Monday, 16th September 2024

ಬೆಂಗಾಲಿ ನಟಿ ಆಂಡ್ರಿಲಾ ಶರ್ಮಾ ಇನ್ನಿಲ್ಲ

ಕೋಲ್ಕತ್ತಾ: ಎರಡು ಬಾರಿ ಕ್ಯಾನ್ಸರ್‌ ಗೆದ್ದು ಚೇತರಿಕೆಯಾಗಿದ್ದ ಬೆಂಗಾಲಿ ಸಿನಿಮಾರಂಗದ ನಟಿ ಆಂಡ್ರಿಲಾ ಶರ್ಮಾ (24) ಇತ್ತೀಚೆಗೆ ಪಾರ್ಶ್ವವಾಯು ವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿ ದ್ದಾರೆ.

ನ. 1 ರಂದು ಬ್ರೈನ್ ಸ್ಟ್ರೋಕ್‌ ನಿಂದ ಆಸ್ಪತ್ರೆಗೆ ದಾಖಲಾಗಿದ್ದ ಆಯಂಡ್ರಿಲಾ ಶರ್ಮಾ ಅವರ ಪರಿಸ್ಥಿತಿ ದಿನ ಕಳೆದಂತೆ ಹದಗೆಟ್ಟಿತ್ತು. ನ.14 ರಂದು ಆಯಂಡ್ರಿಲಾ ಶರ್ಮಾರಿಗೆ ಅನೇಕಾ ಬಾರಿ ಹೃದಯ ಸ್ತಂಭನ‌ ಉಂಟಾಗಿತ್ತು. ಭಾನುವಾರ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿ ತಿಳಿಸಿದೆ.

ʼ ಜುಮೂರ್ʼ , ʼ ಭೋಲೋ ಬಾಬಾ ಪರ್ ಕರೇಗಾʼ ಸಿನಿಮಾಗಳು ಬೆಂಗಾಲಿ ಬಣ್ಣದ ಲೋಕದಲ್ಲಿ ಆಯಂಡ್ರಿಲಾ ಅವರಿಗೆ ಹೆಸರು ತಂದು ಕೊಟ್ಟಿತು. ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ನಟಿಗೆ ಕ್ಯಾನ್ಸರ್‌ ರೋಗ ವಕ್ಕರಿಸುತ್ತದೆ.

ಸ್ವಲ್ಪ ಸಮಯದ ಬಳಿಕ ಮತ್ತೆ ಚಿತ್ರರಂಗಕ್ಕೆ ಮರಳಿದ ಮೇಲೆ ಅವರಿಗೆ ಮತ್ತೊಮ್ಮೆ ಕ್ಯಾನ್ಸರ್‌ ಕಾಡುತ್ತದೆ. ಈ ಬಾರಿಯೂ ದಿಟ್ಟೆ ಯಾಗಿ ಹೋರಾಡಿ, ಆಪರೇಷನ್‌ ಮೂಲಕ ಕ್ಯಾನ್ಸರ್‌ ಗೆಡ್ಡೆ ತೆಗೆದು, ಕೀಮೋಥೆರಪಿಗೆ ಒಳಗಾಗಿ ಕ್ಯಾನ್ಸರ್‌ ಗೆದ್ದು, ಇತರರಿಗೆ ಸ್ಪೂರ್ತಿಯಾಗಿದ್ದರು.