Wednesday, 30th October 2024

Ananya Panday birthday: ಮತ್ತೆ ಪ್ರೀತಿಯಲ್ಲಿ ಬಿದ್ರಾ ಅನನ್ಯಾ? ಗುಟ್ಟು ಬಿಟ್ಟುಕೊಟ್ಟ ಅಮೆರಿಕನ್‌ ಮಾಡೆಲ್‌ ಬಾಯ್‌ಫ್ರೆಂಡ್

Ananya Panday birthday

ಮುಂಬೈ: ಬುಧವಾರ ಅಕ್ಟೋಬರ್ 30 ರಂದು ಬಾಲಿವುಡ್‌ ನಟಿ ಅನನ್ಯಾ ಪಾಂಡೆ(  Ananya Panday birthday) ತಮ್ಮ 26 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸ್ನೇಹಿತರು ಹಾಗೂ ಕುಟುಂಬದವರು ಸೇರಿದಂತೆ ಅನೇಕ ಮಂದಿ ಅನನ್ಯಾ ಹುಟ್ಟು ಹಬ್ಬಕ್ಕೆ ಶುಭ ಕೋರಿದ್ದಾರೆ. ಅದರಲ್ಲಿ ಒಂದು ಶುಭಾಶಯ ಮಾತ್ರ ವಿಶೇಷವಾಗಿ ಎಲ್ಲರ ಗಮನ ಸೆಳೆಯುತ್ತಲಿದ್ದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

26 ನೇ ವರ್ಷಕ್ಕೆ ಕಾಲಿಡುತ್ತಿರುವ ನಟಿ ಅನನ್ಯಾ ಪಾಂಡೆ ತಮ್ಮ ಆಪ್ತ ಸ್ನೇಹಿತ, ಅಮೆರಿಕನ್ ಮಾಡೆಲ್ ವಾಕರ್ ಬ್ಲಾಂಕೊ (Walker Blanco ) ಅವರಿಂದ ವಿಶೇಷವಾದ ಹುಟ್ಟುಹಬ್ಬದ ಶುಭಾಶಯ ಸ್ವೀಕರಿಸಿದ್ದಾರೆ. ಅನನ್ಯಾ ಮತ್ತು ವಾಕರ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಎಲ್ಲೆಡೆ ಹರಿದಾಡುತ್ತಿದೆ. ಈ ಮಧ್ಯೆ ವಾಕರ್‌ ಬ್ಲಾಂಕೊ ಅನನ್ಯಾ ಹುಟ್ಟಿದ ಹಬ್ಬಕ್ಕೆ ಇನ್ಸ್ಟಾಗ್ರಾಂ ಸ್ಟೋರಿ (Walker Blanco insta story) ಹಾಕಿದ್ದು, “ಯು ಆರ್‌ ಸೋ ಬ್ಯೂಟಿಫುಲ್‌, ನೀನು ನನಗೆ ತುಂಬಾ ವಿಶೇಷ ಐ ಲವ್‌ ಯು ಅನ್ನಿ”( “Happy birthday beautiful. You are so special. I love you, Anniee!”) ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Father Movie: ಡಾರ್ಲಿಂಗ್ ಕೃಷ್ಣ, ಪ್ರಕಾಶ್ ರಾಜ್ ನಟನೆಯ ‘ಫಾದರ್’ ಸಿನಿಮಾ ಚಿತ್ರೀಕರಣ ಅಂತಿಮ ಹಂತದಲ್ಲಿ

ಈ ವರ್ಷದ ಆರಂಭದಲ್ಲಿ ನೀತಾ ಮತ್ತು ಮುಖೇಶ್ ಅಂಬಾನಿ ಆಯೋಜಿಸಿದ್ದ ಕ್ರೂಸ್ ಪಾರ್ಟಿಯಲ್ಲಿ ಇಬ್ಬರೂ ಭೇಟಿಯಾಗಿದ್ದರು. ಅಲ್ಲಿಂದಾಚೆಗೆ ಇಬ್ಬರು ಡೇಟಿಂಗ್‌ ನಡೆಸುತ್ತಿದ್ದಾರೆಂದು ಎಲ್ಲೆಡೆ ಸುದ್ದಿಯಾಗಿತ್ತು. ಆದರೆ ಎಲ್ಲೆಯೂ ಹೇಳಿಕೊಂಡಿರಲಿಲ್ಲ. ಇದೀಗ ವಾಕರ್ ಬ್ಲಾಂಕೊ ಐ ಲವ್‌ ಯು ಎಂದು ಹೇಳಿದ್ದು ಅಭಿಮಾನಿಗಳು ಇದು ಪ್ರೀತಿಯ ಅಧಿಕೃತ ಘೋಷಣೆ ಎಂದು ಹೇಳುತ್ತಿದ್ದಾರೆ.

ಅನನ್ಯ ನಟನೆಯ Ctrl ಚಿತ್ರ ಬಿಡುಗಡೆಯಾದಾಗ ವಾಕರ್‌ ಅನನ್ಯಾ ನಟನೆಯನ್ನು ಹೊಗಳಿದ್ದರು ಹಾಗೂ ಟ್ರೇಲರನ್ನು ಹಂಚಿಕೊಂಡಿದ್ದರು. ನಂತರ ಅನನ್ಯಾ ಪಾಂಡೆ ತಮ್ಮ ಕತ್ತಲ್ಲಿ ʼಡಬ್ಲುʼ ಚಿಹ್ನೆಯನ್ನು ಧರಿಸಿದ್ದು ಪ್ರೀತಿಗೆ ಪುಷ್ಟಿ ನೀಡಿದ್ದರು. ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್‌ ಮದುವೆಯಲ್ಲಿ ಇಬ್ಬರು ಪರಸ್ಪರ ಹತ್ತಿರವಾಗಿ ನಂತರ ಪ್ರೀತಿ ಶುರುವಾಯಿತು ಎಂದು ಹೇಳಲಾಗುತ್ತಿದೆ.

ವಾಕರ್ ಬ್ಲಾಂಕೊ ಸದ್ಯ ಜಾಮ್‌ ನಗರದಲ್ಲಿ ವಾಸವಾಗಿದ್ದಾರೆ. ಮಾಡೆಲಿಂಗ್‌ ಜೊತೆಗೆ ಅಂಬಾನಿ ಒಡೆತನದ ಪ್ರಾಣಿಗಳಿಗಾಗಿ ನಿರ್ಮಿಸಿದ ಆಶ್ರಯ ಧಾಮದಲ್ಲಿ ಕೆಲಸ ಮಾಡುತ್ತಿದ್ದಾರೆ. ಲವ್ ಬರ್ಡ್ಸ್ ಒಬ್ಬರನ್ನೊಬ್ಬರು ರಹಸ್ಯವಾಗಿ ಭೇಟಿಯಾಗುವುದಲ್ಲದೆ ವೆಕೇಶನ್ ಎಂಜಾಯ್ ಮಾಡೋದಕ್ಕೆ ವಿದೇಶಕ್ಕೂ ಜೊತೆಯಾಗಿ ಹೋಗುತ್ತಿದ್ದರು. ಇವರಿಬ್ಬರೂ ವಿದೇಶದಲ್ಲಿ ಸುತ್ತಾಡಿರುವ ಫೋಟೊ ಸೋಷಿಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಕಳೆದ ಎರಡು ವರ್ಷಗಳಿಂದ ಡೇಟ್‌ ಮಾಡುತ್ತಿದ್ದ ಜೋಡಿ ಈ ವರ್ಷದ ಆರಂಭದಲ್ಲಿ ಬೇರ್ಪಟ್ಟಿವೆ.