ಬಚ್ಚನ್‌ ಅಭಿಷೇಕ್ ಅವರನ್ನು ಫೋಟೊಗಾಗಿ ಕರೆದಾಗ ಅಭಿಷೇಕ್‌ ತಕ್ಷಣ ಪ್ರತಿಕ್ರಿಯಿಸಲಿಲ್ಲ. ಇದು ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಸ್ವಲ್ಪ ಸಮಯದ ನಂತರ, ಐಶ್ವರ್ಯಾ ಅಭಿಷೇಕ್ ಅವರನ್ನು ಮತ್ತೆ ಕರೆದು ಇಬ್ಬರು ಒಟ್ಟಿಗೆ  ಕ್ಯಾಮೆರಾಗಳಿಗೆ ಪೋಸ್ ನೀಡಿದ್ದಾರೆ. ಆದರೆ ಇವರಿಬ್ಬರ ನಡುವೆ ಏನೋ ಸರಿಯಿಲ್ಲ ಎಂಬ ಮೆಸೇಜ್‌ ಅಂತೂ ಅಭಿಮಾನಿಗಳಿಗೆ ಇದರಿಂದ ಸಿಕ್ಕಿತ್ತು.

ಅದೂ ಅಲ್ಲದೇ,  ಇಬ್ಬರು ಒಟ್ಟಿಗೆ ಪೋಸ್ ನೀಡುತ್ತಿದ್ದಂತೆ, ಅಭಿಷೇಕ್ ಇದ್ದಕ್ಕಿದ್ದಂತೆ ತನ್ನ ಹೆಂಡತಿಯನ್ನು ಮಾತ್ರ ಬಿಟ್ಟು ಛಾಯಾಗ್ರಾಹಕರಿಗೆ  “ಅವಳ ಫೋಟೊ ತೆಗೆದುಕೊಳ್ಳಿ” ಎಂದು ಹೇಳಿ ಇದ್ದಕ್ಕಿದ್ದಂತೆ ಫ್ರೇಮ್‍ನಿಂದ ಹೊರಹೋಗಿದ್ದಾರೆ. ಪತಿಯ ವರ್ತನೆಯಿಂದ ಐಶ್ವರ್ಯಾಗೆ ಮುಜುಗರವನ್ನುಂಟು ಮಾಡಿತ್ತು. ಆದರೆ ಇದರ ನಡುವೆಯೂ ಎಲ್ಲಾ ಸಂಭಾಳಿಸುತ್ತಾ ನಗುಮುಖದಲ್ಲಿ ಅಲ್ಲಿಂದ ಹೊರಗೆ ಬಂದಿದ್ದರು.

ಇದನ್ನೂ ಓದಿ:ಹೆಂಡತಿಯನ್ನು ಅತಿಥಿಗಳ ಜತೆ ಮಲಗಲು ಕಳುಹಿಸುವುದೇ ಈ ಬುಡಕಟ್ಟು ಸಮುದಾಯದ ಶ್ರೇಷ್ಠ ಸಂಪ್ರದಾಯ

Aishwarya Rai Bachchan

ಈ ನಡುವೆ ಅಭಿಷೇಕ್ ಅಥವಾ ಐಶ್ವರ್ಯಾ ಅವರು ಬೇರೆಯಾಗುವ  ವದಂತಿಗಳಿಗೆ ಪ್ರತಿಕ್ರಿಯಿಸಿಲ್ಲ. ಇತ್ತೀಚೆಗೆ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಅವರ ವಿವಾಹದ ಸಮಯದಲ್ಲಿ, ಇಡೀ ಬಚ್ಚನ್ ಕುಟುಂಬವು ಒಟ್ಟಿಗೆ ಕಾಣಿಸಿಕೊಂಡಿತು. ಆದಾಗ್ಯೂ, ಐಶ್ವರ್ಯ ಮತ್ತು ಅವರ ಮಗಳು ಆರಾಧ್ಯ ಪ್ರತ್ಯೇಕವಾಗಿ ಬಂದಿರುವುದು ಕಂಡುಬಂದಿದೆ. ಇದು ಹಲವಾರು  ವದಂತಿಗಳನ್ನು ಹುಟ್ಟುಹಾಕಿತ್ತು. ಇತ್ತೀಚೆಗೆ ಐಶ್ವರ್ಯ ಮಾತ್ರ ಆರಾಧ್ಯ ಅವರೊಂದಿಗೆ ಐಐಎಫ್ಎ 2024 ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದ್ದರು. ಮತ್ತೊಂದೆಡೆ, ಅಭಿಷೇಕ್ ಅವರ ಕೆಲಸದ ಬಗ್ಗೆ ಹೇಳುವುದಾದರೆ, ನಟ ಕಿಂಗ್ ಚಿತ್ರದಲ್ಲಿ ಶಾರುಖ್ ಖಾನ್ ಎದುರು ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವನ್ನು ಸುಜೋಯ್ ಘೋಷ್ ನಿರ್ದೇಶಿಸಲಿದ್ದು, ಸುಹಾನಾ ಖಾನ್ ಕೂಡ ನಟಿಸಲಿದ್ದಾರೆ.