Saturday, 23rd November 2024

ನಟಿ ಶ್ರೀದೇವಿ ಜೀವನ ಚರಿತ್ರೆ ಪುಸ್ತಕವಾಗಲಿದೆ: ಬೋನಿ ಕಪೂರ್

ಮುಂಬೈ: ಚಿತ್ರ ನಿರ್ಮಾಪಕ ಬೋನಿ ಕಪೂರ್ ತಮ್ಮ ದಿವಂಗತ ಪತ್ನಿ ಮತ್ತು ನಟಿ ಶ್ರೀದೇವಿ ಅವರ ಜೀವನ ಚರಿತ್ರೆಯನ್ನು ಶ್ರೀದೇವಿ ‘ದಿ ಲೈಫ್ ಆಫ್ ಎ ಲೆಜೆಂಡ್’ ಎಂಬ ಶೀರ್ಷಿಕೆಯಲ್ಲಿ ಪುಸ್ತಕದ ರೂಪದಲ್ಲಿ ಹೊರಬರಲಿದೆ ಎಂದು ಘೋಷಿಸಿದ್ದಾರೆ.
ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಗುರುವಾರ ತಮ್ಮ ದಿವಂಗತ ಪತ್ನಿ ಮತ್ತು ನಟಿ ಶ್ರೀದೇವಿ ಅವರ ಜೀವನ ಚರಿತ್ರೆ ಯನ್ನು ಶ್ರೀದೇವಿ ‘ದಿ ಲೈಫ್ ಆಫ್ ಎ ಲೆಜೆಂಡ್’ ಎಂಬ ಶೀರ್ಷಿಕೆಯಲ್ಲಿ ಪುಸ್ತಕದ ರೂಪದಲ್ಲಿ ಹೊರಬರಲಿದೆ ಎಂದು ಘೋಷಿಸಿದ್ದಾರೆ.
ಟ್ವಿಟರ್ನಲ್ಲಿ ಅಧಿಕೃತ ಘೋಷಣೆ ಮಾಡಿದ್ದು, ‘ಶ್ರೀದೇವಿ ಪ್ರಕೃತಿಯ ಶಕ್ತಿಯಾಗಿದ್ದರು. ಅವರು ತಮ್ಮ ಕಲೆಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಾಗ ಅವರು ತುಂಬಾ ಸಂತೋಷವಾಗಿರುತ್ತಿದ್ದರು. ಆದರೆ, ಅವರು ತುಂಬಾ ಖಾಸಗಿ ವ್ಯಕ್ತಿಯಾಗಿದ್ದರು’ ಎಂದು ಬರೆದಿದ್ದಾರೆ. ಈ ಪುಸ್ತಕವನ್ನು ವೆಸ್ಟ್ಲ್ಯಾಂಡ್ ಕಂಪನಿ ಬಿಡುಗಡೆ ಮಾಡಲಿದೆ.

ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟಿ ಶ್ರೀದೇವಿ ಅವರು, 50 ವರ್ಷದ ತಮ್ಮ ಸಿನಿ ಜರ್ನಿಯಲ್ಲಿ 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿದ್ದ ಅವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. 2013ರಲ್ಲಿ ಇಂಗ್ಲೀಷ್ ವಿಂಗ್ಲೀಷ್ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡಿದ್ದರು. 2018ರಲ್ಲಿ ಶ್ರೀದೇವಿ ಅವರು ನಿಧನರಾದರು.