Thursday, 21st November 2024

Chaithra Kundapura Marriage: ಹಸೆಮಣೆ ಏರಲು ಸಜ್ಜಾದ ಚೈತ್ರಾ ಕುಂದಾಪುರ: ವರ ಯಾರು ಗೊತ್ತೇ?

Chaithra Kundapura Marriage

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ತನ್ನ ನೇರ ಮಾತುಗಳಿಂದ ಕೆಲವರ ವಿರೋಧ ಕಟ್ಟುಕೊಂಡು, ಇನ್ನೂ ಕೆಲವರ ಪ್ರೀತಿಯನ್ನು ಸಂಪಾದಿಸಿರುವ ಸ್ಪರ್ಧಿ ಎಂದರೆ ಅದು ಚೈತ್ರಾ ಕುಂದಾಪುರ (Chaithra Kundapura). ಮೂಲತಃ ಕುಂದಾಪುರದವರಾದ ಚೈತ್ರಾ ಫೈರ್ ಬ್ರ್ಯಾಂಡ್ ಎಂದೇ ಫೇಮಸ್. ವಾಗ್ಮಿಯಾಗಿ ಗುರುತಿಸಿಕೊಂಡಿದ್ದ ಇವರು ಕಳೆದ ವರ್ಷ ಕೇಸ್ ಒಂದರಲ್ಲಿ ಜೈಲಿಗೆ ಹೋಗಿದ್ದರು. ಬಳಿಕ ಜಾಮೀನಿನಲ್ಲಿ ಹೊರಬಂದು ಬಿಗ್ ಬಾಸ್ ಮನೆಗೆ ಸೇರಿದಿದ್ದಾರೆ. ಇದೀಗ ದೊಡ್ಮನೆಯಲ್ಲಿ ಚೈತ್ರಾ ದೊಡ್ಡ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ.

ಜೈಲಿಗೆ ಹೋಗಿ ಬಂದ ಬಳಿಕ ಚೈತ್ರಾ ಮೇಲಿದ್ದ ಗೌರವ ಕಡಿಮೆ ಆಗಿತ್ತು. ಆದರೆ, ಈಗ ಬಿಗ್ ಬಾಸ್ ನೋಡುತ್ತಿರುವವರಿಗೆ ಅವರ ಮೇಲಿದ್ದ ಭಾವನೆ ನಿಧಾನವಾಗಿ ಬದಲಾಗುತ್ತಿದೆ. ತನ್ನ ನೇರ ಮಾತುಗಳಿಂದಲೇ ಜನರಿಗೆ ಹತ್ತಿರವಾಗುತ್ತಿದ್ದಾರೆ. ಹೀಗಿರುವಾಗ ಚೈತ್ರಾ ಕುಂದಾಪುರ ಅವರಿಗೆ ಮದುವೆ ಫಿಕ್ಸ್‌ ಆಗಿರುವ ಸುದ್ದಿ ಹೊರಬಿದ್ದಿದೆ. ಸ್ವತಃ ಅವರೇ ಈ ವಿಚಾರವನ್ನು ಬಾಯ್ಬಿಟ್ಟಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಚೈತ್ರಾ, ಹಂಸಾ ಹಾಗೂ ಮಾನಸಾ ಒಂದು ಕಡೆ ಕುಳಿತು ಮಾತನಾಡುತ್ತಿದ್ದರು. ಆಗ ಹಂಸ ಅವರು, ‘ನಂದು, ರಂಜಿತ್ ಹಾಗೂ ತ್ರಿವಿಕ್ರಮ್ ಅವರದ್ದು ಲವ್​ಸ್ಟೋರಿ ಎಂದು ಸುರೇಶ್ ಹೇಳಿಕೆ ಕೊಟ್ಟರು. ಹೀಗೆಲ್ಲ ಹೇಳಿದ್ರೆ ಕಷ್ಟ ಆಗುತ್ತದೆ. ಅವರ ಜೊತೆ ಯಾಕೆ ಕ್ಲೋಸ್ ಆದೆ ಎಂದರೆ ಅವರು ಯಾರ ಬಗ್ಗೆಯೂ ಮಾತನಾಡಲ್ಲ. ಆದರೆ ಸುರೇಶ್ ಜೊತೆ ಕುಳಿತರೆ ನೆಗೆಟಿವ್ ವೈಬ್ಸ್ ಜಾಸ್ತಿ. ಈ ಕಾರಣಕ್ಕೆ ರಂಜಿತ್ ಹಾಗೂ ತ್ರಿವಿಕ್ರಂ ಜೊತೆ ಕ್ಲೋಸ್ ಆಗಿದ್ದೇನೆ. ಈ ರೀತಿ ವೀಕೆಂಡ್‌‌ನಲ್ಲಿ ಹೇಳಿದ್ದು ನನಗೆ ಸ್ವಲ್ಪವೂ ಸರಿ ಎನಿಸಿಲ್ಲ’ ಎಂದು ಹೇಳುತ್ತಾರೆ.

ಈ ಸಂದರ್ಭ ಮಾತನಾಡಿದ ಚೈತ್ರಾ, ‘ನಾನು ವಿಕ್ಕಿ ಜತೆ ಕ್ಲೋಸ್ ಆಗಿದ್ದೇನೆ ಎಂದು ಸುರೇಶ್​ ಅಣ್ಣ ಹೆಳುತ್ತಲೇ ಇದ್ದಾರೆ. ಅದು ಅಲ್ಲದೇ ಸುರೇಶ್‌ ಅವರಿಗೆ ಎಲ್ಲಿ ಯಾರ ಜತೆ ಏನು ಮಾತನಾಡಬೇಕು ಎಂಬುದು ಗೊತ್ತಿಲ್ಲ. ಒಂದು ವೇಳೆ ನನಗೂ ಈ ರೀತಿ ಲವ್‌ ಸ್ಟೋರಿ ಕಟ್ಟಿದರೆ ನಾನು ಸುಮ್ಮನೆ ಇರಲ್ಲ. ಮೆಟ್ಟು​ ತೆಗೆದುಕೊಂಡು ಹೊಡೆಯುತ್ತೇನೆ. ಬಿಗ್ ಬಾಸ್​ನಿಂದ ಹೊರ ಹೋದರೂ ನನಗೆ ಚಿಂತೆ ಇಲ್ಲ. ನನ್ನ ಕ್ಯಾರೆಕ್ಟರ್‌ಗೆ ಯಾರಾದರೂ ಕೈ ಹಾಕಿದರೆ ಸುಮ್ಮನೇ ಬಿಡಲ್ಲ ನಾನು. ಅದು ಅಲ್ಲದೇ ನಾನು ಮದುವೆ ಫಿಕ್ಸ್‌ ಮಾಡಿಕೊಂಡು ಬಂದಿದ್ದೇನೆ’ ಎಂದು ಹೇಳಿದ್ದಾರೆ. ಆದರೆ, ಮದುವೆ ಗಂಡು ಯಾರು ಎಂಬುದನ್ನು ಮಾತ್ರ ರಿವೀಲ್ ಮಾಡಿಲ್ಲ.

BBK 11: ಜಗಳಗಳಿಂದ ಕೂಡಿದ್ದ ಬಿಗ್ ಬಾಸ್​ ಮನೆಯ ವಾತಾವರಣ ಬದಲಾಯಿಸಿದ ಹನುಮಂತ