Wednesday, 11th December 2024

ಬಿಗ್ ಬಾಸ್ ಸೀಸನ್-7ರ ವಿಜೇತ ಶೈನ್ ಶೆಟ್ಟಿ ”ವನಸ್ಥಾ” ಉತ್ಪನ್ನಗಳ ರಾಯಭಾರಿ

ಬೆಂಗಳೂರು/ಮಂಗಳೂರು: ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ವನಸ್ಥಾ ಉತ್ಪನ್ನಗಳನ್ನು ಒದಗಿಸುವ ದೃಷ್ಟಿಯಿಂದ ಆಹಾರ – ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಇರುವ ಬಿಗ್ ಬಾಸ್ ಸೀಸನ್-7ರ ವಿಜೇತ, ನಟ ಶೈನ್ ಶೆಟ್ಟಿ ಅವರನ್ನು ”ವನಸ್ಥಾ” ಉತ್ಪನ್ನಗಳ ರಾಯಭಾರಿಯಾಗಿ ನಿಯೋಜಿಸಲಾಗಿದೆ.

ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್ ನಲ್ಲಿ ನಡೆದ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಸಮಾರಂಭದಲ್ಲಿ ಶೈನ್ ಶೆಟ್ಟಿ ಯವರೊಂದಿಗೆ ಕಿರುತೆರೆ ನಟಿಯರಾದ ಭೂಮಿ ಶೆಟ್ಟಿ ಮತ್ತು ಚಂದನ ಅವರೂ ಭಾಗವಹಿಸಿದ್ದರು.

ಅವಧೂತ ವಿನಯ ಗುರೂಜಿ ದಿವ್ಯಸಾನಿಧ್ಯ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷ ಡಾ. ಬೇಳೂರು ರಾಘವೇಂದ್ರ ಶೆಟ್ಟಿ ಉಪಸ್ಥಿತರಿದ್ದರು.

ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಸಂಸ್ಥಾಪಕ ನಟರಾಜ್ ಕಲ್ಯಾಣಿ ಮತ್ತು ನಿರ್ದೇಶಕರಾದ ಶ್ರೀಯುತ ರಾಮ್ ಪ್ರದೀಪ್ ಆಚಾರ್, ಆರ್ಥಿಕ ಸಲಹೆಗಾರರಾದ ಆನಂದ ಪಿ. ಎಸ್., ಮಾರುಕಟ್ಟೆ ಪ್ರಧಾನ ವ್ಯವಸ್ಥಾಪಕರಾದ ವಿಶ್ವಜ್ಞಾಚಾರ್, ಪ್ರಾದೇಶಿಕ ವ್ಯವಸ್ಥಾಪಕರಾದ ಧನಂಜಯ್ ನೆಲ್ಯಾಡಿ ಹಾಗೂ ವಿತರಕರು ಉಪಸ್ಥಿತರಿದ್ದರು.

ವನಸ್ಥಾ ಕಂಪೆನಿಯ ತಯಾರಿಕಾ ಘಟಕವು ಪಶ್ಚಿಮ ಘಟ್ಟದ ಶ್ರೇಣಿಗಳ ಮಡಿಲಲ್ಲಿರುವ ಪವಿತ್ರ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಮರುವಂತಿಲ ಎಂಬಲ್ಲಿ ಕಾರ್ಯಾಚರಿಸುತ್ತಿದೆ.