Sunday, 15th December 2024

ದ್ವಾರಕೀಶ್ ನಿಧನ: ನಾಳೆ ಕನ್ನಡ ಚಿತ್ರರಂಗ ಬಂದ್

ಬೆಂಗಳೂರು : ಹಿರಿಯ ನಟ ನಿರ್ಮಾಪಕ ನಿರ್ದೇಶಕರಾಗಿರುವ ದ್ವಾರಕೀಶ್ ಅವರ ನಿಧನದ ಹಿನ್ನೆಲೆಯಲ್ಲಿ ನಾಳೆ ಒಂದು ದಿನ ಕನ್ನಡ ಚಿತ್ರರಂಗ ಬಂದ್ ಇರಲಿದೆ ಎಂದು ಫಿಲಂ ಚೇಂಬರ್ ಅಧ್ಯಕ್ಷ ಎನ್‌ಎಂ ಸುರೇಶ್ ತಿಳಿಸಿದರು.

ನಾಳೆ ಚಿತ್ರರಂಗ ಬಂದ್ ಮಾಡಿ ನಟ ದ್ವಾರಕೀಶ್ ಅವರಿಗೆ ಗೌರವ ಕೊಡಲಾಗುತ್ತದೆ.

ದ್ವಾರಕೀಶ್ ನಿಧನದಿಂದ ಚಿತ್ರರಂಗಕ್ಕೆ ಬಹಳ ನಷ್ಟವಾಗಿದೆ. ನಾಳೆ ಒಂದು ದಿನ ಚಿತ್ರರಂಗದ ಚಟುವಟಿಕೆ ಬೇಡ ಹೀಗಾಗಿ ಎಲ್ಲಾ ಕಲಾವಿದರಿಗೂ ನಾನು ಮನವಿ ಮಾಡುತ್ತೇನೆ ಎಂದರು.

ಬೆಳಿಗ್ಗೆಯಿಂದ ಮಧ್ಯಾಹ್ನ ಯಾವುದೇ ಚಲನಚಿತ್ರಗಳನ್ನು ಪ್ರದರ್ಶಿಸದೆ ಬಂದ್ ಮಾಡಲಾಗಿದೆ. ಮಲ್ಟಿಪ್ಲೆಕ್ಸ್ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಚಲನಚಿತ್ರ ಪ್ರದರ್ಶಿಸದಿರಲು ಚಿತ್ರರಂಗ ನಿರ್ಧರಿಸಿದೆ.

ನಾಳೆ ಒಂದು ದಿನ ಚಿತ್ರರಂಗದ ಚಿರೋಟಿಗೆ ಬಂದು ಎಲ್ಲಾ ಕಲಾವಿದರಿಗೂ ನಾನು ಮನವಿ ಮಾಡುತ್ತೇನೆ ಎಂದು NM ಸುರೇಶ ಹೇಳಿಕೆಯ ನೀಡಿದ್ದು, ನಾಳೆ ಸ್ವಯಂ ಪ್ರೇರಿತವಾಗಿ ಬಂದ್ ಮಾಡಲು ಮನವಿ ಮಾಡಿಕೊಂಡಿದ್ದಾರೆ. ಅಂತ್ಯಕ್ರಿಯೆ ಬಗ್ಗೆ ಸರ್ಕಾರದ ಜೊತೆ ಮಾತನಾಡುತ್ತಿದ್ದೇವೆ. ಅವರನ್ನು ಗೌರವ ಪೂರ್ವಕವಾಗಿ ಕಳಿಸಿ ಕೊಡಬೇಕಿದೆ ಎಂದರು.