Saturday, 14th December 2024

ಪುರಿ ಜಗನ್ನಾಥ್ ಅವರ ಸಹಾಯಕ ನಿರ್ದೇಶಕ ಆತ್ಮಹತ್ಯೆ

ಹೈದರಾಬಾದ್: ಡೈರೆಕ್ಟರ್ ಪುರಿ ಜಗನ್ನಾಥ್ ಅವರ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತನನ್ನು ಸಾಯಿ ಕುಮಾರ್ ಎಂದು ಗುರುತಿಸಲಾಗಿದೆ.

ಸಾಯಿ ಕುಮಾರ್ ಅವರು ನಿರ್ದೇಶಕ ಪುರಿ ಜಗನ್ನಾಥ್ ಅವರ ಬಳಿಕ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಒಳ್ಳೆಯ ನಿರ್ದೇಶಕನಾಗಬೇಕು ಎಂಬ ಉದ್ದೇಶದಿಂದ ಸಾಯಿ ಕುಮಾರ್ ಸಹಾಯಕ ನಿರ್ದೇಶಕನಾಗಿ ವೃತ್ತಿ ಜೀವನ ಆರಂಭಿಸಿದ್ದರು ಎನ್ನಲಾಗಿದೆ.