ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಕಿತ್ತಾಟಗಳು ಹೆಚ್ಚಾಗುತ್ತಲೇ ಇವೆ. ಪ್ರತಿ ದಿನ ಮನೆಯಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಜಗಳಗಳು ಆಗುತ್ತಿವೆ. ಈ ವಾರ ಮೊದಲ ಕ್ಯಾಪ್ಟನ್ ಆಗಿ ಹಂಸ ಆಯ್ಕೆಯಾಗಿದ್ದರೂ ಮನೆಯೊಳಗೆ ನೆಮ್ಮದಿ ಇಲ್ಲದಂತಾಗಿದೆ. ಒಂದು ಲೆಕ್ಕದಲ್ಲಿ ಮನೆಯ ಸದಸ್ಯರು ಕ್ಯಾಪ್ಟನ್ ವಿರುದ್ಧವೇ ಅಸಮಾಧಾನಗೊಂಡಿದ್ದಾರೆ.
ಹೌದು, ಟಾಸ್ಕ್ ಮಧ್ಯೆ ಕ್ಯಾಪ್ಟನ್ ತೆಗೆದುಕೊಂಡ ಕೆಲ ನಿರ್ಧಾರಗಳು ಮನೆಯಲ್ಲಿ ಭಾರೀ ಚರ್ಚೆ ಆಗುತ್ತಿವೆ. ಸ್ವರ್ಗ ಮತ್ತು ನರಕ ವಾಸಿಗಳು ಎರಡೂ ತಂಡದವರು ಕ್ಯಾಪ್ಟನ್ ಹಂಸ ವಿರುದ್ಧ ತಿರುಗಿ ನಿಂತಿದ್ದು, ಜೋರು ಗಲಾಟೆ ನಡೆದಿದೆ. ಟಾಸ್ಕ್ನ ಉಸ್ತುವಾರಿಯನ್ನು ಹಂಸ ಸರಿಯಾಗಿ ನಿಭಾಯಿಸಿಲ್ಲ ಎಂದು ಸರ್ಧಿಗಳು ದೂರಿದ್ದಾರೆ.
ಮನೆಯ ಸದಸ್ಯರಿಗೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದಾರೆ. ಇದರ ಹೆಸರು ಗೊಬ್ಬರದ ಅಬ್ಬರ. ಗಾರ್ಡರ್ ಏರಿಯಾದಲ್ಲಿ ಗೇಮ್ಗೆ ಸೆಟ್ ನಿರ್ಮಿಸಲಾಗಿದೆ. ಈ ಸೆಟ್ ಒಳಗಡೆ ಸಗಣಿ ಹಾಕಲಾಗಿದೆ. ಇಲ್ಲಿ ಸ್ಪರ್ಧಿಗಳ ಕೈ ಮತ್ತು ಕಾಲುಗಳಿಗೆ ಟೇಪ್ ಕಟ್ಟಿರಲಾಗುತ್ತದೆ. ಅವರು ತಮ್ಮ ಬಣ್ಣದ ಚೆಂಡುಗಳನ್ನು ಈ ಸೆಟ್ನ ಒಳಗಡೆಯಿಂದ ದೂಡಿಕೊಂಡು ತಂದು ತಮಗೆ ಮೀಸಲಿಡುವ ಸ್ಟ್ಯಾಂಡ್ನಲ್ಲಿ ಇಡಬೇಕು. ಇದರ ಉಸ್ತುವಾರಿಯನ್ನು ಹಂಸ ವಹಿಸಿಕೊಂಡಿದ್ದಾರೆ.
ಈ ಟಾಸ್ಕ್ ನಡೆಯುವ ವೇಳೆ ಧನರಾಜ್ ಆಚಾರ್ ಜಿಗಿಯುತ್ತಾ ಬಂದಿರುವುದು ನರಕ ನಿವಾಸಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ತೆವಳಿಕೊಂಡು ಬರಬೇಕೆಂದು ಇರೋದಲ್ವಾ? ಜಂಪ್ ಮಾಡೋಕೆ ಅವಕಾಶ ಕೊಡಂಗಿಲ್ಲ ಎನ್ನುತ್ತಾರೆ ನರಕ ನಿವಾಸಿಗಳು. ಕಣ್ಣಿಲ್ವಾ ನಿಮಗೆ ನೋಡೋಕೆ ಎಂದು ಜಗದೀಶ್ ಅವರು ಕ್ಯಾಪ್ಟನ್ಗೆ ಬೈದಿದ್ದಾರೆ. ಯಾವ ಸೀಮೆ ಕ್ಯಾಪ್ಟನ್ ರೀ ನೀವು ಎಂದು ಚೈತ್ರಾ ಕುಂದಾಪುರ ಸಿಟ್ಟಾಗಿದ್ದಾರೆ.
ಟಾಸ್ಕ್ ಮುಗಿದ ಬಳಿಕ ಶಿಶಿರ್ ಅವರು, ಧನರಾಜ್ ಬೇಕು ಅಂತ ಮಾಡಿಲ್ಲ. ಅವರಿಗೆ ಏನು ಅನ್ನಿಸಿತು ಅದನ್ನ ಮಾಡಿದ್ದಾರೆ ಎಂದು ಹೇಳಿದ್ದಾರೆ. ಅದೇ ವೇಳೆಗೆ ಮಾನಸಾ ಅವರು ನಾನು ಅವರ ಬಗ್ಗೆ ಮಾತನಾಡ್ತಿಲ್ಲ. ಆಟಗಾರರು ನಾವು ಇಷ್ಟ ಬಂದಂಗ ಆಡ್ತೀವಿ. ಆದರೆ ಉಸ್ತುವಾರಿ ಅಂತ ಏನಕ್ಕೆ ಬಿಟ್ಟಿರ್ತಾರೆ? ಎಂದು ಹೇಳಿದ್ದಾರೆ. ಅವರಿಗೆ ಡಿಸಿಷನ್ ತೆಗೆದುಕೊಳ್ಳಲು ಗೊತ್ತಿಲ್ಲ. ಅವರಿಗೆ ಯಾರೋ ಬಂದು ಹೇಳಬೇಕು ನಂದರ ನಿರ್ಧಾರ ಮಾಡ್ತಾರೆ. ಅವರಿಗೆ ಸ್ವಂತಿಕೆ ಇಲ್ಲ ಎಂದು ಜಗದೀಶ್ ಹೇಳಿದ್ದಾರೆ.
ಅತ್ತ ಸ್ವರ್ಗದಲ್ಲಿ ಉಗ್ರಂ ಮಂಜು ಹಾಗೂ ತ್ರಿವಿಕ್ರಮ್ ಕೂಡ ಕ್ಯಾಪ್ಟನ್ ಬಗ್ಗೆಯೇ ಮಾತನಾಡಿದ್ದಾರೆ. ಗೋಲ್ಡ್ ಸುರೇಶ್ ಕ್ಯಾಮೆರಾ ಬಳಿ ಬಂದು ನಾವು ಇನ್ಮೇಲೆ ಯಾವ ಗೇಮೂ ಆಡಲ್ಲ. ಮೋಸ, ಅನ್ಯಾಯ ಆಗಿದೆ ಎಂದು ಕಿರುಚಾಡಿದ್ದಾರೆ. ಒಟ್ಟಿನಲ್ಲಿ ಮೊದಲ ವಾರದ ಕ್ಯಾಪ್ಟನ್ ಆಗಿ ಆಯ್ಕೆಯಾದ ಹಂಸ ಅವರು ಟಾಸ್ಕ್ ವೇಳೆ ತೆಗೆದುಕೊಂಡ ನಿರ್ಧಾರ ಮನೆ ಮಂದಿಯಲ್ಲಿ ಅಸಮಾಧಾನ ಹುಟ್ಟುಹಾಕಿದ್ದು, ಇಂದಿನ ಎಪಿಸೋಡ್ ಕುತೂಹಲ ಕೆರಳಿದೆ.
BBK 11: ಸಿಡಿದೆದ್ದ ಜಗದೀಶ್-ಚೈತ್ರಾ ಕುಂದಾಪುರ: ನರಕ ವಾಸಿಗಳ ಆರ್ಭಟಕ್ಕೆ ಕ್ಯಾಪ್ಟನ್ ಹಂಸ ಗಪ್ಚುಪ್