ಬೆಂಗಳೂರು: ಯಾವುದೇ ಸಂಘಟನೆಯನ್ನು ನಿಷೇಧಿಸುವುದು ಇಷ್ವವಿಲ್ಲ ಎಂದು ನಟಿ ರಮ್ಯಾ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ತಾವು ಅಧಿಕಾರಕ್ಕೆ ಬಂದರೆ ಸಮಾಜದಲ್ಲಿ ಶಾಂತಿಯನ್ನು ಕದಡುವ ಬಜರಂಗದಳ ನಿಷೇಧ ಮಾಡುತ್ತೇವೆ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಿಳಿಸಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಟಿ ರಮ್ಯಾ ಯಾವುದೇ ಸಂಘಟನೆಯನ್ನು ಬ್ಯಾನ್ ಮಾಡು ವುದು ಇಷ್ವವಿಲ್ಲ ಎಂದು ಹೇಳಿಕೆ ನೀಡಿದ್ದು, ಅಚ್ಚರಿಗೆ ಕಾರಣವಾಗಿದೆ.
ಒಂದು ಸಂಘಟನೆ ಬ್ಯಾನ್ ಮಾಡಿದರೆ ಇನ್ನೊಂದು ಸಂಘಟನೆ ಬರುತ್ತದೆ. ದ್ವೇಷ ಭಾಷಣ ಮಾಡುವವರ ವಿರುದ್ಧ ಕ್ರಮ ತೆಗೆದು ಕೊಳ್ಳಲು ಕಾನೂನು ಅವಕಾಶ ನೀಡಿದೆ. ನಿಷೇಧ ಹೇರುವುದರಿಂದ ಉಪಯೋಗ ಇಲ್ಲ , ನಿಷೇಧ ಹೇರುವುದು ಎನ್ನುವುದು ನನಗೆ ವೈಯಕ್ತಿಕವಾಗಿ ಒಪ್ಪಿಗೆಯಿಲ್ಲ ಎಂದರು.