Wednesday, 18th December 2024

BBK 11: ಅನುಷಾ ರೈ ತಲೆಗೆ ಬಡಿದ ಚೈತ್ರಾ ಕುಂದಾಪುರ: ಬಿಗ್ ಬಾಸ್ ಮನೆ ಮತ್ತೆ ರಣರಂಗ

Anusha vs Chaithra

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ರೋಚಕತೆ ಸೃಷ್ಟಿಸುತ್ತಿದೆ. ಕಳೆದ ವಾರ ಮನೆಯಲ್ಲಿ ಸಣ್ಣ-ಪುಟ್ಟ ಜಗಳ ಬಿಟ್ಟರೆ ದೊಡ್ಡ ಮಟ್ಟದಲ್ಲಿ ಯಾವುದೇ ರೇಗಾಟ ನಡೆಯಲಿಲ್ಲ. ಸೋಮವಾರದಿಂದ ಶುಕ್ರವಾರದ ವರೆಗೆ ಎಲ್ಲರೂ ಭಾವುಕರಾಗಿದ್ದರು. ಆದರೆ, ಈ ವಾರ ಮನೆ ಮತ್ತೆ ರಣರಂಗವಾಗಿದೆ. ತ್ರಿವಿಕ್ರಮ್- ಮೋಕ್ಷಿತಾ ಪೈ ಜಗಳ ತಾರಕಕ್ಕೇರಿದೆ. ಇದರ ನಡುವೆ ಅನುಷಾ ರೈ ಮತ್ತು ಚೈತ್ರಾ ಕುಂದಾಪುರ ನಡುವೆ ಕೂಡ ಜಗಳ ನಡೆದಿದೆ.

ಶೋ ಆರಂಭದಲ್ಲಿ ಅನುಷಾ ಹಾಗೂ ಚೈತ್ರಾ ಇಬ್ಬರೂ ನರಕದಲ್ಲಿ ಇದ್ದರು. ಇಬ್ಬರ ಮಧ್ಯೆ ಒಳ್ಳೆಯ ಗೆಳೆತನ ಇತ್ತು. ಆದರೆ, ಈಗ ಸಣ್ಣ ವಿಚಾರಕ್ಕೆ ದೊಡ್ಡ ಕಿರಿಕ್ ಆಗಿದೆ. ಚೈತ್ರಾ ಕುಂದಾಪುರ ಅವರು ಹಾಸ್ಯಕ್ಕಾಗಿ ಅನುಷಾ ಅವರ ತಲೆಗೆ ಹೊಡೆದಿದ್ದಾರೆ. ಇದು ಅನುಷಾ ಅವರನ್ನು ಕೆರಳಿಸಿದೆ. ಈ ವಿಚಾರಕ್ಕೆ ಸಂಬಂಧಿಸಿ ದೊಡ್ಡ ಕಿರಿಕ್ ಆಗಿದೆ.

ಈ ವಾರದ ಮೊದಲ ದಿನ ಬಿಗ್ ಬಾಸ್ ಮನೆ ಮಂದಿಗೆ ಪಗಡೆ ಆಟ ನೀಡಿದ್ದಾರೆ. ಇದಕ್ಕೆ ಮೂರು ಜನರಿರುವಂತಹ ನಾಲ್ಕು ಗುಂಪುಗಳನ್ನು ರಚಿಸಲಾಗಿದೆ. ಪಗಡೆ ಆಟದ 4 ಮೂಲೆಗೂ ಒಂದೊಂದು ಗುಂಪನ್ನು ನಿಲ್ಲಿಸಲಾಗಿದೆ. ಚೈತ್ರ ಕಾಯಿ ಚಲಾಯಿಸುವಾಗ, ಎದುರಾಳಿ ತಂಡದಿಂದ ಒಬ್ಬರನ್ನು ಉಳಿಸಿ ಎಂಬ ಸಾಲುಗಳು ಬರೆದಿರುತ್ತದೆ. ಆಗ ಚೈತ್ರ ಅವರು ಗೌತಮಿ, ತ್ರಿವಿಕ್ರಂ ಹಾಗೂ ಅನುಷಾ ಅವರು ಇರುವ ಗುಂಪಿನಿಂದ ಗೌತಮಿ ಅವರನ್ನು ಪಾರು ಮಾಡುತ್ತಾರೆ, ಇದೇ ವಿಚಾರವಾಗಿ ಟಾಸ್ಕ್ ಮುಗಿದ ಬಳಿಕ ಅನುಷಾ ಹಾಗೂ ಚೈತ್ರ ನಡುವೆ ಮಾತಿನ ಚಕಮಕಿ ನಡೆದಿದೆ.

ಸೋಫಾದ ಮೇಲೆ ಅನುಷಾ, ಭವ್ಯಾ ಗೌಡ, ತ್ರಿವಿಕ್ರಮ್ ಹಾಗೂ ಧರ್ಮ ಅವರು ಒಟ್ಟಿಗೆ ಮಾತನಾಡುತ್ತಿರುವಾಗ ಅಲ್ಲಿಗೆ ಚೈತ್ರಾ ಕುಂದಾಪುರ ಬರುತ್ತಾರೆ. ಆಗ ಅನುಷಾ ಅವರು, ನಾವೆಲ್ಲರೂ ನಿಮ್ಮ ಕಣ್ಣಿಗೆ ಕಾಣಿಸಲಿಲ್ಲವಾ ಗೌತಮಿ ಅವರನ್ನು ಸೇವ್ ಮಾಡಿದ್ದೀರಿ ಎಂದು ಚೈತ್ರಾಗೆ ಹೇಳುತ್ತಾರೆ. ಆಗ, ಚೈತ್ರಾ ಹೌದು ನನ್ನ ಕಣ್ಣಿಗೆ ಕಾಣಿಸಿದರೂ ಕಾಣಿಸದಿರುವವರ ತರಹ ಆಟವಾಡ್ತೇನೆ ಎಂದು ಹೇಳುತ್ತಾರೆ. ಆಗ ಬ್ಯಾಡ ಕಣ್ಣವ್ವಾ ನಮಗೆಲ್ಲಾ ಯಾಕೆ ಎಂದು ಅನುಷಾ ಹೇಳುತ್ತಾರೆ. ಆಗ ತಮಾಷೆಗೆ ಚೈತ್ರಾ ಅವರು ಅನುಷಾ ಅವರ ತಲೆಯ ಮೇಲೆ ಒಂದು ಬಾರಿ ಹೊಡೆದಿದ್ದಾರೆ. ಆಗ ಕೋಪಗೊಂಡ ಅನುಷಾ, ಚೈತ್ರಾಗೆ ಷಟ್ ಅಪ್, ಗೆಟ್ ಲಾಸ್ಟ್ ಎಂದು ಹೇಳುತ್ತಾರೆ.

ಇದರಿಂದ ಚೈತ್ರಾ ಕೂಡ ಕೋಪಗೊಂಡಿದ್ದು, ಅಮ್ಮಾ ತಪ್ಪಾಯ್ತು ತಾಯಿ ಇನ್ಯಾವತ್ತೂ ಮಾತನಾಡುವುದಿಲ್ಲ.. ನಿಮ್ಮ ಸಹವಾಸ ಬೇಕಾಗಿಲ್ಲ. ಇದನ್ನು ನಾನು ನೆನಪಲ್ಲಿ ಇಟ್ಟುಕೊಳ್ಳುತ್ತೇನೆ ಎಂದು ಅನುಷಾಗೆ ಕೈ ಮುಗಿದು ಅಲ್ಲಿಂದ ಎದ್ದು ಹೋಗುತ್ತಾರೆ. ಇದಕ್ಕೆ ಅನುಷಾ ಅವರು ನಿನಗೆ ಯಾರು ಕೇರ್ ಮಾಡೊಲ್ಲ ಎಂದು ತಿರುಗೇಟು ನೀಡಿದ್ದಾರೆ.

BBK 11: ಇತಿಹಾಸ ನಿರ್ಮಿಸಿದ ವಾರದ ಕತೆ ಕಿಚ್ಚನ ಜೊತೆ: ದಾಖಲೆಯ 12.3 ಟಿವಿಆರ್ ಗಳಿಸಿದ ಬಿಗ್ ಬಾಸ್