Sunday, 15th December 2024

ಬಾಲಿವುಡ್ ನಟ ಗೋವಿಂದ ಅವರಿಗೆ ಕರೋನಾ ಪಾಸಿಟಿವ್‌

ಮುಂಬೈ: ಬಾಲಿವುಡ್ ನ ನಟ ಗೋವಿಂದ ಅವರಿಗೆ ಕರೋನಾ ಸೋಂಕು ದೃಢವಾಗಿದೆ. ಗೋವಿಂದ ಅವರಿಗೆ ಕೆಲ ರೋಗ ಲಕ್ಷಣ ಗಳು ಕಂಡುಬಂದಿದೆ. ಅವರು ಮನೆಯಲ್ಲಿಯೇ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಪತ್ನಿ ಸುನಿತಾ ಹೇಳಿದ್ದಾರೆ.

ಗೋವಿಂದ ಅವರ ವಕ್ತಾರ ಈ ವಿಚಾರವನ್ನು ಸ್ಪಷ್ಟಪಡಿಸಿದ್ದು, ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಪಾಲಿಸಿದರೂ ದುರ ದೃಷ್ಟವಶಾತ್ ಗೋವಿಂದ ಅಹುಜಾ ಅವರಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದಿದ್ದಾರೆ. ಕೆಲ ದಿನಗಳ ಹಿಂದೆ ಗೋವಿಂದ ಅವರ ಪತ್ನಿ ಸುನಿತಾ ಅವರಿಗೂ ಕೋವಿಡ್ ಪಾಸಿಟಿವ್ ಆಗಿತ್ತು.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

https://www.facebook.com/Vishwavanidaily