Tuesday, 17th September 2024

ತಮಿಳಿನ ಹಾಸ್ಯನಟ ಬೋಂಡಾ ಮಣಿ ಇನ್ನಿಲ್ಲ

ಚೆನ್ನೈ: ತಮಿಳಿನ ಜನಪ್ರಿಯ ಹಾಸ್ಯನಟ ಬೋಂಡಾ ಮಣಿ (60)ಮೂತ್ರಪಿಂಡ ಸಂಬಂಧಿ ಕಾಯಿಲೆಯಿಂದ ನಿಧನರಾದರು ಎಂದು ಮೂಲಗಳು ತಿಳಿಸಿವೆ.

ಅವರು ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಮಣಿ ಅವರು ಪೊಜಿಚಲೂರಿನಲ್ಲಿರುವ ತಮ್ಮ ನಿವಾಸದಲ್ಲಿ ಮೂರ್ಛೆ ಹೋಗಿದ್ದರು. ಈ ವೇಳೆ ಅವರನ್ನು ಕ್ರೋಮ್‌ಪೇಟ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆ ನಂತರ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.

ಅವರ ಪಾರ್ಥಿವ ಶರೀರವನ್ನು ಪೊಝಿಚಾಲೂರಿನ ಅವರ ನಿವಾಸದಲ್ಲಿ ಗೌರವಾರ್ಥ ಇರಿಸಲಾಗಿದೆ. ಭಾನುವಾರ ಸಂಜೆ 5ರ ಸುಮಾರಿಗೆ ಕ್ರೋಂಪೇಟೆ ಯಲ್ಲಿರುವ ಚಿತಾಗಾರದಲ್ಲಿ ಅವರ ಅಂತಿಮ ವಿಧಿವಿಧಾನಗಳು ನಡೆಯಲಿವೆ. ಮೃತರು ಪತ್ನಿ ಮಾಲತಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

2022 ರಲ್ಲಿ, ಧನುಷ್ ಮತ್ತು ವಿಜಯ್ ಸೇತುಪತಿ ಬೋಂಡಾ ಮಣಿ ಅವರ ವೈದ್ಯಕೀಯ ಚಿಕಿತ್ಸೆಗಾಗಿ ಹಾಗೂ ವಡಿವೇಲು ಅವರ ಚಿಕಿತ್ಸೆಗೆ ಆರ್ಥಿಕವಾಗಿ ಸಹಾಯ ಮಾಡಿದ್ದರು.

Leave a Reply

Your email address will not be published. Required fields are marked *