ಸ್ಯಾಾಂಡಲ್‌ವುಡ್ ಡ್ರಗ್‌ಸ್ ಪ್ರಕರಣ
ವಿಡಿಯೋ ಕಾನ್ಫರೆನ್‌ಸ್ ಮೂಲಕ ಇಬ್ಬರು ನಟಿಯರ ವಿಚಾರಣೆ
ಎರಡೂ ಕಡೆಯ ವಾದ-ಪ್ರತಿವಾದ ಅಂತ್ಯ
ತೀರ್ಪನ್ನು ಕಾಯ್ದಿರಿಸಿದ ನ್ಯಾಯಾಧೀಶರು
ಬೆಂಗಳೂರು: ಸ್ಯಾಾಂಡಲ್‌ವುಡ್ ಡ್ರಗ್‌ಸ್ ಪ್ರಕರಣದಲ್ಲಿ ಬಂಧಿಯಾಗಿ ಸಿಸಿಬಿ ತನಿಖಾ ತಂಡದಿಂದ ಕಳೆ ದೊಂದು ವಾರದಿಂದ ವಿಚಾರಣೆಗೆ ಎದುರಿಸುತ್ತಿರುವ ಕನ್ನಡದ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರಿಗೆ ಜಾಮೀನು ನೀಡಬೇಕೋ ಅಥವಾ ಜೈಲು ಪಾಲಾಗುತ್ತಾರೋ ಎಂಬುದು ಕೆಲವೇ ಕ್ಷಣಗಳಲ್ಲಿ ತಿಳಿದು ಬರಲಿದೆ.
ವಿಡಿಯೋ ಕಾನ್ಫರೆನ್‌ಸ್ ಮೂಲಕ ಇಬ್ಬರು ನಟಿಯರ ವಿಚಾರಣೆ ನಡೆಸಲಾಯಿತು. ಸಿಸಿಬಿ ಪರ ವಕೀಲರು ತಮ್ಮ ವಾದವನ್ನು ಮಂಡಿಸುತ್ತ, ಇಬ್ಬರು ನಟಿಯರ ವಿಚಾರಣೆ ನಡೆಸುವ ಅಗತ್ಯ ಇದೆ. ರಾಗಿಣಿ ವಿಚಾರಣೆ ಇನ್ನೂ ಬಾಕಿ ಇದೆ. ಐದು ದಿನವಾದರೂ ರಾಗಿಣಿ ಇನ್ನೂ ವಿಚಾರಣೆಗೆ ಸಹಕರಿಸಿಲ್ಲ.
ಮತ್ತಷ್ಟು ದಿನಗಳ ಕಾಲ ವಿಚಾರಣೆ ಅಗತ್ಯವಿದೆ. ಡ್ರಗ್‌ಸ್ ದಂಧೆ ಬಗ್ಗೆೆ ಅವರಿಬ್ಬರ ಬಳಿ ಸಾಕಷ್ಟು ಮಾಹಿತಿ ಇದೆ. ಹೀಗಾಗಿ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುವುದು ಅಗತ್ಯವಿದೆ ಎಂದು ಸಂಜನಾ, ರಾಗಿಣಿಯವರನ್ನು 4 ದಿನ ಕಸ್ಟಡಿಗೆ ಸಿಸಿಬಿ ಪರ ಮನವಿ ಮಾಡಿದರು.
ಈ ನಡುವೆಯೇ, ತಮ್ಮ ವಾದಕ್ಕೆ ಪುಷ್ಠಿ ನೀಡುವಂತೆ ಇಬ್ಬರೂ ಕೋರ್ಟ್ ಆದೇಶಕ್ಕೆ ಗೌರವ ಕೊಡುತ್ತಿಲ್ಲ ಎಂದು ಸಿಸಿಬಿ ಇಷ್ಟು ದಿನಗಳ ನಡೆಸಿದ ತನಿಖೆಯ ಮಾಹಿತಿ ಕೋರ್ಟ್‌ಗೆ ಸಲ್ಲಿಸಿತು. ಜತೆಗೆ ಡೋಪ್ ಟೆಸ್ಟಿಿಂಗ್ ವೇಳೆ ನಡೆದ ಸಂಜನಾಳದ ರಂಪಾಟದ ವಿಡಿಯೋವನ್ನು ಕೂಡ ಕೋರ್ಟ್‌ಗೆ ಸಲ್ಲಿಸಿತು.
ಇದಕ್ಕೆ ಪ್ರತಿಯಾಗಿ ನಟಿಯರ ಪರ ವಾದ ಮಂಡಿಸಿದ ವಕೀಲರು, ಇಬ್ಬರು ನಟಿಯರ ಬಳಿ ಯಾವುದೇ ಮಾದಕ ವಸ್ತು ಸಿಕ್ಕಿಲ್ಲ. ಯಾರದ್ದೋ ಒಂದು ಹೇಳಿಕೆಯಿಂದ ಅವರನ್ನು ಬಂಧಿಸಲಾಗಿದೆ. ಅವರ ಬಳಿ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಡ್ರಗ್‌ಸ್ ದಂಧೆಯಲ್ಲಿದ್ದಾರೆ ಎನ್ನಲು ಹಾಗೂ ಮಾದಕ ವಸ್ತು ಸೇವಿಸಿರುವ ಕುರಿತು ಸಾಕ್ಷ್ಯ ಇಲ್ಲ. ಹೀಗಾಗಿ, ಹೀಗಾಗಿ ಅವರನ್ನ ಮತ್ತೆ ಕಸ್ಟಡಿಗೆ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ತಮ್ಮ ವಾದವನ್ನು ಮುಂದಿಟ್ಟರು. ಇದರೊಂದಿಗೆ ಎರಡೂ ಕಡೆಯ ವಾದ-ಪ್ರತಿವಾದ ಅಂತ್ಯಗೊಂಡಿತು.
ಇಬ್ಬರ ವಾದ -ಪ್ರತಿವಾದವನ್ನು ಪರಿಶೀಲಿಸಿದ ನ್ಯಾಯಾಧೀಶರು ತೀರ್ಪನ್ನು ಕಾಯ್ದಿರಿಸಿದರು.