Wednesday, 11th December 2024

ನಟ ಅಜಿತ್ ಕುಮಾರ್ ತಂದೆ ಪಿ.ಸುಬ್ರಮಣ್ಯಂ ನಿಧನ

ಹೈದರಾಬಾದ್: ತಮಿಳು ನಟ ಅಜಿತ್ ಕುಮಾರ್ ತಂದೆ ಪಿ ಸುಬ್ರಮಣ್ಯಂ (84) ಚೆನ್ನೈನಲ್ಲಿ ಕೊನೆಯುಸಿರೆಳೆದರು.

ಸುಬ್ರಮಣ್ಯಂ ಅವರು ಪಾರ್ಶ್ವವಾಯು ಮತ್ತು ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳೊಂದಿಗೆ ಹೋರಾಡುತ್ತಿದ್ದರು. ಅವರ ಪಾರ್ಥಿವ ಶರೀರವನ್ನು ಬೆಸೆಂಟ್ ನೆಗರ್ ಸ್ಮಶಾನದಲ್ಲಿ ಇಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಅಂತ್ಯಸಂಸ್ಕಾರ ಮಾಡಲಾಗುವುದು.

ಪಿಎಸ್ ಮಣಿ ಕೇರಳದ ಪಾಲಕ್ಕಾಡ್ ಮೂಲದವರು. ಅವರು ಪತ್ನಿ ಮೋಹಿನಿ ಮತ್ತು ಮೂವರು ಮಕ್ಕಳಾದ ಅನುಪ್ ಕುಮಾರ್, ಅಜಿತ್ ಕುಮಾರ್ ಮತ್ತು ಅನಿಲ್ ಕುಮಾರ್ ಅವರನ್ನು ಅಗಲಿದ್ದಾರೆ.