ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಒಂದೊಂದೆ ಕಠಿಣ ಟಾಸ್ಕ್ ಶುರುವಾಗಿದೆ. ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ ಸಖತ್ ಇಂಟ್ರೆಸ್ಟಿಂಗ್ ಆಗಿತ್ತು. ಇದರಲ್ಲಿ ಗೆದ್ದ ತ್ರಿವಿಕ್ರಮ್-ಐಶ್ವರ್ಯ ಜೋಡಿ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಜೊತೆಗೆ ರಾಜಕೀಯದ ಟಾಸ್ಕ್ ನಡೆಯುತ್ತಿದೆ. ಮನೆಯ ಸದಸ್ಯರನ್ನು ಎರಡು ರಾಜಕೀಯ ಪಕ್ಷಗಳನ್ನಾಗಿ ವಿಂಗಡಿಸಲಾಗಿದೆ. ಎಲ್ಲರೂ ರಾಜಕಾರಣಿಗಳ ಅವತಾರ ತಾಳಿದ್ದಾರೆ. ಎರಡು ರಾಜಕೀಯ ಪಕ್ಷಗಳಾಗಿ ವಿಂಗಡಿಸಿರುವ ಬಿಗ್ ಬಾಸ್ ಒಂದಕ್ಕೆ ‘ಸಮರ್ಥರ ನ್ಯಾಯವಾದಿ ಪಕ್ಷ’ ಹಾಗೂ ಎರಡನೆಯದು ‘ಧರ್ಮ ಸೇನಾ ಪಕ್ಷ’ ಎಂದು ಹೆಸರು ನೀಡಿದೆ.
ತ್ರಿವಿಕ್ರಮ್ ಬಣದಲ್ಲಿ ಚೈತ್ರಾ, ಭವ್ಯಾ, ಅನುಷಾ ರೈ, ಮಾನಸ, ಸುರೇಶ್, ಧನಂಜಯ ಇದ್ದಾರೆ. ಐಶ್ವರ್ಯಾ ಟೀಂನಲ್ಲಿ ಶಿಶಿರ್, ಮೋಕ್ಷಿತಾ, ಹಂಸ, ಧರ್ಮ, ಗೌತಮಿ, ಮಂಜು ಇದ್ದಾರೆ. ಸ್ಪರ್ಧಿಗಳನ್ನು ಎರಡು ಪಕ್ಷಗಳನ್ನಾಗಿ ವಿಂಗಡಿಸಿ ರಾಜಕೀಯ ಮಾಡುವ ಟಾಸ್ಕ್ ನೀಡಲಾಗಿದೆ. ಎರಡೂ ತಂಡಗಳ ನಡುವೆ ಈ ಟಾಸ್ಕ್ನಲ್ಲೂ ದೊಡ್ಡ ಮಟ್ಟದ ಜಗಳ ನಡೆದಿದೆ.
ಬಿಗ್ ಬಾಸ್ ಎದುರು ಪಾರ್ಟಿಯ ಪ್ರಚಾರವನ್ನು ತಡೆಯುವ ಟಾಸ್ಕ್ ಕೊಟ್ಟಿದ್ದಾರೆ. ಇದರಲ್ಲಿ ಸ್ಪರ್ಧಿಗಳ ನಡುವೆ ಬಲ ಪ್ರಯೋಗವಾಗಿದೆ. ಸ್ಪರ್ಧಿಗಳ ಮಧ್ಯೆ ಕುಸ್ತಿ ಜಗ್ಗಾಟ ಜೋರಾಗಿಯೇ ನಡೆದಿದೆ. ಈ ವೇಳೆ ಹನುಮಂತ ಅವರು ಕುಸಿದು ಬಿದ್ದ ಘಟನೆ ಕೂಡ ನಡೆದಿದೆ. ಮನೆಯಲ್ಲಿ ಯಾವುದೇ ಜಗಳ, ಕಿತ್ತಾಟ ನಡೆಯದಿರಲಿ ಎಂದು ಕೇಳಿಕೊಳ್ಳುತ್ತಾ ಬಂದವರು ಹನುಮಂತ. ಮನೆಯಲ್ಲಿ ಹೆಚ್ಚು ಹಾಡಿಕೊಂಡು, ಕಾಮಿಡಿ ಮಾಡಿಕೊಂಡು ಬಂದವರು ಈಗ ಅವರೇ ಟಾಸ್ಕ್‌ನಲ್ಲಿ ಗಾಯ ಮಾಡಿಕೊಂಡಿದ್ದಾರೆ. ಅವರನ್ನು ಮೋಕ್ಷಿತಾ ಮಂಜು ಅವರು ಹೊತ್ತುಕೊಂಡು ಹೋಗಿದ್ದಾರೆ.
ಇನ್ನು ಟಾಸ್ಕ್ ಅಲ್ಲಿ ಬಜರ್ ಒತ್ತುವ ಮ್ಯಾಟರ್‌ಗೆ ಜಾಸ್ತಿ ಕಿರುಚಾಟ ಕೂಡ ಆಗಿದೆ. ಇದೇ ವಿಷಯವನ್ನ ಇಟ್ಟುಕೊಂಡು ಇಲ್ಲಿ ಕ್ಯಾಪ್ಟನ್‌ಗಳ ನಡುವೆಯೇ ಜಗಳವಾಗಿದೆ. ಐಶ್ವರ್ಯ ನಗುವಿನಿಂದಲೇ ಟಾಂಗ್ ಕೊಟ್ಟಿದ್ದಾರೆ. ತ್ರಿವಿಕ್ರಮ್ ಇಲ್ಲಿ ಫುಲ್ ಸೀರಿಯೆಸ್ ಆಗಿದ್ದಾರೆ. ಅತ್ತ ಬಾಗಿಲ ಬಳಿ ಎರಡೂ ಪಕ್ಷಗಳ ಮಧ್ಯೆ ಜೋರು ಗಲಾಟೆ ನಡೆದಿದೆ. ಈ ವೇಳೆ ಹಿಂದೆಯಿಂದ ಬಂದ ಮಾನಸಾ ಮತ್ತೆ ಅದೇ ಪೋಸ್ಟರ್‌ನ ಕಿತ್ತು ಹಾಕಲು ಯತ್ನಿಸಿದಾಗ ಸಡನ್ ಆಗಿ ಉಗ್ರಂ ಮಂಜು ಮಾನಸಾ ಅವರನ್ನ ತಳ್ಳಿದ್ದಾರೆ. ಮಂಜು ಅವರ ಮೊಣಕೈ ತಾಗಿದ ಪರಿಣಾಮ ಮಾನಸ ಅವರ ಕಿಬ್ಬೊಟ್ಟೆಗೆ ನೋವಾಗಿದ್ದು, ಕಣ್ಣಿರೀಟ್ಟಿದ್ದಾರೆ.
BBK 11 TRP: ಬಿಗ್ ಬಾಸ್ಗೆ ಬಿಗ್ ಶಾಕ್: ಟಿಆರ್ಪಿಯಲ್ಲಿ ಕುಸಿದ ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ