Friday, 22nd November 2024

BBK 11: ಇತಿಹಾಸ ನಿರ್ಮಿಸಿದ ವಾರದ ಕತೆ ಕಿಚ್ಚನ ಜೊತೆ: ದಾಖಲೆಯ 12.3 ಟಿವಿಆರ್ ಗಳಿಸಿದ ಬಿಗ್ ಬಾಸ್

BBK 11 TVR

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಪ್ರೇಕ್ಷಕರನ್ನು ರಂಜಿಸುವಲ್ಲಿ ಎಡವುತ್ತಿದೆ ಎಂಬ ಮಾತಿತ್ತು. ಈ ಹಿಂದಿನ ಸೀಸನ್​ಗಳಿಗೆ ಹೋಲಿಸಿದರೆ ಈ ಬಾರಿಯ ಸೀಸನ್ ಡಲ್ ಆದಂತೆ ಕಾಣುತ್ತಿದೆ ಎನ್ನಲಾಗುತ್ತಿತ್ತು. ಬಿಬಿಕೆ 11 ಶುರುವಾಗಿ ಮೂರು ವಾರಗಳು ಕಳೆದರು ಬರೀ ಜಗಳಗಳೇ ಎಂಬ ಮಾತು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದವು. ಈಗ ಇದೇ ಜನರಿಗೆ ಇಷ್ಟವಾದಂತಿದೆ. ಹಿಂದಿನ ವಾರದ ಟಿಆರ್​ಪಿ ಹೊರಬಿದ್ದಿದ್ದು, ಕಿಚ್ಚನ ಎಪಿಸೋಡ್ ದಾಖಲೆ ನಿರ್ಮಿಸಿದೆ.

ಗ್ರ್ಯಾಂಡ್ ಓಪನಿಂಗ್ ದಿನ ಬಿಗ್ ಬಾಸ್​ಗೆ 9.9 ಟಿಆರ್​ಪಿ ಸಿಕ್ಕಿತ್ತು. ಬಿಗ್ ಬಾಸ್​ ಲಾಂಚ್​​ ದಿನ ಇಷ್ಟು ದೊಡ್ಡ ಮಟ್ಟದ ಟಿಆರ್​ಪಿ ಸಿಕ್ಕಿದ್ದು ಇದೇ ಮೊದಲು. ಮೊದಲ ವಾರ ಬಿಗ್ ಬಾಸ್​ಗೆ ವಾರದ ದಿನಗಳಲ್ಲಿ 6.9 ಟಿಆರ್​ಪಿ ದೊರೆತಿತ್ತು. ಆ ಬಳಿಕ ಬಿಗ್ ಬಾಸ್​ಗೆ ದೊಡ್ಡ ಮಟ್ಟದ ರೆಸ್ಪಾನ್ಸ್ ಇರಲಿಲ್ಲ. ಆದರೀಗ ದಾಖಲೆಯ 12.3 ಟಿವಿಆರ್ ಗಳಿಸಿದೆ. ಜಗದೀಶ್ ಅವರು ಎಲಿಮಿನೇಟ್ ಆದ ವಾರ ಶನಿವಾರ ಪ್ರಸಾರವಾದ ವಾರದ ಕತೆ ಕಿಚ್ಚನ ಜೊತೆ ಸಂಚಿಕೆ ಕರ್ನಾಟಕದ 15+ ವೀಕ್ಷಕರ ವಿಭಾಗದಲ್ಲಿ 12.3 ಟಿವಿಆರ್ ಗಳಿಸಿ ದಾಖಲೆ ನಿರ್ಮಿಸಿದೆ.

ಜಗದೀಶ್ ಅವರು ಅರ್ಧಕ್ಕೆ ಬಿಗ್ ಬಾಸ್​ನಿಂದ ಹೊರ ನಡೆದ ವಾರ ಕಿಚ್ಚ ಸುದೀಪ್ ಅವರು ಮನೆ ಮಂದಿಗೆ ಖಡಕ್ ಕ್ಲಾಸ್ ತೆಗೆದುಕೊಂಡಿದ್ದರು. ಆ ವಾರ ಬಿಗ್ ಬಾಸ್​ಗೆ ವಾರದ ದಿನಗಳಲ್ಲಿ 7 ಟಿವಿಆರ್​ ಸಿಕ್ಕಿದೆ. ಧಾರಾವಾಹಿ ವಿಚಾರಕ್ಕೆ ಬರೋದಾದರೆ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೊದಲ ಸ್ಥಾನದಲ್ಲಿ ಇದೆ. ಈ ಧಾರಾವಾಹಿ ಈ ಮೊದಲು ಒಂದನೇ ಸ್ಥಾನದಲ್ಲಿ ಇರುತ್ತಿತ್ತು. ಆದರೆ, ಸಮಯ ಬದಲಾವಣೆಯ ನಂತರ ಟಿಆರ್​ಪಿ ಕುಸಿದಿತ್ತು. ಈಗ ಮತ್ತೆ ಈ ಧಾರಾವಾಹಿ ಮೊದಲ ಸ್ಥಾನಕ್ಕೆ ಬಂದಿದೆ.

ಮೂರನೇ ಸ್ಥಾನದಲ್ಲಿದ್ದ ಅಮೃತಧಾರೆ ಧಾರಾವಾಹಿ ಇದೀಗ ಎರಡನೇ ಸ್ಥಾನಕ್ಕೇರಿದೆ. ಮೂರನೇ ಸ್ಥಾನದಲ್ಲಿ ಲಕ್ಷ್ಮೀ ನಿವಾಸ ಧಾರಾವಾಹಿ ಇದೆ. ಈ ಮೊದಲು ಈ ಧಾರಾವಾಹಿ ಟಿಆರ್​ಪಿಯಲ್ಲಿ ಮೊದಲ ಸ್ಥಾನ ಪಡೆಯುತ್ತಿತ್ತು. ಆದರೆ, ಈಗ ಧಾರಾವಾಹಿಯ ಟಿಆರ್​ಪಿ ಸ್ವಲ್ಪ ಕುಗ್ಗಿದೆ. ನಾಲ್ಕನೇ ಸ್ಥಾನದಲ್ಲಿ ಅಣ್ಣಯ್ಯ, ಲಕ್ಷ್ಮೀ ಬಾರಮ್ಮ ಹಾಗೂ ಭಾಗ್ಯ ಲಕ್ಷ್ಮೀ ಐದನೇ ಸ್ಥಾನದಲ್ಲಿ ಇವೆ.

BBK 11: ತನ್ನೆಲ್ಲ ನೋವನ್ನು ಬಚ್ಚಿಟ್ಟು ಬಿಗ್ ಬಾಸ್ ಸ್ಪರ್ಧಿಗಳಿಗೆ ನಗು ಹಂಚಿದ ಸುದೀಪ್