Wednesday, 20th November 2024

AR Rahman Divorce: ಸಂಗೀತ ಮಾಂತ್ರಿಕನ ವೈವಾಹಿಕ ಬದುಕಿನಲ್ಲಿ ಬಿರುಕು, ವಿಚ್ಛೇದನದ ಬಗ್ಗೆ ಮಕ್ಕಳು ಹೇಳಿದ್ದೇನು?

AR Rahman Divorce

ಮುಂಬೈ : ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಮತ್ತು ಪತ್ನಿ ಸಾಯಿರಾ (Saira Banu) ಬಾನು 29 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ತಾವು ವಿಚ್ಛೇದನ ಪಡೆಯುತ್ತಿರುವುದಾಗಿ (AR Rahman Divorce) ಮಂಗಳವಾರ ಸಂಜೆ ಘೋಷಿಸಿದರು. ಈ ವಿಷಯ ಕೇಳಿ ಸಂಗೀತ ಮಾಂತ್ರಿಕನ ಅಭಿಮಾನಿಗಳು ಶಾಕ್‌ ಆಗಿದ್ದರು. ಇದೀಗ ಎ ಆರ್ ರೆಹಮಾನ್ ಅವರ ಮೂರು ಮಕ್ಕಳು ತಮ್ಮ ತಂದೆ ತಾಯಿಯ ವಿಚ್ಛೇದನದ ಕುರಿತು ಮೌನ ಮುರಿದಿದ್ದಾರೆ. ಅವರ ಗೌಪ್ಯತೆಯನ್ನು ಕಾಪಾಡುವಂತೆ ಅಭಿಮಾನಿಗಳ ಬಳಿ ಮನವಿ ಮಾಡಿದ್ದಾರೆ.

ಮಂಗಳವಾರ ಸಂಜೆ ಸಾಯಿರಾ ಬಾನು ಪರ ವಕೀಲೆ ವಂದನಾ ಶಾ ದಂಪತಿಯ ವಿಚ್ಚೇದನ ಕುರಿತು ಹೇಳಿದ್ದರು. ನಂತರ ಈ ಸುದ್ದಿಯನ್ನು ಖಚಿತಪಡಿಸಲು ಎ ಆರ್ ರೆಹಮಾನ್ ವಿಚ್ಛೇದನದ ಕುರಿತು ವಿಡಿಯೋವೊಂದನ್ನು ಪೋಸ್ಟ್‌ ಮಾಡಿ ನಾನು ಮತ್ತು ನನ್ನ ಪತ್ನಿ ದೂರವಾಗುತ್ತಿದ್ದೇವೆ ಎಂದು ಹೇಳಿದ್ದರು. ಅದೇ ದಿನ ರಾತ್ರಿ ಮಕ್ಕಳಾದ ಖತೀಜಾ, ಅಮೀನ್ ಮತ್ತು ರಹೀಮ್ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿ ಈ ಸಮಯದಲ್ಲಿ ನಮ್ಮ ಗೌಪ್ಯತೆ ಕಾಪಾಡಲು ನಿಮ್ಮೆಲ್ಲರಲ್ಲಿ ವಿನಂತಿಸಿಕೊಳ್ಳುತ್ತೇವೆ, ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ ಎಂದು ಹೇಳಿದ್ದಾರೆ.

ಎಆರ್ ರೆಹಮಾನ್ ಮತ್ತು ಸಾಯಿರಾ 1995 ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಮೂರು ಮಕ್ಕಳಿದ್ದಾರೆ. ರೆಹಮಾನ್ ಮತ್ತು ಸೈರಾ ಅವರದ್ದು ಹಿರಿಯರು ನಿಶ್ಚಿಯಿಸಿದ ಮದುವೆಯಾಗಿತ್ತು. ಈ ಹಿಂದೆ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದ ಎ.ಆರ್.ರೆಹಮಾನ್ ಈ ವಿಚಾರ ತಿಳಿಸಿದ್ದರು. ತಾಯಿ ನಿಶ್ಚಯಿಸಿದ ಹುಡುಗಿಯೊಂದಿಗೆ ವಿವಾಹವಾದ ಸಂಗತಿಯನ್ನು ಅವರು ವಿವರಿಸಿದ್ದರು. ಕೆಲಸದಲ್ಲಿ ನಿರತರಾಗಿದ್ದರಿಂದ ವಧುವನ್ನು ಹುಡುಕಲು ಸಮಯವಿಲ್ಲ ಎಂದು ತಾಯಿ ಜತೆ ಹೇಳಿದ್ದನ್ನು ನೆನಪಿಸಿಕೊಂಡಿದ್ದರು. “ಆಗ ನನಗೆ 29 ವರ್ಷ ವಯಸ್ಸಾಗಿತ್ತು. ತಾಯಿ ಬಳಿ ನನಗೆ ವಧುವನ್ನು ಹುಡುಕಿಕೊಡಿ ಎಂದು ನಾನು ಕೇಳಿದ್ದೆʼʼ ಎಂಬುದಾಗಿ ಅವರು ಹೇಳಿದ್ದರು. ಸೈರಾ ಅವರು ಗುಜರಾತ್‌ ಮೂಲದವರು.

ಇದನ್ನೂ ಓದಿ : AR Rahman: ಸಂಗೀತ ಮಾಂತ್ರಿಕ ಎ.ಆರ್‌.ರೆಹಮಾನ್‌ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್‌ ಘೋಷಿಸಿದ ಪತ್ನಿ ಸೈರಾ ಬಾನು