ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada) ಶುರುವಾದಾಗಿನಿಂದ ದೊಡ್ಮನೆಯೊಳಗೆ ಒಂದು ದಿನವೂ ನೆಮ್ಮದಿ ಇಲ್ಲದಂತಾಗಿದೆ. ಈ ಎರಡೂವರೆ ವಾರಗಳಲ್ಲಿ ಪ್ರತಿ ದಿನ ಜಗಳಗಳು ನಡೆಯುತ್ತಲೇ ಇದೆ. ಜಗಳ ನಡೆಯಲಿಲ್ಲ ಎಂದು ಹೇಳಬಹುದಾದ ಒಂದು ದಿನ ಕೂಡ ಇಲ್ಲ. ಕಳೆದ ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದರೂ ಒಂದು ಪೈಸೆ ಪ್ರಯೋಜನವಾಗುತ್ತಿಲ್ಲ. ಮನೆಯ ವಾತಾವರಣ ದಿನದಿಂದ ದಿನಕ್ಕೆ ಹದಗೆಡುತ್ತಲೇ ಇದೆ.
ಇಂದಿನ ಎಪಿಸೋಡ್ನಲ್ಲಿ ಕೂಡ ಬಿಗ್ ಬಾಸ್ ಮನೆಯಲ್ಲಿ ದೊಡ್ಡ ಜಗಳ ನಡೆದಿದೆ. ಈ ಬಾರಿ ಸ್ವತಃ ಬಿಗ್ ಬಾಸ್ ತಾಳ್ಮೆ ಕಳೆದುಕೊಂಡು ಇಡೀ ಮನೆಯ ಮೇಲೆ ರೇಗಾಡಿದ್ದಾರೆ. ಮುಖ್ಯವಾಗಿ ಜಗದೀಶ್ ಅವರ ವರ್ತನೆ ಮಿತಿ ಮೀರುತ್ತಿದೆ. ಬೇಕಂತಲೇ ಎಲ್ಲರನ್ನೂ ಕೆರಳಿಸುತ್ತಿದ್ದಾರೆ. ಇದು ಅನೇಕರ ಕೋಪಕ್ಕೆ ಕಾರಣ ಆಗಿದೆ. ಈ ಮಧ್ಯೆ ಅವರು ಬಿಗ್ ಬಾಸ್ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ಯಾರೊಬ್ಬರೂ ಇದನ್ನು ಸಹಿಸಿಲ್ಲ. ಇಲ್ಲಿಂದ ಹೊತ್ತಿಕೊಂಡ ಬೆಂಕಿ ಇನ್ನೂ ಆರುತ್ತಿಲ್ಲ. ಇಡೀ ಮನೆ ಜಗದೀಶ್ ವಿರುದ್ಧ ತಿರುಗಿ ನಿಂತಿದೆ.
ಇತಿ-ಮಿತಿ ಎಲ್ಲವೂ ಮರೆತ ಸ್ಪರ್ಧಿಗಳು ಎಂದು ಕಲರ್ಸ್ ಕನ್ನಡ ಇಂದಿನ ಎಪಿಸೋಡ್ನ ಪ್ರೋಮೋ ರಿಲೀಸ್ ಮಾಡಿದೆ. ಇದರಲ್ಲಿ ಕ್ಯಾಪ್ಟನ್ ಶಿಶಿರ್ ಅವರು ತಮ್ಮ ಮೊದಲ ನಾಮಿನೇಷನ್ ಧರ್ಮ ಅವರು ಎಂದು ಹೇಳುತ್ತಾರೆ. ಇದಕ್ಕೆ ಲಾಯರ್ ಜಗದೀಶ್ ಅವರು ನೀವು ಅವರನ್ನು ಟಾರ್ಗೆಟ್ ಮಾಡುತ್ತಿದ್ದೀರಿ ಎಂದು ನನಗನಿಸುತ್ತಿದೆ ಎಂದಿದ್ದಾರೆ. ಈ ವೇಳೆ ಮಾನಸ ಎಲ್ಲದಕ್ಕೂ ಬಾಯಿ ಹಾಕುತ್ತಿರಲ್ಲ ಎಂದು ಜಗದೀಶ್ ಅವರಿಗೆ ಆವಾಜ್ ಹಾಕಿದ್ದಾರೆ. ಆಗ ಮನೆ ಮಂದಿಯೆಲ್ಲ ಎದ್ದು ಜಗಳಕ್ಕೆ ನಿಂತಿದ್ದಾರೆ.
ನಾಮಿನೇಟ್ ಆದವರೇ ಸುಮ್ಮನೆ ಇದ್ದಾರೆ, ನಿಂದೇನು ಲೇ, ಹೋಗಲೇ, ನಿಮ್ಮನೇ ಮುಂದೆ ನಿಂತಿದ್ದೇನಾ? ಎಂದು ಜಗದೀಶ್ಗೆ ತ್ರಿವಿಕ್ರಮ್ ಏಕವಚನದಲ್ಲೇ ಹೇಳಿದ್ದಾರೆ. ಇದೇ ವೇಳೆ ಮಂಜು ಬಂದು ಥೂ ನಿನ್ನ ಯೋಗ್ಯತೆಗೆ, ಹೋಗಲೇ.. ಹೋಗಲೇ.. ಎಂದು ಜಗದೀಶ್ಗೆ ಹೇಳಿದ್ದಾರೆ. ಇನ್ನು ಈ ರೀತಿ ಹೇಳುವಾಗ ಜಗದೀಶ್ ಹಾಗೂ ಮಂಜು ಇಬ್ಬರು ಫೇಸ್ ಟು ಫೇಸ್ ಇದ್ದರು.
ಇತಿ-ಮಿತಿ ಎಲ್ಲವೂ ಮರೆತ ಸ್ಪರ್ಧಿಗಳು!
— Colors Kannada (@ColorsKannada) October 16, 2024
"ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa" pic.twitter.com/xT5O01u0Gm
ಮನೆ ಮತ್ತೊಮ್ಮೆ ರಣರಂಗ ಆಗಿರುವುದನ್ನು ಕಂಡ ಬಿಗ್ ಬಾಸ್ ಮಧ್ಯೆ ಪ್ರವೇಶಿಸಿದ್ದಾರೆ. ಎಲ್ಲರೂ ಸುಮ್ನೆ ಇರಬೇಕು.. ಎಲ್ಲರೂ ಸೋಪಾದಲ್ಲಿ ಕುಳಿತುಕೊಳ್ಳಿ, ಯಾರೂ ಸದ್ದು ಮಾಡೋ ಹಂಗಿಲ್ಲ ಅಂತಲೇ ಬಿಗ್ ಬಾಸ್ ಸಿಟ್ಟಿಗೆದ್ದೇ ಹೇಳಿದ್ದಾರೆ.