ಬಿಗ್ ಬಾಸ್ ಕನ್ನಡ ಸೀಸನ್ 11ರ ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಸಿಂಗರ್ ಹನುಮಂತ (Singer Hanumantha) ಎಲ್ಲರ ಮನೆ ಗೆಲ್ಲುತ್ತಿದ್ದಾರೆ. ತಮ್ಮ ಮಾತುಗಳಿಂದಲೇ ಕೇವಲ ಸ್ಪರ್ಧಿಗಳನ್ನು ಮಾತ್ರವಲ್ಲದೆ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತಿದ್ದಾರೆ. ಇವರ ಗ್ರಾಮೀಣ ಸೊಗಡಿನ ಭಾಷೆ, ಹಾಡುಗಳು ಗಮನ ಸೆಳೆಯುತ್ತಿದೆ. ಉತ್ತರ ಕರ್ನಾಟಕದವರಾದ ಇವರು ಫಿಕ್ಟರ್ ಇಲ್ಲದೇ ಆಡುವ ಕೆಲವು ಮಾತುಗಳು ಕೂಡ ನಗು ಉಕ್ಕಿಸುತ್ತಿವೆ.
ಆದರೆ, ಹನುಮಂತ ನಿಜಕ್ಕೂ ಇಷ್ಟೊಂದು ಮುಗ್ದನ ಅಥವಾ ನಾಟಕವಾಡುತ್ತಾ ಇದ್ದಾನಾ? ಎಂಬ ಅನುಮಾನ ಹಲವರಲ್ಲಿ ಇತ್ತು. ಇವರಿಗೆ ಟಾಯ್ಲೆಟ್ನಲ್ಲಿ ಫ್ಲಶ್ ಮಾಡೋದು ಹೇಗೆ ಅನ್ನೋದು ಗೊತ್ತಿಲ್ಲ. ಇದನ್ನು ಅವರೇ ಹೇಳಿಕೊಂಡಿದ್ದರು. ಇಷ್ಟೆಲ್ಲ ರಿಯಾಲಿಟಿ ಶೋ ಮಾಡಿದವರಿಗೆ ಅಷ್ಟೂ ಗೊತ್ತಾಗುವುದಿಲ್ಲವೇ ಎನ್ನುವ ಪ್ರಶ್ನೆ ಮೂಡೋದು ಸಹಜ. ವೀಕೆಂಡ್ನಲ್ಲಿ ಈ ವಿಚಾರದ ಬಗ್ಗೆ ಚರ್ಚೆ ಆಗಿದೆ. ದೊಡ್ಮನೆಗೆ ಅತಿಥಿಯಾಗಿ ಬಂದ ಯೋಗರಾಜ್ ಭಟ್ ಮನೆಮಂದಿ ಮುಂದೆ ಈ ಕುರಿತು ಪ್ರಶ್ನೆ ಇಟ್ಟಿದ್ದಾರೆ.
ಹನುಮಂತು ನಿಜಕ್ಕೂ ಇನ್ನೋಸೆಂಟ್ ಇದ್ದಾನಾ ಅಥವಾ ಸ್ಮಾರ್ಟ್ ಆಗಿದ್ದಾನಾ ಎಂದು ಭಟ್ರು ಮನೆಯವರಿಗೆ ಪ್ರಶ್ನೆ ಕೇಳಿದರು. ಇದಕ್ಕೆ ಸ್ಪರ್ಧಿಗಳು ನೇರವಾಗಿಯೇ ಉತ್ತರ ನೀಡಿದ್ದಾರೆ. ಶಿಶಿರ್ ಮಾತಾಡಿ, ಹನುಮಂತು ಬುದ್ದಿವಂತ, ದಡ್ಡ ಅಂತು ಅಲ್ಲವೇ ಅಲ್ಲ ಎಂದಿದ್ದಾರೆ. ಸ್ಮಾರ್ಟ್ ಆಗಿ ಆಟ ಆಡ್ತಿದ್ದಾನೆ ಎನ್ನುವಂತೆ ತ್ರಿವಿಕ್ರಮ್ ಕೂಡ ಮಾತಾಡಿದ್ದಾರೆ. ಅಷ್ಟಿಲ್ಲದೇ ಅಷ್ಟೋಂದು ಶೋಗಳಲ್ಲಿ ಭಾಗವಹಿಸಿ, ಕೆಲ ಕಾರ್ಯಕ್ರಮಗಳಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದಿದ್ದಾರೆ.
ನಂತರ ಈ ಅವಕಾಶವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾನೆ ಅನ್ಸುತ್ತಾ ಎಂದು ಭಟ್ರು ಮರು ಪ್ರಶ್ನಿಸಿದ್ದಾರೆ. ತಲೆ ಇದ್ದೇ ಅವರು ಬಂದಿದ್ದಾರೆ, ತಲೆ ಇದ್ದೇ ಅವರು ಆಟ ಆಡ್ತಿದ್ದಾರೆ, ತಲೆ ಇದ್ದೇ ಇದ್ದಾರೆ ಎಂದು ತ್ರಿವಿಕ್ರಮ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹನುಮಂತ ಬಹಳ ಕಂತ್ರಿ ಇದ್ದೀಯಾ ಅಂದ್ರೆ ಬಹಳ ಖತರ್ನಾಕ್ ಇದ್ದೀಯಾ ಅಂದ್ರೆ ಹೇಳ್ಬಿಡು ಎಂದು ಭಟ್ರು ಹನುಮಂತು ಬಳಿ ತಿಳಿಸಿದ್ದಾರೆ. ಒಟ್ಟಾರೆ ಮನೆ ಮಂದಿಯ ಮಾತು ಕೇಳಿದ ಹನುಮಂತು ತಬ್ಬಿಬ್ಬಾದಂತೆ ಕಾಣುತ್ತಿದೆ.
‘ಸರಿಗಮಪ’ ಖ್ಯಾತಿಯ ಹನುಮಂತ ಅವರು ಈಗಾಗಲೇ ಸಾಕಷ್ಟು ಹೆಸರು ಮಾಡಿದ್ದಾರೆ. ಗಾಯನ ಹಾಗೂ ಮುಗ್ಧತೆಯಿಂದಲೇ ಫೇಮಸ್ ಆಗಿದ್ದ ಇವರು ಗ್ರಾಮೀಣ ಪ್ರದೇಶ ಜನಪದ ಹಾಡುಗಳನ್ನು ಹಾಡುತ್ತ ಎಲ್ಲರ ಪ್ರೀತಿಯನ್ನು ಗಳಿಸಿದ್ದರು. ಸಾಕಷ್ಟು ಜನಪ್ರಿಯತೆ ಸಿಕ್ಕ ಹಿನ್ನೆಲೆಯಲ್ಲಿ ನಂತರ ಜೀ ಕನ್ನಡದ ಹಲವು ಶೋಗಳಲ್ಲಿ ಅವರು ಕಾಣಿಸಿಕೊಂಡರು. ಡಾನ್ಸ್ ಕರ್ನಾಟಕ ಡಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ, ಅಲ್ಲಿಯೂ ಹನುಮಂತ ಮಸ್ತ್ ಡ್ಯಾನ್ಸ್ ಮಾಡಿದ್ದರು. ಇದಾದ ಬಳಿಕ ಭರ್ಜರಿ ಬ್ಯಾಚುಲರ್ಸ್ನಲ್ಲೂ ಮೋಡಿ ಮಾಡಿ ವೀಕ್ಷಕರನ್ನು ನಕ್ಕು ನಲಿಸಿದ್ದರು.
BBK 11: ಇವತ್ತು ಸುದೀಪ್ ಬರಲ್ಲ: ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ ಕ್ಯಾನ್ಸಲ್