ಬಿಹಾರ: ಬಿಹಾರದ ಕೈಮೂರ್ ಜಿಲ್ಲೆಯ ದೇವಕಲಿ ಗ್ರಾಮದ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಭೋಜ್ ಪುರಿ ನಟಿ, ಗಾಯಕರು ಸೇರಿದಂತೆ 9 ಮಂದಿ ಮೃತಪಟ್ಟ ಘಟನೆ ನಡೆದಿದೆ.
ನಟಿಯರಾದ ಆಂಚಲ್ ತಿವಾರಿ, ಸಿಮ್ರಾನ್ ಶ್ರೀವಾಸ್ತವ್, ಗಾಯಕ ಛೋಟು ಪಾಂಡೆ ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದಾರೆ. ಪ್ರಕಾಶ್ ರಾಮ್, ದಾಧಿಬಾಲ್ ಸಿಂಗ್, ಅನು ಪಾಂಡೆ, ಶಶಿ ಪಾಂಡೆ, ಸತ್ಯ ಪ್ರಕಾಶ್ ಮಿಶ್ರಾ ಮತ್ತು ಬಾಗೀಶ್ ಪಾಂಡೆ ಮೃತರು.
ಬಿಹಾರದ ಕೈಮೂರ್ನ ದೇವಕಲಿ ಗ್ರಾಮದ ಬಳಿ ಜಿಟಿ ರಸ್ತೆಯಲ್ಲಿ ಭಾನುವಾರ ಸಂಜೆ ಟ್ರಕ್, ಎಸ್ಯುವಿ ಮತ್ತು ಮೋಟಾರ್ ಸೈಕಲ್ ನಡುವೆ ಅಪಘಾತ ಸಂಭವಿಸಿದೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ಜನಪ್ರಿಯ ವೆಬ್-ಸರಣಿ ‘ಪಂಚಾಯತ್ 2’ ನಲ್ಲಿ ಆಂಚಲ್ ತಿವಾರಿ ಮತ್ತು ಸಿಮ್ರಾನ್ ಶ್ರೀವಾಸ್ತವ ಅವರು ಎಲ್ಲರ ಗಮನ ಸೆಳೆದಿದ್ದು, ಇವರ ಅಕಾಲಿಕ ಮರಣ ಚಿತ್ರರಂಗಕ್ಕೆ ಬಹುದೊಡ್ಡ ಆಘಾತ ಉಂಟುಮಾಡಿದೆ.
ಮೊಹಾನಿಯಾ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಲಾಗಿದೆ.