Friday, 22nd November 2024

Anti Smoking Ad: ಇನ್ನು ಮುಂದೆ ಸಿನಿಮಾ ಆರಂಭಕ್ಕೆ ಮೊದಲು ಅಕ್ಷಯ್ ಕುಮಾರ್ ಇರುವ ಧೂಮಪಾನ ವಿರೋಧಿ ಜಾಹೀರಾತು ಇರುವುದಿಲ್ಲ; ಯಾಕೆ ಗೊತ್ತಾ?

Anti Smoking Ad

ಧೂಮಪಾನದ ದೃಶ್ಯವನ್ನು (Anti Smoking Ad) ಒಳಗೊಂಡಿದ್ದ ಬಾಲಿವುಡ್ ನಟ (bollywood) ಅಕ್ಷಯ್ ಕುಮಾರ್ (Akshay Kumar) ಅವರ ಜಾಹೀರಾತನ್ನು (advertisement) ಆರು ವರ್ಷಗಳ ಬಳಿಕ ಸ್ಥಗಿತಗೊಳಿಸಲಾಗಿದೆ. ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಜನಪ್ರಿಯ ಧೂಮಪಾನ ವಿರೋಧಿ ಈ ಜಾಹೀರಾತನ್ನು ಬದಲಾಯಿಸಿದೆ ಎನ್ನಲಾಗಿದೆ. ನಟ ಅಕ್ಷಯ್ ಕುಮಾರ್ ಅಭಿನಯದ ನಂದು ಧೂಮಪಾನ ನಿಷೇಧ ಜಾಹೀರಾತನ್ನು ಹೊಸ ಜಾಹೀರಾತಿನೊಂದಿಗೆ ಬದಲಾಯಿಸಲಾಗಿದೆ. ಈ ಹಿಂದೆ ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರಾರಂಭಕ್ಕೂ ಮೊದಲು ಮತ್ತು ಮಧ್ಯದಲ್ಲಿ ನಂದು ಧೂಮಪಾನ ವಿರೋಧಿ ಜಾಹೀರಾತನ್ನು ತೋರಿಸಲಾಗುತ್ತಿತ್ತು.

ಸೆಪ್ಟೆಂಬರ್ ತಿಂಗಳಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್‌ನಿಂದ ಅಕ್ಷಯ್ ಕುಮಾರ್ ಅವರ ಧೂಮಪಾನ ವಿರೋಧಿ ಜಾಹೀರಾತನ್ನು ನಿಲ್ಲಿಸಲು ನಿರ್ಧಾರ ಕೈಗೊಳ್ಳಲಾಗಿತ್ತು. ಅದನ್ನು ಹೊಸ ಜಾಹೀರಾತಿಗೆ ಬದಲಾಯಿಸಲಾಗುತ್ತದೆ. ತಂಬಾಕು ತ್ಯಜಿಸುವುದರಿಂದ 20 ನಿಮಿಷಗಳಲ್ಲಿ ದೇಹದಲ್ಲಿ ಯಾವ ರೀತಿಯಲ್ಲಿ ಬದಲಾವಣೆಗಳು ಕಾರಣವಾಗಬಹುದು ಎಂಬುದನ್ನು ಹೊಸ ಜಾಹೀರಾತಿನಲ್ಲಿ ತೋರಿಸಲಾಗಿದೆ.

ಆಲಿಯಾ ಭಟ್ ಅಭಿನಯದ ʼಜಿಗ್ರಾʼ ಮತ್ತು ರಾಜ್‌ಕುಮಾರ್ ರಾವ್ ಮತ್ತು ತೃಪ್ತಿ ದಿಮ್ರಿಯ ʼವಿಕ್ಕಿ ಔರ್ ವಿದ್ಯಾ ಕಾ ವೋ ವಾಲಾʼ ಚಿತ್ರ ಸೇರಿದಂತೆ ಕಳೆದ ಶುಕ್ರವಾರ ಬಿಡುಗಡೆಯಾದ ಹೊಸ ಚಿತ್ರಗಳಲ್ಲಿ ಈ ಹೂಸ ಜಾಹೀರಾತನ್ನು ಪ್ರದರ್ಶಿಸಲಾಗಿದೆ. ನಂದು ಜಾಹೀರಾತನ್ನು ತೆಗೆದುಹಾಕಲು ಕಾರಣವನ್ನು ಸ್ಪಷ್ಟಪಡಿಸಲಾಗಿಲ್ಲ. 2012ರಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಜೊತೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಚಲನಚಿತ್ರದ ಆರಂಭದ ಮೊದಲು ಮತ್ತು ಮಧ್ಯದಲ್ಲಿ ಧೂಮಪಾನ ವಿರೋಧಿ ಜಾಹೀರಾತುಗಳನ್ನು ಪ್ರಸಾರ ಮಾಡಬೇಕೆಂದು ಕಡ್ಡಾಯಗೊಳಿಸಿತು.

2018ರಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಹೊಸ ಸೂಚನೆಗಳನ್ನು ನೀಡಿತು. ಅಕ್ಷಯ್ ಕುಮಾರ್ ಮತ್ತು ಅಜಯ್ ಸಿಂಗ್ ಪಾಲ್ ಅವರನ್ನು ಒಳಗೊಂಡಿರುವ ಜಾಹೀರಾತನ್ನು ಚಲನಚಿತ್ರಗಳೊಂದಿಗೆ ತೋರಿಸಬೇಕು ಎಂದು ಹೇಳಿತ್ತು. ಅಕ್ಷಯ್ ಕುಮಾರ್ ಅವರ 2018ರಲ್ಲಿ ಸ್ವಾತಂತ್ರ್ಯ ದಿನ ಬಿಡುಗಡೆಯಾದ “ಗೋಲ್ಡ್” ಚಿತ್ರದೊಂದಿಗೆ ಈ ಜಾಹೀರಾತನ್ನು ಮೊದಲು ತೋರಿಸಲಾಯಿತು.

ಜಾಹೀರಾತಿನಲ್ಲಿ ಅಕ್ಷಯ್ ಕುಮಾರ್ ಧೂಮಪಾನವನ್ನು ನಿಲ್ಲಿಸಿ ಮತ್ತು ಸಿಗರೇಟ್‌ನಲ್ಲಿ ಉಳಿಸಿದ ಹಣದಿಂದ ಹೆಂಡತಿಗೆ ಸ್ಯಾನಿಟರಿ ಪ್ಯಾಡ್ ಖರೀದಿಸಲು ಬಳಸುವಂತೆ ನಂದುಗೆ ಸಲಹೆ ನೀಡುವುದು ಇದೆ. ಆಸ್ಪತ್ರೆಯ ಹೊರಗೆ ಸಿಗರೇಟ್ ಸೇದುತ್ತಿರುವ ನಂದು ಪಾತ್ರವನ್ನು ಅಜಯ್ ಸಿಂಗ್ ಪಾಲ್ ನಿರ್ವಹಿಸಿದ್ದಾರೆ.

Shivarajkumar: ಕುತ್ತಾರಿನ ಕೊರಗಜ್ಜ ದೈವದ ದರ್ಶನ ಪಡೆದ ಶಿವರಾಜ್‌ಕುಮಾರ್‌ ದಂಪತಿ

ನಂದು ಜಾಹೀರಾತು ತೆಗೆದು ಹಾಕಿರುವ ಕುರಿತು ಮಲ್ಟಿಪ್ಲೆಕ್ಸ್‌ನ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ ಇದು ನನ್ನ ನೆಚ್ಚಿನ ಧೂಮಪಾನ ವಿರೋಧಿ ಜಾಹೀರಾತು. ಯಾಕೆಂದರೆ ಇದು ಯಾವುದೇ ಗೊಂದಲದ ದೃಶ್ಯಗಳಿಲ್ಲದೆ ಪ್ರಮುಖ ಸಂದೇಶವನ್ನು ನೀಡಿತು. ಚಿತ್ರಪ್ರೇಮಿಗಳು ಜಾಹೀರಾತಿನ ಸಂಭಾಷಣೆಯನ್ನು ಪುನರಾವರ್ತಿಸುವುದನ್ನು ನೋಡುವುದು ಸಹ ವಿನೋದಮಯವಾಗಿತ್ತು. ಆರು ವರ್ಷಗಳಿಂದ ನಿರಂತರವಾಗಿ ಈ ಜಾಹೀರಾತನ್ನು ವೀಕ್ಷಿಸುತ್ತಿರುವುದಾಗಿ ಅವರು ಹೇಳಿದ್ದಾರೆ.