ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಹನ್ನೆರಡನೇ ವಾರಕ್ಕೆ ಕಾಲಿಟ್ಟಿದೆ. ಟಾಸ್ಕ್ಗಳ ಕಾವು ಏರುತ್ತಿದ್ದು ಬಿಗ್ ಬಾಸ್ ಕಠಿಣ ಸವಾಲುಗಳನ್ನೇ ಸ್ಪರ್ಧಿಗಳಿಗೆ ನೀಡುತ್ತಿದ್ದಾರೆ. ಸದ್ಯ ಮನೆಯಲ್ಲಿ 10 ಮಂದಿ ಇದ್ದಾರಾಷ್ಟೆ. ಕಳೆದ ವಾರ ಮನೆಯಿಂದ ಅಚ್ಚರಿ ಎಂಬಂತೆ ಶಿಶಿರ್ ಶಾಸ್ತ್ರೀ ಎಲಿಮಿನೇಟ್ ಆಗಿ ಹೊರಬಂದರು. ಗೋಲ್ಡ್ ಸುರೇಶ್ ಅವರು ಕುಟುಂಬದಲ್ಲಿ ತೊಂದರೆಯಾದ ಕಾರಣ ಭಾನುವಾರ ರಾತ್ರಿ ಶೋನಿಂದ ಹೊರನಡೆದರು. ಹೀಗಾಗಿ ಸದ್ಯ ಮನೆಯಲ್ಲಿ ಹತ್ತು ಸ್ಪರ್ಧಿಗಳು ಉಳಿದುಕೊಂಡಿದ್ದಾರಷ್ಟೆ.
ಇದೀಗ ಈ ವಾರ ಮತ್ತೆ ನಾಮಿನೇಷನ್ ಪ್ರಕ್ರಿಯೆ ನಡೆಯಲಿದೆ. ಈ ವಾರ ಯಾರೆಲ್ಲ ನಾಮಿನೇಟ್ ಆಗಬಹುದು ಎಂಬ ಸಂಭಾವ್ಯ ಪಟ್ಟಿಯನ್ನು ನೋಡುವುದಾದರೆ.. ಇದರಲ್ಲಿ ಮೊದಲ ಹೆಸರು ಐಶ್ವರ್ಯಾ ಸಿಂಧೋಗಿ ಇರುವುದು ಖಚಿತ. ಐಶ್ವರ್ಯಾ ಅವರು ಹೆಚ್ಚಾಗಿ ಶಿಶಿರ್ ಜೊತೆಗೆನೇ ಹೆಚ್ಚಾಗಿ ಕಾಣಿಸಿಕೊಂಡಿದ್ದರಿಂದ ಟಾಸ್ಕ್ನಲ್ಲಿ ಭಾಗವಹಿಸುವಿಕೆ ಕಮ್ಮಿ ಆಗಿತ್ತು. ಇದೀಗ ಶಿಶಿರ್ ತೆರಳಿದ್ದು ಇವರು ಮತ್ತಷ್ಟು ಕುಗ್ಗಬಹುದು.
ನಾಮಿನೇಷನ್ ಲಿಸ್ಟ್ನಲ್ಲಿ ತ್ರಿವಿಕ್ರಮ್ ಇರುವುದು ಕೂಡ ಖಚಿತ. ಮನೆಯಲ್ಲಿ ಅನೇಕ ಮಂದಿಗೆ ಮುಖ್ಯವಾಗಿ ಮಹಿಳಾ ಸದಸ್ಯರಿಗೆ ತ್ರಿವಿಕ್ರಮ್ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ. ಹೀಗಾಗಿ ಇವರು ನಾಮಿನೇಟ್ ಆಗಬಹುದು. ಜೊತೆಗೆ ರಜತ್ ಕೂಡ ನಾಮಿನೇಟ್ ಆಗಬಹುದು. ಕಳೆದ ವಾರ ರಜತ್ ಟಾಸ್ಕ್ ಚೆನ್ನಾಗಿ ಆಡಿದ್ದರೂ ಇವರು ಆಡುವ ಮಾತು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೆ ಟಾಸ್ಕ್ನಲ್ಲಿ ಬಲಿಷ್ಠ ಇರುವ ಕಾರಣ ಇವರನ್ನು ನಾಮಿನೇಟ್ ಮಾಡಬಹುದು.
ಇವರ ಜೊತೆಗೆ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಲ್ಲಿ ಕೆಲವರ ವಿರೋಧ ಕಟ್ಟಿಕೊಂಡಿದ್ದಾರೆ. ವಟವಟ ಎಂದು ಮಾತನಾಡುತ್ತಿರುವುದು ಅನೇಕರಿಗೆ ಇಷ್ಟವಾಗುತ್ತಿಲ್ಲ. ಹೀಗಾಗಿ ಇವರ ಹೆಸರು ತೆಗೆದುಕೊಳ್ಳಬಹುದು. ಮೋಕ್ಷಿತಾ ಕೂಡ ನಾಮಿನೇಟ್ ಆಗುವ ಸಾಧ್ಯತೆ ಇದೆ. ಉಗ್ರಂ ಮಂಜು ಕಳೆದ ವಾರ ಫುಲ್ ಡಲ್ ಆಗಿದ್ದರು. ಹಿಂದಿನ ರೀತಿ ಕಾಣಿಸಿಕೊಂಡಿಲ್ಲ. ಈ ಕಾರಣಕ್ಕೆ ಇವರು ನಾಮಿನೇಟ್ ಆಗಬಹುದು. ಕಳೆದ ವಾರ ಡೇಂಜರ್ಝೋನ್ನಲ್ಲಿದ್ದ ಭವ್ಯಾ ಈ ವಾರ ಮನೆಯಿಂದ ಹೊರಹೋಗಲು ಆಯ್ಕೆ ಆಗುತ್ತಾರ ನೋಡಬೇಕಿದೆ.
BBK 11: ರಜತ್ರ ಮೈ-ಚಳಿ ಬಿಡಿಸಿದ ಪಾಸಿಟಿವ್ ಗೌತಮಿ: ಇಬ್ಬರ ಮಧ್ಯೆ ದೊಡ್ಡ ಗಲಾಟೆ