ಮುಂಬೈ: ಬಾಲಿವುಡ್ ಹೀರೊ ಅಮೀರ್ ಖಾನ್ (Amir Khan) ನಟನೆಯಲ್ಲಿ ಮಾತ್ರ ಅಲ್ಲ ಚಿತ್ರ ನಿರ್ಮಾಣದಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ಅವರ ನಿರ್ಮಾಣದಲ್ಲಿ ಮೂಡಿ ಬಂದಿರುವ ಲಾಪತಾ ಲೇಡಿಸ್ (Laapataa Ladies) ಸಿನಿಮಾ ಆಸ್ಕರ್ ಪ್ರಶಸ್ತಿಗೆ (Oscar Award) ನಾಮ ನಿರ್ದೇಶನಗೊಂಡಿದೆ. ಇದೀಗ ಅಮೀರ್ ಖಾನ್ ತಮ್ಮ ಕನಸಿನ ಯೋಜನೆಯಾದ ಮಹಾಭಾರತದ (Mahabharat) ಬಗ್ಗೆ ಮಾತನಾಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಹೆಚ್ಚಿನ ಚಲನಚಿತ್ರಗಳನ್ನು ನಿರ್ಮಿಸುವ ಬಗ್ಗೆ, ಹೊಸ ಪ್ರತಿಭೆಗಳನ್ನು ಉತ್ತೇಜಿಸುವ ಬಗ್ಗೆ ಮಾತನಾಡಿದ್ದಾರೆ. ನಿರೂಪಕರು ಅವರ ಮುಂದಿನ ಯೋಜನೆಗಳ ಬಗ್ಗೆ ಕೇಳಿದಾಗ ನಾನು ಇನ್ನೂ ಸಾಕಷ್ಟು ಚಿತ್ರಗಳನ್ನು ನಿರ್ಮಿಸಲು ಮತ್ತು ಯುವ ಪ್ರತಿಭೆಗಳಿಗೆ ಅವಕಾಶ ನೀಡಲು ಬಯಸುತ್ತೇನೆ. ನಟನೆಯನ್ನು ಮುಂದುವರಿಸುತ್ತೇನೆ. ನಾನು ಸಾಮಾನ್ಯವಾಗಿ 2-3 ವರ್ಷಗಳಲ್ಲಿ 1 ಚಿತ್ರ ಮಾಡುತ್ತಿದ್ದೆ. ಆದರೆ ಇನ್ನು ಮುಂದೆ ನನ್ನ ನಿರ್ಮಾಣದಲ್ಲಿ ವರ್ಷಕ್ಕೊಂದು ಚಲನ ಚಿತ್ರ ಬಿಡುಗಡೆಯಾಗುತ್ತದೆ ಎಂದು ಹೇಳಿದ್ದಾರೆ. ಒಬ್ಬ ನಟನಾಗಿ ಆದರೆ ಮುಂದಿನ ದಶಕದಲ್ಲಿ, ನಾನು ಇಷ್ಟಪಡುವ ಕಥೆಗಳೊಂದಿಗೆ ಇನ್ನೂ ಹೆಚ್ಚಿನ ಚಲನಚಿತ್ರಗಳನ್ನು ನಿರ್ಮಿಸುವ ಭರವಸೆ ಇದೆ ಎಂದು ಅವರು ಹೇಳಿದ್ದಾರೆ.
ಕನಸಿನ ಯೋಜನೆ ಮಹಾಭಾರತ
ಮುಂದೆ ಮಹಾಭಾರತದ ಮೇಲೆ ಸಿನಿಮಾ ಮಾಡುವ ಕುರಿತು ಮಾತನಾಡಿದ ಅವರು, ಇದು ನನ್ನ ಕನಸಿನ ಯೋಜನೆ ಮತ್ತು ಇದು ತುಂಬಾ ಭಯಾನಕ ಯೋಜನೆಯಾಗಿದೆ. ಈ ಯೋಜನೆ ತುಂಬಾ ದೊಡ್ಡದಾಗಿದ್ದು, ಅದನ್ನು ತೆರೆ ಮೇಲೆ ತರಲು ನಿಜಕ್ಕೂ ನಾನು ಭಯಭೀತನಾಗಿದ್ದೇನೆ. ಮಹಾಭಾರತ ಚಿತ್ರ ನಿರ್ಮಾಣ ಮಾಡಿದರೆ ಅದು ನನ್ನ ಅತೀ ದೊಡ್ಡ ಜವಾಬ್ದಾರಿಯಾಗುತ್ತದೆ. ಮಹಾಭಾರತ ಭಾರತೀಯ ಮಹಾಕಾವ್ಯಗಳಲ್ಲಿ ಒಂದು. ಅದು ನಮ್ಮ ರಕ್ತದಲ್ಲಿಯೇ ಇದೆ. ಜನರಿಗೆ ಹತ್ತಿರವಾಗುವಂತೆ ತೆರೆ ಮೇಲೆ ತರಬೇಕು. ಮುಂದೆ ಅದರ ಬಗ್ಗೆ ಯೋಚನೆಯಿದೆ ಎಂದು ಅವರು ಹೇಳಿದ್ದಾರೆ.
2018 ರಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬರಹಗಾರ ಅಂಜುಮ್ ರಾಜಬಲಿ ಅವರು ಮಾಧ್ಯಮಗಳಿಗೆ ಅಮೀರ್ ಖಾನ್ ಮಹಾಭಾರತವನ್ನು ಆಧರಿಸಿದ ಹೆಚ್ಚಿನ ಬಜೆಟ್ ಚಲನಚಿತ್ರವನ್ನು ಮಾಡುವ ಮಹತ್ವಾಕಾಂಕ್ಷೆಯ ಆಲೋಚನೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದರು.
ಅಮೀರ್ ಖಾನ್ ಅವರ ಕೊನೆಯ ಚಿತ್ರ ಲಾಲ್ ಸಿಂಗ್ ಚಡ್ಡಾ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾದ ನಂತರ ನಟನೆಯಿಂದ ವಿರಾಮ ತೆಗೆದುಕೊಂಡರು. ಈಗ ಸಿತಾರೆ ಜಮೀನ್ ಪರ್ ಚಿತ್ರದ ಮೂಲಕ ಪುನರಾಗಮನವನ್ನು ಮಾಡಲು ಸಿದ್ಧರಾಗಿದ್ದಾರೆ. ಚಿತ್ರದಲ್ಲಿ ಅಮೀರ್, ದರ್ಶೀಲ್ ಸಫಾರಿ ಮತ್ತು ಜೆನಿಲಿಯಾ ದೇಶಮುಖ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಪ್ರಸ್ತುತ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದ್ದು 2025 ರಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದೆ.
ಈ ಸುದ್ದಿಯನ್ನೂ ಓದಿ : Pushpa 2 Collection: ಬಾಕ್ಸ್ ಆಫೀಸ್‌ನಲ್ಲಿ ಕೊಂಚ ತಗ್ಗಿದ ‘ಪುಷ್ಪ 2’ ಕಲೆಕ್ಷನ್; 2 ದಿನದ ಗಳಿಕೆ ಎಷ್ಟು?