Thursday, 12th December 2024

ಪುತ್ರ ಅರ್ಹಾನ್​ ಖಾನ್ ಜನ್ಮದಿನಕ್ಕೆ ಶುಭ ಕೋರಿದ ಮಲೈಕಾ ಅರೋರಾ

ಮುಂಬೈ: ಬಾಲಿವುಡ್​ ಮಾಜಿ ದಂಪತಿ ಮಲೈಕಾ ಅರೋರಾ ಮತ್ತು ಅರ್ಬಾಜ್​ ಖಾನ್​ ಅವರ ಪುತ್ರ ಅರ್ಹಾನ್​ ಖಾನ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ.

ಪುತ್ರ ಅರ್ಹಾನ್​ ಖಾನ್ ಜನ್ಮದಿನಕ್ಕೆ ನಟಿ ಮಲೈಕಾ ಅರೋರಾ ವಿಡಿಯೋ ಹಂಚಿಕೊಂಡು ಪ್ರೀತಿಯ ಶುಭಾಶಯ ಕೋರಿದ್ದಾರೆ.

ನ. 9ರಂದು ಸ್ಟಾರ್​ ಕಿಡ್​ 21ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆ ಮಲೈಕಾ ಅರೋರಾ, ಮಗನಿಗೆ ಜನ್ಮದಿನದ ಪ್ರೀತಿಯ ಸಂದೇಶದೊಂದಿಗೆ ಅವರ ಬಾಲ್ಯ ಮತ್ತು ಇತ್ತೀಚಿನ ಫೋಟೋಗಳನ್ನು ಒಳಗೊಂಡಿರುವ ಹೃದಯಸ್ಪರ್ಶಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಅರ್ಹಾನ್​ ಖಾನ್ ಅವರ​ ಬಾಲ್ಯ, ಇತ್ತೀಚಿನ ಫೋಟೋಗಳನ್ನೇ ವಿಡಿಯೋ ಮಾಡಿ ಶೇರ್​ ಮಾಡಿದ್ದಾರೆ. ತಾಯಿ ಮತ್ತು ಮಗ ಜೊತೆಯಾಗಿ ಇರುವ ಅನೇಕ ದೃಶ್ಯಗಳನ್ನು ಕಾಣಬಹುದು. ವಿಡಿಯೋದ ಜೊತೆಗೆ ಹುಟ್ಟುಹಬ್ಬಕ್ಕಾಗಿ ಪ್ರೀತಿಯ ಸಂದೇಶವನ್ನು ಬರೆದಿದ್ದಾರೆ.

ನಮ್ಮನ್ನು ನಗಿಸುವ ನಿನ್ನ ಹಾಸ್ಯವನ್ನು ಎಂದಿಗೂ ನಿಲ್ಲಿಸಬೇಡ. ನಿನ್ನನ್ನು ಯಾವಾಗಲೂ ಪ್ರೀತಿಸುತ್ತೇನೆ ಎಂದು ನಿನಗೆ ತಿಳಿದಿದೆ. ಹ್ಯಾಪಿ ಬರ್ತ್​ಡೇ ಮೈ ಸ್ವೀಟ್​ ಬಾಯ್​. ಅಮ್ಮ ನಿನ್ನನ್ನು ಹೆಚ್ಚು ಪ್ರೀತಿಸುತ್ತಾಳೆ. ಜೊತೆಗೆ ಅಮ್ಮ ನಿನ್ನ ಬಗ್ಗೆ ಹೆಮ್ಮೆ ಪಡುತ್ತಾಳೆ” ಎಂದು ಬರೆದುಕೊಂಡು ಶುಭ ಕೋರಿದ್ದಾರೆ.