Saturday, 14th December 2024

BBK 11: ಬಿಗ್ ಬಾಸ್​ನಲ್ಲಿ ಡಬಲ್ ಎಲಿಮಿನೇಷನ್?: ಕುತೂಹಲ ಕೆರಳಿಸಿದ ವಾರದ ಕತೆ ಎಪಿಸೋಡ್

BBK 11 Double Emimination

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಹನ್ನೊಂದನೇ ವಾರದ ವೀಕೆಂಡ್ ಬಂದುಬಿಟ್ಟಿದೆ. ಇಂದು ಕಿಚ್ಚ ಸುದೀಪ್ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಮನೆಯಲ್ಲಿ 12 ಮಂದಿ ಇದ್ದಾರೆ. ಕಳೆದ ವಾರ ಮನೆಯಿಂದ ಯಾರೂ ಎಲಿಮಿನೇಟ್ ಆಗಿರಲಿಲ್ಲ. ವೋಟಿಂಗ್ ಲೈನ್ಸ್ ತೆರೆದಿರದ ಕಾರಣ ನಾಮಿನೇಟ್ ಆಗಿದ್ದ ಸದಸ್ಯರು ಸೇಫ್ ಆಗಿದ್ದರು. ಆದರೆ, ಈ ಬಾರಿ ಡಬಲ್ ಎಲಿಮಿನೇಷನ್ ಇದೆ ಎಂಬ ಗುಸುಗುಸು ಕೇಳಿಬರುತ್ತಿದೆ.

ಈ ವಾರ ಮನೆಯಿಂದ ಹೊರಹೋಗಲು ಎಂಟು ಮಂದಿ ನಾಮಿನೇಟ್ ಆಗಿದ್ದಾರೆ. ಈ ವಾರ 10ನೇ ಸೀಸನ್‌ ಸ್ಪರ್ಧಿಗಳಿಗೆ ಮನೆಯೊಳಗೆ ಅತಿಥಿಗಳಾಗಿ ಬಂದು ನಾಮಿನೇಷನ್‌ ಪ್ರಕ್ರಿಯೆಯಲ್ಲಿ ಸ್ಪರ್ಧಿಗಳಿಗೆ ಸಹಾಯ ಮಾಡುವ ಅವಕಾಶ ನೀಡಲಾಗಿತ್ತು. ಡಿ.10ರ ಎಪಿಸೋಡ್ ನಲ್ಲಿ ಮನೆಯೊಳಗೆ ತುಕಾಲಿ ಸಂತು, ವರ್ತೂರು ಸಂತೋಷ್‌, ತನಿಷಾ, ಡ್ರೋನ್ ಪ್ರತಾಪ್, ನಮ್ರತಾ ಗೌಡ ಮತ್ತು ಕೊನೆಯದಾಗಿ ಕಳೆದ ಸೀಸನ್‌ ವಿನ್ನರ್‌ ಕಾರ್ತಿಕ್‌ ಬಂದಿದ್ದರು.

ಇವರುಗಳ ಫನ್ ಮಾಡುವುದರ ಜೊತೆಗೆ, ಅವರ ನೇತೃತ್ವದಲ್ಲಿ ನಾಮಿನೇಷನ್ ಪ್ರಕ್ರಿಯೆ ನಡೆಯಿತು. ಬಿಗ್ ಬಾಸ್ ಮನೆಯಲ್ಲಿರುವ 11 ಸ್ಪರ್ಧಿಗಳ ಪೈಕಿ ಈ ವಾರ ಬಹುತೇಕ ಘಟಾನುಘಟಿಗಳು ನಾಮಿನೇಟ್ ಆಗಿದ್ದಾರೆ. ತ್ರಿವಿಕ್ರಮ್, ಭವ್ಯಾ ಗೌಡ, ಧನರಾಜ್​ ಆಚಾರ್, ಶಿಶಿರ್, ರಜತ್ ಕಿಶನ್, ಹನುಮಂತ ಹಾಗೂ ಚೈತ್ರಾ ನಾಮಿನೇಟ್ ಲಿಸ್ಟ್​ನಲ್ಲಿ ಇದ್ದಾರೆ.

ಜೊತೆಗೆ ಕ್ಯಾಪ್ಟನ್​ ಗೌತಮಿ ಜಾಧವ್​ ನೇರವಾಗಿ ಮೋಕ್ಷಿತಾ ಪೈ ನಾಮಿನೇಟ್ ಆಗಿದ್ದಾರೆ. ಈ 8 ಮಂದಿ ಪೈಕಿ ಈ ವಾರ ಬಿಗ್ ​ಬಾಸ್​ ಮನೆಯಿಂದ ಯಾವ ಸ್ಪರ್ಧಿ ಆಚೆ ಹೋಗಲಿದ್ದಾರೆ ಎಂದು ಕಾದು ನೋಡಬೇಕಿದೆ. ಒಂದು ಎಲಿಮಿನೇಷನ್ ಅಥವಾ ಎರಡು ಎಲಿಮಿನೇಷನ್ ಇದೆಯಾ ಎಂಬುದು ನೋಡಬೇಕಿದೆ.

BBK 11: ಮತ್ತೆ ಒಂದಾದ ಗೌತಮಿ-ಮೋಕ್ಷಿತಾ?: ಒಬ್ಬಂಟಿಯಾದ ಮಂಜು