ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಸಾಕಷ್ಟು ರೋಚಕತೆ ಸೃಷ್ಟಿಸುತ್ತಿದೆ. ಊಹಿಸಲಾಗದ ಅನೇಕ ಘಟನೆಗಳು ನಡೆಯುತ್ತಿದೆ. ಹಿಂದಿನ ಸೀಸನ್ಗಳಿಗೆ ಹೋಲಿಸಿದರೆ ಈ ಬಾರಿಯ ಸೀಸನ್ ಅನೇಕ ಟ್ವಿಸ್ಟ್ಗಳಿಂದ ಕೂಡಿದೆ. ಹನ್ನೊಂದನೇ ವಾರ ಮನೆಯಿಂದ ಚೈತ್ರಾ ಕುಂದಾಪುರ ಎಲಿಮಿನೇಟ್ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ, ಅಚ್ಚರಿ ಎಂಬಂತೆ ಶಿಶಿರ್ ಶಾಸ್ತ್ರೀ ಎಲಿಮಿನೇಟ್ ಆಗಿ ಆಚೆ ಬಂದಿದ್ದಾರೆ. ಇದರ ಜೊತೆಗೆ ಮತ್ತೋರ್ವ ಸ್ಪರ್ಧಿ ಕೂಡ ದೊಡ್ಮನೆಯಿಂದ ಹೊರಬಂದಿದ್ದಾರೆ.
ಹೌದು, ಶಿಶಿರ್ ಶಾಸ್ತ್ರೀ ಎಲಿಮಿನೇಟ್ ಆಗಿ ಹೊರಬಂದರೆ ಅತ್ತ ಗೋಲ್ಡ್ ಸುರೇಶ್ ಕೂಡ ವೈಯಕ್ತಿಕ ಕಾರಣಗಳಿಂದ ಬಿಗ್ ಬಾಸ್ ತೊರೆದಿದ್ದಾರೆ. ಗೋಲ್ಡ್ ಸುರೇಶ್ ಅವರಿಗೆ ಮನೆಯಿಂದ ಒಂದು ತುರ್ತು ಮೆಸೇಜ್ ಬಂದ ಕಾರಣದಿಂದ ಅವರು ಮನೆಯಿಂದ ಹೊರಬಂದಿದ್ದಾರೆ.
ಇಂದು ಗೋಲ್ಡ್ ಸುರೇಶ್ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ. ಹಾಗಾಗಿ ಅವರ ಅವಶ್ಯಕತೆ ಬಿಗ್ ಬಾಸ್ ಮನೆಯಿಂದ ಅವರ ಕುಟುಂಬದವರಿಗೆ ಜಾಸ್ತಿ ಇದೆ. ಹೆಚ್ಚು ತಡ ಮಾಡದೇ ವಸ್ತುಗಳನ್ನು ಪ್ಯಾಕ್ ಮಾಡಿಕೊಂಡು ಕೂಡಲೇ ಬಿಗ್ ಬಾಸ್ ಮನೆಯಿಂದ ಹೊರಗೆ ಬನ್ನಿ ಎಂದು ಬಿಗ್ ಬಾಸ್ ಸುರೇಶ್ಗೆ ಸೂಚನೆ ನೀಡಿದರು.
ಶೋ ಆರಂಭವಾದಾಗ ಶಿಶಿರ್ ಶಾಸ್ತ್ರೀ ಕಠಿಣ ಸ್ಪರ್ಧಿಯಂತೆ ಕಂಡಿದ್ದರು. ಅದರಂತೆ ಎರಡನೇ ವಾರ ಕ್ಯಾಪ್ಟನ್ ಕೂಡ ಆದರು. ಆದರೆ, ನಂತರ ಇವರ ಆಟ ನಿಧಾನವಾಗತೊಡಗಿತು. ಆಟದಲ್ಲಿ ಹೆಚ್ಚೇನು ಕಾಣಿಸಲಿಲ್ಲ. ಮೂಲೆಗುಂಪಾದಂತೆ ಕಂಡರು. ಕಿಚ್ಚ ವೀಕೆಂಡ್ನಲ್ಲಿ ಬಂದು ಇವರಿಗೆ ಅನೇಕ ಭಾರೀ ಎಚ್ಚರಿಕೆ ನೀಡಿದರು ಅದು ಪ್ರಯೋಜನ ಆಗಲಿಲ್ಲ. ಕಳೆದ ಎರಡು ವಾರಗಳಿಂದ ಡೇಂಜರ್ಝೋನ್ನಲ್ಲಿ ಹೆಚ್ಚು ಕಾಣಿಸಿಕೊಂಡರು. ಇದೀಗ ಎಲಿಮಿನೇಟ್ ಆಗಿ ಆಚೆ ಬಂದಿದ್ದಾರೆ.
BBK 11: 11ನೇ ವಾರಕ್ಕೆ ಬಿಗ್ ಬಾಸ್ ಪ್ರಯಾಣ ಅಂತ್ಯಗೊಳಿಸಿದ ಶಿಶಿರ್ ಶಾಸ್ತ್ರೀ