ನವದೆಹಲಿ: ಚಂಡೀಗಢ ಬಿಜೆಪಿ ಸಂಸದೆ ಕಿರಣ್ ಖೇರ್‌ಗೆ ರಕ್ತದ ಕ್ಯಾನ್ಸರ್ ಇರುವ ಕುರಿತು ಈ ಕುರಿತು ತಿಳಿಸಿರುವ ನಟ ಅನುಪಮ್ ಖೇರ್, ಪತ್ನಿಗೆ ರಕ್ತದ ಕ್ಯಾನ್ಸರ್ ಇರುವುದು ಪರೀಕ್ಷೆ ವೇಳೆ ತಿಳಿದುಬಂದಿದೆ.
ಆಕೆ ಸಾಕಷ್ಟು ಜನರ ಪ್ರೀತಿ ಪಾತ್ರಳಾಗಿದ್ದು, ನಿಮ್ಮ ಪ್ರೀತಿಯಿಂದಲೇ ಆಕೆ ಗುಣಮುಖಳಾಗುತ್ತಾಳೆ, ಹೀಗೆಯೇ ನಿಮ್ಮ ಪ್ರೀತಿ ತೋರಿಸುತ್ತಿರಿ, ಆಕೆ ಚೇತರಿ ಕೆಯ ಹಾದಿಯಲ್ಲಿದ್ದು, ನಿಮ್ಮ ಬೆಂಬಲ ಹಾಗೂ ಪ್ರೀತಿಗೆ ಚಿರ ಋಣಿಯಾಗಿ ದ್ದೇನೆ ಎಂದು ಬರೆದಿ ದ್ದಾರೆ.
ಕಿರಣ್ ಖೇರ್ ಅಪರೂಪದ ರಕ್ತದ ಕ್ಯಾನ್ಸರ್ (myeloma)ದಿಂದ ಬಳಲು ತ್ತಿದ್ದಾರೆ, ಸದ್ಯ ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ವರ್ಷ ನವೆಂಬರ್ 11ರಂದು ಅವರ ಎಡಕಾಲು ಮೂಳೆ ಮುರಿದಿತ್ತು. ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆಯ ನಂತರ ಅವರಿಗೆ ಅಪರೂಪದ ಬ್ಲಡ್ ಕ್ಯಾನ್ಸರ್ ಇರುವುದು ತಿಳಿದುಬಂದಿತ್ತು.
ಈ ರೋಗವು ಬಳಿಕ ಬಲಗಾಲು, ಕೈಗಳಿಗೂ ಹರಡುತ್ತಿತ್ತು. ಹೀಗಾಗಿ ಡಿಸೆಂಬರ್ 4 ರಂದು ಮುಂಬೈಗೆ ಚಿಕಿತ್ಸೆಗೆಂದು ತೆರಳಿದ್ದರು. ನಾಲ್ಕು ತಿಂಗಳ ಚಿಕಿತ್ಸೆ ಬಳಿಕ ಇದೀಗ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಾರೆ. ಅವರನ್ನು ಹೆಚ್ಚು ದಿನಗಳ ಕಾಲ ಆಸ್ಪತ್ರೆಯಲ್ಲಿರಿಸುವು ದಿಲ್ಲ, ಆಗಾಗ ಆಸ್ಪತ್ರೆಗೆ ಬಂದುಹೋಗಬೇಕಾಗುತ್ತದೆ ಎಂದಿದ್ದಾರೆ.
2014ರಲ್ಲಿ ಕಿರಣ್ ಖೇರ್ ರಾಜಕೀಯ ಪ್ರವೇಶಿಸಿದ್ದರು. ಅವರು ಇಂಡಿಯಾಸ್ ಗಾಟ್ ಟಾಲೆಂಟ್‌ನ ಜಡ್ಜ್ ಕೂಡ ಆಗಿದ್ದರು.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ