ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಕೆಲವು ಅನಿರೀಕ್ಷಿತ ಘಟನೆಗಳು ನಡೆಯುತ್ತಿವೆ. ಭಾನುವಾರ ಶಾಕಿಂಗ್ ಎಂಬಂತೆ ಫೈನಲ್ ಸ್ಪರ್ಧಿ ಎಂದುಕೊಂಡಿದ್ದ ಶಿಶಿರ್ ಶಾಸ್ತ್ರೀ ಎಲಿಮಿನೇಟ್ ಆಗಿ ಹೊರಬಂದರು. ಇದರ ಬೆನ್ನಲ್ಲೇ ಶಾಕಿಂಗ್ ಎಂಬಂತೆ ಗೋಲ್ಡ್ ಸುರೇಶ್ ಕೂಡ ದೊಡ್ಮನೆ ತೊರೆದರು. ವೈಯಕ್ತಿಕ ಕಾರಣಗಳಿಂದ ಸುರೇಶ್ ಅವರು ಬಿಗ್ ಬಾಸ್ ಅನ್ನು ಅರ್ಧಕ್ಕೆ ಕೈಬಿಟ್ಟು ಹೊರಬಂದಿದ್ದಾರೆ. ಅಷ್ಟಕ್ಕೂ ಸುರೇಶ್ ದೊಡ್ಮನೆಯಿಂದ ಹೊರಬರಲು ಏನು ಕಾರಣ?.
ಗೋಲ್ಡ್ ಸುರೇಶ್ ಅವರಿಗೆ ಮನೆಯಿಂದ ಒಂದು ತುರ್ತು ಮೆಸೇಜ್ ಬಂದ ಕಾರಣದಿಂದ ಅವರು ಬಿಗ್ ಬಾಸ್ನಿಂದ ಹೊರಬಂದಿದ್ದಾರೆ. ಗೋಲ್ಡ್ ಸುರೇಶ್ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ. ಹಾಗಾಗಿ ಅವರ ಅವಶ್ಯಕತೆ ಬಿಗ್ ಬಾಸ್ ಮನೆಯಿಂದ ಅವರ ಕುಟುಂಬದವರಿಗೆ ಜಾಸ್ತಿ ಇದೆ. ಹೆಚ್ಚು ತಡ ಮಾಡದೇ ವಸ್ತುಗಳನ್ನು ಪ್ಯಾಕ್ ಮಾಡಿಕೊಂಡು ಕೂಡಲೇ ಬಿಗ್ ಬಾಸ್ ಮನೆಯಿಂದ ಹೊರಗೆ ಬನ್ನಿ ಎಂದು ಬಿಗ್ ಬಾಸ್ ಸುರೇಶ್ಗೆ ಸೂಚನೆ ನೀಡಿದರು.
ಇದನ್ನು ಕೇಳಿ ಗೋಲ್ಡ್ ಸುರೇಶ್ ಅವರು ಏನಾಗಿರಬಹುದು ಎಂದು ಕಣ್ಣೀರು ಹಾಕಿದರು. ದೊಡ್ಡ ತೊಂದರೆ ಆಗಿರಬಹುದೇ ಎಂದು ಊಹಿಸಿ ಅವರಿಗೆ ಅಳು ಬಂತು. ಆ ಬಳಿಕ ಚಿನ್ನ ಹಾಕಿಕೊಂಡೇ ದೊಡ್ಮನೆಯಿಂದ ಹೊರಟರು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ವದಂತಿ ಹಬ್ಬಿದೆ. ಸುರೇಶ್ ತಂದೆ ನಿಧನರಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ, ಅದರಲ್ಲಿ ನಿಜವಿಲ್ಲ.
ಖುದ್ದು ಗೋಲ್ಡ್ ಸುರೇಶ್ ಅವರ ತಂದೆ ಶಿವಗೋಡ ಕಾಶಿರಾಮ ನಾರಪ್ಪಗೋಳ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಗೋಲ್ಡ್ ಸುರೇಶ್ ಮೊಣಕಾಲು ನೋವಿನ ಸಲುವಾಗಿ ಬಿಗ್ ಬಾಸ್ ಬಿಟ್ಟು ಹೊರಗೆ ಬಂದಿರಬೇಕು. ನಮ್ಮ ಮನೆ ಹಾಗೂ ಊರಲ್ಲಿ ಯಾರಿಗೂ ಏನು ಸಮಸ್ಯೆ ಇಲ್ಲ. ಬೆಂಗಳೂರು ಮನೆಯಲ್ಲೂ ಏನೂ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಕೆಲ ಸ್ಪರ್ಧಿಗಳ ಜೊತೆ ಸುರೇಶ್ ಅವರು ತಮ್ಮ ಬಿಸ್ನೆಸ್ ಬಗ್ಗೆ ಹೇಳಿದ್ದರು. ಸುರೇಶ್ ತೆರಳಿದ ನಂತರ ಐಶ್ವರ್ಯಾ ಕೂಡ, ಬಹುಶಃ ಬಿಸ್ನೆಸ್ನಲ್ಲಿ ಏನೋ ತೊಂದರೆ ಆಗಿರಬಹುದು ಎಂದು ನನಗೆ ಅನಿಸುತ್ತಿದೆ. ಕುಟುಂಬದಲ್ಲಿ ತೊಂದರೆ ಆಗಿದ್ದರೆ ಹೆದರುವ ಅಗತ್ಯ ಇಲ್ಲ ಎಂದೆಲ್ಲ ಹೇಳುತ್ತಿರಲಿಲ್ಲ. ಉದ್ಯಮದಲ್ಲಿಯೇ ಏನೋ ತೊಂದರೆ ಆಗಿದೆ ಎಂದು ಹೇಳಿದ್ದರು. ಈ ಮಾತಿಗೆ ಪುಷ್ಠಿ ಎಂಬಂತೆ ಸುರೇಶ್ ಅವರು ಸಾಲ ಮಾಡಿಕೊಂಡಿದ್ದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹಬ್ಬಿದೆ. ಆದರೆ, ಇದು ಎಷ್ಟರ ಮಟ್ಟಿಗೆ ನಿಜ ಎಂಬುದನ್ನು ಸ್ವತಃ ಸುರೇಶ್ ಅವರೇ ಸ್ಪಷ್ಟಪಡಿಸಬೇಕಿದೆ.
BBK 11: ನಾನೇ ಹೀರೋ.. ನಾನೇ ಕರಾಬು: ತ್ರಿವಿಕ್ರಮ್ ಮಾತಿಗೆ ಸಿಡಿದೆದ್ದ ರಜತ್ ಕಿಶನ್