ಮುಂಬೈ: ಡ್ರಗ್ಸ್ ನಂಟು ಪ್ರಕರಣದಲ್ಲಿ ಈಗಾಗಲೇ ಬಂಧಿಯಾಗಿರುವ ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಅವರೊಂದಿಗೆ ನಂಟು ಹೊಂದಿರುವ ಶಂಕೆಯಲ್ಲಿ ನಟಿ ಶ್ರದ್ದಾ ಕಪೂರ್, ಸಾರಾ ಅಲಿ ಖಾನ್ ಅವರಿಗೂ ಎನ್‌ಸಿಬಿಯಿಂದ ಸಮನ್ಸ್ ನೀಡುವ ಸಾಧ್ಯತೆ ಇದೆ.
ಎನ್‌ಡಿಪಿಎಸ್ ಕಾಯಿದೆ ಪ್ರಕಾರ, ಇಬ್ಬರು ನಟಿಯರ ವಿಚಾರಣೆ ನಡೆಸಲು ಸಮನ್ಸ್ ನೀಡಲಿದ್ದು, ಈ ಪಟ್ಟಿಯಲ್ಲಿ ರಾಕುಲ್ ಪ್ರೀತ್ ಸಿಂಗ್ ಹಾಘೂ ಸಿಮೊನೆ ಖಂಬಟ್ಟಾ ಕೂಡ ಇರುವುದು ಮೂಲಗಳಿಂದ ತಿಳಿದು ಬಂದಿದೆ. ನಟಿ ರಾಕುಲ್ ಅವರು, ತನಗೆ ವೈಯಕ್ತಿಕ ಗೌರವಕ್ಕೆ ಧಕ್ಕೆ ಬರಬಾರದೆಂದು, ಹಾಗೂ ಡ್ರಗ್ಸ್ ನಂಟು ಕುರಿತಂತೆ ಯಾವುದೇ ವಿಚಾರವನ್ನು ಚಾನೆಲ್‌ಗಳಲ್ಲಿ ಹಾಗೂ ಪತ್ರಿಕೆಗಳಲ್ಲಿ ಪ್ರಕಟಿಸಲು ನಿಷೇಧಿಸುವಂತೆ ನಿರ್ದೇಶನ ನೀಡಬೇಕೆಂದು ದೆಹಲಿ ಹೈಕೋರ್ಟ್‌ನಲ್ಲಿ ಮನವಿ ಮಾಡಿದ್ದರು.
ಈ ವಿಚಾರಕ್ಕೆ ಕುರಿತಂತೆ, ಹೈಕೋರ್ಟ್, ಕೇಂದ್ರ ಸರ್ಕಾರ, ಪ್ರಸಾರ ಭಾರತಿ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಕ್ಕೆ ನೋಟೀಸ್ ಕಳಿಸಿತ್ತು.