Thursday, 31st October 2024

BBK 11: ಈ ವಾರ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಸಹಿತ ಬರೋಬ್ಬರಿ 12 ಮಂದಿ ನಾಮಿನೇಟ್: ಯಾರೆಲ್ಲ?

BBK 11 Nomination

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಐದನೇ ವಾರ ನಡೆಯುತ್ತಿದೆ. ಈ ವಾರ ಹನುಮಂತ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ಗೆದ್ದು ಮನೆಯ ನಾಯಕರಾಗಿದ್ದಾರೆ. ಇದರ ಬೆನ್ನಲ್ಲೇ ನಾಮಿನೇಷನ್ ಪ್ರಕ್ರಿಯೆ ಮನೆಯಲ್ಲಿ ಶುರುವಾಗಿದೆ. ಈ ವಾರ ಕೇವಲ ಇಬ್ಬರು ಸ್ಪರ್ಧಿಗಳು ಮಾತ್ರ ಸೇಫ್ ಆಗಿದ್ದಾರೆ. ಉಳಿದ 12 ಸದಸ್ಯರು ನಾಮಿನೇಟ್ ಆಗಿದ್ದು, ಇದರಲ್ಲಿ ಕ್ಯಾಪ್ಟನ್ ಹನುಮಂತ ಹೆಸರು ಕೂಡ ಇದೆ.

ನಾಮಿನೇಷನ್​ಗೆ ಇಬ್ಬಿಬ್ಬರು ವ್ಯಕ್ತಿಗಳನ್ನು ಬಿಗ್‌ಬಾಸ್‌ ಆಯ್ಕೆ ಮಾಡುತ್ತಿತ್ತು. ಆ ವ್ಯಕ್ತಿಗಳಲ್ಲಿ ಒಬ್ಬರನ್ನು ಮನೆಯವರು ನಾಮಿನೇಟ್‌ ಮಾಡಬೇಕು. ಇನ್ನೊಂದು ಕಡೆ ಕನ್ಫೆಷನ್‌ ರೂಂ ನಲ್ಲಿದ್ದ ಕ್ಯಾಪ್ಟನ್‌ ಹನುಮಂತಗೆ ಕೂಡ ಇಬ್ಬರಲ್ಲಿ ಒಬ್ಬರನ್ನು ನಾಮಿನೇಟ್‌ ಮಾಡುವ ಅವಕಾಶ ನೀಡಲಾಗಿತ್ತು.

ನಾಮಿನೇಷನ್ ವಿಚಾರದಲ್ಲಿ ಟ್ವಿಸ್ಟ್ ಕೊಟ್ಟ ಬಿಗ್ ಬಾಸ್, ಹೊರಗಡೆ ಅತೀ ಹೆಚ್ಚು ಓಟಿಂಗ್‌ ನಲ್ಲಿ ನಾಮಿನೇಟ್‌ ಆದವರ ಹೆಸರು ಹನುಮಂತ ಹೇಳಿದ್ದರೆ ಅವರಷ್ಟೇ  ನಾಮಿನೇಟ್‌ ಆಗುತ್ತಿದ್ದರು. ಆದರೆ ಕಡಿಮೆ ಓಟು ಪಡೆದವರ ಹೆಸರು ಹನುಮಂತ ನಾಮಿನೇಟ್‌ ಮಾಡುತ್ತಿದ್ದರೆ ಬಿಗ್‌ಬಾಸ್‌ ಓಟಿಂಗ್‌ಗೆ ನಿಲ್ಲಿಸಿದ್ದ ಇಬ್ಬರೂ ಕೂಡ ನಾಮಿನೇಟ್‌ ಆಗುತ್ತಿದ್ದರು. ಹೀಗಾಗಿ ತ್ರಿವಿಕ್ರಮ್‌ ಮತ್ತು ಗೌತಮಿ ಮಾತ್ರ ಮನೆಯಲ್ಲಿ ಈ ವಾರ ಸೇವ್ ಆಗಿದ್ದಾರೆ.

ಸದ್ಯ ಈ ವಾರ ಮನೆಯಿಂದ ಹೊರಹೋಗಲು ಗೌತಮಿ ಮತ್ತು ತ್ರಿವಿಕ್ರಮ್‌ ಬಿಟ್ಟು ಭವ್ಯಾ ಗೌಡ, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ,  ತುಕಾಲಿ ಮಾನಸ,  ಉಗ್ರಂ ಮಂಜು, ಅನುಷಾ ರೈ, ಧರ್ಮ ಕೀರ್ತಿರಾಜ್,  ಐಶ್ವರ್ಯಾ, ಧನ್‌ರಾಜ್,‌ ಶಿಶರ್ ಶಾಸ್ತ್ರಿ ನಾಮಿನೇಟ್‌ ಆಗಿದ್ದಾರೆ. ಹಾಗೆಯೆ ಕ್ಯಾಪ್ಟನ್‌ ಹನುಮಂತ ಆಯ್ಕೆಯ ಅನುಸಾರ ಗೋಲ್ಡ್ ಸುರೇಶ್ ಅವರು ನೇರ ನಾಮಿನೇಟ್ ಆಗಿದ್ದಾರೆ. ಜೊತೆಗೆ ಮನೆಯಿಂದ ಹೊರಹೋಗುವಾಗ ವಿಶೇಷ ಅಧಿಕಾರದಿಂದ ಹಂಸಾ ಅವರು ಹನುಮಂತ ಅವರನ್ನು ನಾಮಿನೇಟ್‌ ಮಾಡಿದ್ದ ಕಾರಣಕ್ಕೆ ಅವರು ಕೂಡ ಈ ಲಿಸ್ಟ್​ನಲ್ಲಿ ಇದ್ದಾರೆ.

ಹನುಮಂತನ ಅಸಲಿ ಆಟ ಶುರು:

ಕ್ಯಾಪ್ಟನ್ ಹನುಮಂತು ಅವರು ತಮ್ಮ ಆಯ್ಕೆಯ ಮನೆಯ ಸದಸ್ಯರನ್ನು ನಾಮಿನೇಟ್‌ ಮಾಡಬಹುದು ಎಂದು ಬಿಗ್‌ ಬಾಸ್‌ ಆದೇಶಿಸಿದ್ದರು. ಅದರಂತೆ ಎಲ್ಲ ಸ್ಪರ್ಧಿಗಳ ಮುಂದೆಯೇ ಬಂದ ಹನುಮಂತು, ಮೊದಲಿಗೆ ಗೋಲ್ಡ್‌ ಸುರೇಶ್‌ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ಬಳಿಕ ಭವ್ಯಾ ಯಾವುದರಲ್ಲೂ ಜಾಸ್ತಿ ಭಾಗವಹಿಸಲಿಲ್ಲ ಎಂದು ಹೇಳಿ ಅವರನ್ನು ನೇರ ನಾಮಿನೇಟ್ ಮಾಡಿದ್ದಾರೆ. ಕೊನೆಯದಾಗಿ ಮಾನಸಕ್ಕ ಒಂಥರಾ ಬಾಂಬ್ ಇದ್ಹಂಗೆ. ಸೌಂಡ್ ಮಾಡೋದಕ್ಕೆ ಹೋದರೆ ಅಲ್ಲೇ ಠುಸ್‌ ಅನ್ನುತ್ತೆ ಎಂದಿದ್ದಾರೆ ಹನುಮಂತ.

BBK 11: ಮುಗ್ಧ ಹನುಮಂತನ ಮುದ್ದು ಕೋರಿಕೆ: ದೇವರ ಬಳಿ ಏನಂತ ಬೇಡಿಕೆ ಇಟ್ರು ನೋಡಿ