ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಎಂಟನೇ ವಾರಕ್ಕೆ ಕಾಲಿಟ್ಟಿದೆ. ಟಾಸ್ಕ್ಗಳ ಕಾವು ಏರುತ್ತಿದ್ದು, ಈ ವಾರ ಶೋಭಾ ಶೆಟ್ಟಿ ಹಾಗೂ ರಜತ್ ಇಬ್ಬರು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಮನೆಯಲ್ಲಿ 14 ಮಂದಿ ಇದ್ದಾರೆ. ಆರನೇ ವಾರ ಮನೆಯೊಳಗೆ ಯಾವುದೇ ಎಲಿಮಿನೇಷನ್ ಪ್ರಕ್ರಿಯೆ ನಡೆದಿರಲಿಲ್ಲ. ಹೀಗಾಗಿ ಕಳೆದ ವಾರ ಡಬಲ್ ಎಲಿಮಿನೇಷನ್ ಇರಲಿದೆ ಎನ್ನಲಾಗಿತ್ತು. ಆದರೆ, ಅನುಷಾ ರೈ ಒಬ್ಬರೇ ಮನೆಯಿಂದ ಔಟ್ ಆಗಿದ್ದರು.
ಅನುಷಾ ರೈ ಹಾಗೂ ಧರ್ಮಾ ಕೀರ್ತಿರಾಜ್ ಡೇಂಜರ್ ಝೋನ್ಗೆ ಬಂದಿದ್ದರು. ಇದರಲ್ಲಿ ಅನುಷಾ ಎಲಿಮಿನೇಟ್ ಎಂದು ಸುದೀಪ್ ಘೋಷಣೆ ಮಾಡಿದರು. ಇದೀಗ ಎಂಟನೇ ವಾರ ಮನೆಯಿಂದ ಹೊರಹೋಗಲು ಏಳು ಸದಸ್ಯರು ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ಹಾಗೂ ಶೋಭಾ ಶೆಟ್ಟಿ, ರಜತ್ ಕಿಶನ್ ಬಿಟ್ಟು ಉಳಿದ 7 ಜನ ನಾಮಿನೇಟ್ ಆಗಿದ್ದಾರೆ. ಚೈತ್ರಾ ಕುಂದಾಪುರ, ಉಗ್ರಂ ಮಂಜು, ತ್ರಿವಿಕ್ರಮ್, ಮೋಕ್ಷಿತಾ ಪೈ, ಗೌತಮಿ ಜಾಧವ್, ಧರ್ಮ ಕೀರ್ತಿರಾಜ್ ಹಾಗೂ ಹನುಮಂತ ಲಮಾಣಿ ನಾಮಿನೇಟ್ ಆಗಿದ್ದಾರೆ.
ಅಚ್ಚರಿ ಎಂದರೆ ಗೌತಮಿ, ಮಂಜು, ಮೋಕ್ಷಿತಾ ಸದಾ ಒಟ್ಟಿಗೆ ಇರುತ್ತಿದ್ದರು. ಈಗ ಮೂವರು ಕೂಡ ನಾಮಿನೇಟ್ ಆಗಿದ್ದಾರೆ. ಇದರಲ್ಲಿ ಮೋಕ್ಷಿತಾ ಅವರು ಮಂಜು ಅವರನ್ನ ಹಾಗೂ ಮಂಜು ಅವರು ಮೋಕ್ಷಿತಾರನ್ನೇ ನಾಮಿನೇಟ್ ಮಾಡಿದ್ದಾರೆ. ಐಶ್ವರ್ಯಾ, ಧನರಾಜ್ ಆಚಾರ್, ಶಿಶಿರ್, ಗೋಲ್ಡ್ ಸುರೇಶ್ ಈ ಬಾರಿ ನಾಮಿನೇಷನ್ನಿಂದ ಬಚಾವ್ ಆಗಿದ್ದಾರೆ. ನಾಮಿನೇಟ್ ಆಗಿರುವವರಲ್ಲಿ ಈ ವಾರ ಯಾರ ಆಟ ಮನೆಯಲ್ಲಿ ಅಂತ್ಯವಾಗಲಿದೆ ಎಂದು ಕಾದುನೋಡಬೇಕಿದೆ.
ತಾರಕಕ್ಕೇರಿದ ಮಂಜು-ತ್ರಿವಿಕ್ರಮ್ ಗಲಾಟೆ:
ಈ ಬಾರಿಯ ನಾಮಿನೇಷನ್ ವೇಳೆ ಮನೆ ಹೊತ್ತಿ ಉರಿದಿದೆ. ಅದರಲ್ಲೂ ಉಗ್ರಂ ಮಂಜು ಹಾಗೂ ತ್ರಿವಿಕ್ರಮ್ ನಡುವಣ ಗಲಾಟೆ ತಾರಕಕ್ಕೇರಿದೆ. ಮಡಿಕೆ ಒಡೆದು ನಾಮಿನೇಟ್ ಮಾಡುವ ಹೆಸರು ಸೂಚಿಸುವಂತೆ ಸ್ಪರ್ಧಿಗಳಿಗೆ ಬಿಗ್ ಬಾಸ್ ಸೂಚಿಸಿದ್ದಾರೆ. ಈ ನಾಮಿನೇಷನ್ ಪ್ರಕ್ರಿಯೆ ವೇಳೆ ಮಂಜು ಮತ್ತು ತ್ರಿವಿಕ್ರಮ್ ನಡುವೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. ಪರ್ಸನಲ್ ಟಾರ್ಗೆಟ್ ಎಂದು ತ್ರಿವಿಕ್ರಮ್ ಹೇಳಿದ್ರೆ, ಇನ್ನೊಬ್ಬರನ್ನು ತುಳಿದು ಮೇಲೆ ಬರುತ್ತಾರೆ ಎಂದು ಮಂಜು ಆರೋಪಿಸಿದ್ದಾರೆ. ರೊಚ್ಚಿಗೆದ್ದ ತ್ರಿವಿಕ್ರಮ್ ದನಿ ಏರಿಸಿ ಮಾತನಾಡಲು ನಮಗೂ ಬರುತ್ತದೆ. ನೀವೇನು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ತಿಳಿಸಿದ್ದಾರೆ.
BBK 11: ಸುರೇಶ್ಗೆ ಸೆಡೆ ಎಂದ ರಜತ್: ಬಿಗ್ ಬಾಸ್ನಿಂದ ಹೊರಬರಲು ನಿರ್ಧರಿಸಿದ ಗೋಲ್ಡ್