Friday, 22nd November 2024

Allu Arjun: ರಾಷ್ಟ್ರೀಯ ಪ್ರಶಸ್ತಿ ಲಿಸ್ಟ್‌ ನೋಡೋವಾಗ ದುಃಖ ಆಗ್ತಿತ್ತು… ಅಲ್ಲು ಅರ್ಜುನ್‌ ಹೀಗಂದಿದ್ದೇಕೆ?

allu arjun

ಹೈದರಾಬಾದ್‌: ತಮ್ಮ ಅದ್ಭುತ ನಟನೆ ಮೂಲಕ ಜನ ಮನ ಗೆದ್ದವರು ತೆಲುಗು ನಟ ಅಲ್ಲು ಅರ್ಜುನ್‌(Allu Arjun). ಅದರಲ್ಲೂ ಅವರ ಪುಷ್ಫ ಸಿನಿಮಾದ ನಂತರ ಅಂತೂ ಅವರ ಫ್ಯಾನ್‌ ಫಾಲೋವರ್ಸ್‌ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಇನ್ನು ಇವರು ರಾಷ್ಟ್ರೀಯ ಪ್ರಶಸ್ತಿ ಗೆದ್ದ ಮೊದಲ ನಟ ಎಂಬ ಹೆಗ್ಗಳಿಕೆಗೂ ಪಾತ್ರರಾದವರು. ಅವರ ನಟನೆಯ ಪುಷ್ಪಾ 2 ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ತೆರೆ ಮೇಲೆ ಅಬ್ಬರಿಸಲು ರೆಡಿ ಆಗಿದೆ. ಈ ನಡುವೆ ಅಲ್ಲು ಅರ್ಜುನ್‌ ತಾವು ರಾಷ್ಟ್ರೀಯ ಪ್ರಶಸ್ತಿ ಪಡೆದೇ ತೀರಬೇಕೆಂದು ಬಯಸಿದ್ದೆ. ಅದಕ್ಕೆ ಒಂದು ಬಲವಾದ ಕಾರಣ ಇತ್ತು ಎಂದು ಹೇಳಿದ್ದಾರೆ.

ನಟ ಬಾಲಕೃಷ್ಣ ಅವರ ಅನ್‌ಸ್ಟಾಪಬಲ್ ವಿತ್ ಎನ್‌ಬಿಕೆ ಟಾಕ್ ಶೋನ ಇತ್ತೀಚಿನ ಪ್ರೊಮೊವೊಂದು ರಿಲೀಸ್‌ ಆಗಿದ್ದು, ಅದರಲ್ಲಿ ಅಲ್ಲು ಅರ್ಜುನ್‌ಗೆ ಅತಿಥಿಯಾಗಿ ಆಗಮಿಸಿದ್ದಾರೆ. ಈ ವೇಳೆ ಹಲವು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ. ಅನ್‌ಸ್ಟಾಪಬಲ್ ವಿತ್ ಎನ್‌ಬಿಕೆ ಸೀಸನ್ 4 ರ ಇತ್ತೀಚಿನ ಪ್ರೋಮೋದಲ್ಲಿ, ಬಾಲಕೃಷ್ಣ ಅರ್ಜುನ್‌ಗೆ, “ನಿಮಗೆ ರಾಷ್ಟ್ರ ಪ್ರಶಸ್ತಿ ಬಂದ ತಕ್ಷಣ ಹೇಗನಿಸಿತು?” ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಅವರು, ನಾನು ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿಗಳ ಪಟ್ಟಿಯನ್ನು ಪರಿಶೀಲಿಸಿದ್ದೇನೆ ಮತ್ತು ಯಾವುದೇ ತೆಲುಗಿನ ಯಾವೊಬ್ಬ ನಟನಿಗೂ ಈ ಪ್ರಶಸ್ತಿ ಲಭಿಸಿಲ್ಲ ಎಂಬುದು ನನಗೆ ತಿಳಿಯಿತು. ಅದನ್ನು ನೋಡಿ ನನಗೆ ನೋವಾಯಿತು. ಅಂದೇ ನಾನು ಹೇಗಾದರೂ ಸರಿ ನಾನು ರಾಷ್ಟ್ರೀಯ ಪ್ರಶಸ್ತಿ ಪಡೆಯಬೇಕೆಂದು ನಿರ್ಧರಿಸಿದೆ ಎಂದು ಹೇಳಿದರು.

ಇನ್ನು ಈ ಸಂಚಿಕೆಯಲ್ಲಿ ಅರ್ಜುನ್ ಅವರ ತಾಯಿ ನಿರ್ಮಲಾ ಅಲ್ಲು ಅವರು ಕೂಡ ಭಾಗಿಯಾಗಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಸಂಚಿಕೆಯು ನವೆಂಬರ್ 15 ರಂದು ಆಹಾದಲ್ಲಿ ಪ್ರಸಾರವಾಗಲಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ದುಲ್ಕರ್ ಸಲ್ಮಾನ್, ಮೀನಾಕ್ಷಿ ಚೌಧರಿ, ನಾಗ ವಂಶಿ, ಸೂರ್ಯ ಮತ್ತು ಬಾಬಿ ಡಿಯೋಲ್ ಇದುವರೆಗೆ ಕಾರ್ಯಕ್ರಮಕ್ಕೆ ಅತಿಥಿಗಳಾಗಿದ್ದಾರೆ. ಅಲ್ಲು ಅರ್ಜುನ್ ಅವರ ಪುಷ್ಪ: ದಿ ರೈಸ್‌ನ ಚಿತ್ರ ಡಿಸೆಂಬರ್ 5 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ರಶ್ಮಿಕಾ ಮಂದಣ್ಣ ಮತ್ತು ಫಹಾದ್ ಫಾಸಿಲ್ ಮೊದಲಾದವರು ಮುಖ್ಯ ಭೂಮಿಕೆಯಲ್ಲಿದ್ದಾರೆ.

ಈ ಸುದ್ದಿಯನ್ನೂ ಓದಿ: Pushpa 2: ಅಲ್ಲು ಅರ್ಜುನ್‌ ಜತೆ ಸೊಂಟ ಬಳುಕಿಸಿದ ಶ್ರೀಲೀಲಾ; ‘ಪುಷ್ಪ 2’ ಚಿತ್ರದ ವಿಶೇಷ ಹಾಡಿನ ಫೋಟೊ ಲೀಕ್‌