ಆರನೇ ವಾರದತ್ತ ಕಾಲಿಟ್ಟಿರುವ ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ರೋಚಕತೆ ಸೃಷ್ಟಿಸುತ್ತಿದೆ. ಸ್ಪರ್ಧಿಗಳು ತಮ್ಮದೇ ಆದ ಗೇಮ್ ಪ್ಲ್ಯಾನ್ ರೂಪಿಸುತ್ತಿದ್ದಾರೆ. ಟಾಸ್ಕ್ ಕೂಡ ದಿನದಿಂದ ದಿನಕ್ಕೆ ಕಾವೇರುತ್ತಿದ್ದು, ಸ್ಪರ್ಧಿಗಳು ಮೈಚಳಿ ಬಿಟ್ಟು ಆಡುತ್ತಿದ್ದಾರೆ. ಇದರ ನಡುವೆ ಎಲಿಮಿನೇಷನ್ ಭಯ ಶುರುವಾಗಿದೆ. ಈ ವಾರ ದೊಡ್ಮನೆಯಿಂದ ಹೊರಹೋಗಲು ಏಳು ಸದಸ್ಯರು ನಾಮಿನೇಟ್ ಆಗಿದ್ದಾರೆ. ಎಲ್ಲರೂ ಬಲಿಷ್ಠ ಸ್ಪರ್ಧಿಗಳೇ ಆಗಿದ್ದಾರೆ.
ಈ ವಾರದ ಮೊದಲ ದಿನ ಬಿಗ್ ಬಾಸ್ ಮನೆ ಮಂದಿಗೆ ಪಗಡೆ ಆಟ ನೀಡಿದ್ದರು. ಇದಕ್ಕೆ ಮೂರು ಜನರಿರುವಂತಹ ನಾಲ್ಕು ಗುಂಪುಗಳನ್ನು ರಚಿಸಲಾಗಿತ್ತು. ಶಿಶಿರ್ ಟೀಂನಲ್ಲಿ ಧನರಾಜ್, ಐಶ್ವರ್ಯಾ ಇದ್ದರೆ, ಗೌತಮಿ ಟೀಂನಲ್ಲಿ ತ್ರಿವಿಕ್ರಮ್ ಅನುಷಾ ಇದ್ದರು. ಚೈತ್ರಾ ಟೀಂನಲ್ಲಿ ಮೋಕ್ಷಿತಾ, ಧರ್ಮ, ಮಂಜಣ್ಣ ಟೀಂನಲ್ಲಿ ಭವ್ಯಾ, ಸುರೇಶ್ ಇದ್ದರು.
ದಾಳ ಉರುಳಿಸುವ ಗೇಮ್ನಲ್ಲಿ ಮೊದಲಿಗೆ ಚೈತ್ರಾ ಅವರ ಟೀಂ ಎದುರಾಳಿ ತಂಡದ ಒಬ್ಬರನ್ನು ಉಳಿಸಿಬೇಕಿತ್ತು. ಅವರು ಗೌತಮಿ ಅವರನ್ನು ಉಳಿಸಿದರು. ಬಳಿಕ ಮಂಜು ಅವರ ಟೀಂನಿಂದ ಭವ್ಯಾ, ಚೈತ್ರಾ ಟೀಂನಿಂದ ಧರ್ಮ ಅವರು ನಾಮಿನೇಟ್ ಆದರು. ಬಳಿಕ ಗೌತಮಿ ಅವರ ಟೀಂ ನಿಂದ ತ್ರಿವಿಕ್ರಮ್ ಮತ್ತು ಅನುಷಾ ಅವರು ಒಮ್ಮತದ ನಿರ್ಧಾರದ ಮೇಲೆ ಮೋಕ್ಷಿತಾ ಅವರನ್ನು ಸೇವ್ ಮಾಡಿದರು. ಬಳಿಕ ಕೊನೆಯಲ್ಲಿ ದಾಳ ಉರುಳಿಸಿ ಉಗ್ರಂ ಮಂಜು, ಸುರೇಶ್, ಐಶ್ವರ್ಯಾ, ಶಿಶಿರ್ ಅವರು ಸೇಫ್ ಆದರು.
ಆದರೆ ಕೊನೆಗೆ ಚೈತ್ರಾ, ಧರ್ಮ, ಅನುಷಾ, ಭವ್ಯಾ ಹಾಗೂ ತ್ರಿವಿಕ್ರಮ್ ಉಳಿದಿದ್ದರು. ಬಳಿಕ ನಡೆದ ಮತ್ತೊಂದು ಟಾಸ್ಕ್ನಲ್ಲಿ ಗೆದ್ದ ಗೌತಮಿ ಗ್ರೂಪ್ ನಾಮಿನೇಷನ್ನಿಂದ ಸೇಫ್ ಮಾಡುವ ಕಾರ್ಡ್ ಪಡೆದುಕೊಂಡು ಅನುಷಾ ಅವರನ್ನು ಸೇಫ್ ಮಾಡಿದರು. ಕ್ಯಾಪ್ಟನ್ ಹನುಮಂತ ಅವರ ಅನುಸಾರ ಧನರಾಜ್ ಆಚಾರ್, ಗೋಲ್ಡ್ ಸುರೇಶ್ ಹಾಗೂ ಮೋಕ್ಷಿತಾ ಪೈ ನೇರವಾಗಿ ನಾಮಿನೇಟ್ ಆದರು.
ಹೀಗಾಗಿ ಸದ್ಯ ಈ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗಲು ಧರ್ಮ ಕೀರ್ತಿರಾಜ್, ಭವ್ಯಾ, ಚೈತ್ರಾ ಕುಂದಾಪುರ, ತ್ರಿವಿಕ್ರಮ್, ಮೋಕ್ಷಿತಾ ಪೈ, ಗೋಲ್ಡ್ ಸುರೇಶ್ ಹಾಗೂ ಧನರಾಜ್ ಅವರು ನಾಮಿನೇಟ್ ಆಗಿದ್ದಾರೆ. ಇವರ ಪೈಕಿ ಒಬ್ಬರಿಗೆ ಈ ವಾರ ಬಿಗ್ ಬಾಸ್ ಪಯಣ ಅಂತ್ಯವಾಗಲಿದೆ.
BBK 11: ಮಂಜು ಜೊತೆಗಿನ ಅಣ್ಣ-ತಂಗಿ ಸಂಬಂಧಕ್ಕೆ ಇತಿಶ್ರೀ ಹಾಡಿದ ಮೋಕ್ಷಿತಾ ಪೈ