Sunday, 15th December 2024

ನಿರ್ದೇಶಕ, ನಟ ಬೂದಾಳ್ ಕೃಷ್ಣಮೂರ್ತಿ ಇನ್ನಿಲ್ಲ

ಬೆಂಗಳೂರು : ಕನ್ನಡ ಚಲನಚಿತ್ರ ನಿರ್ದೇಶಕ, ನಟ ಬೂದಾಳ್ ಕೃಷ್ಣಮೂರ್ತಿ(71) ಶನಿವಾರ ಬೆಳಗ್ಗೆ ಕೆಂಗೇರಿ ಶಿರ್ಕಿ ಅಪಾರ್ಟಮೆಂಟಿನ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದಂತ ಬೂದಾಳ್ ಕೃಷ್ಣಮೂರ್ತಿಯವರು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿತ್ರದುರ್ಗದಲ್ಲಿ 1949ರಲ್ಲಿ ಜನಿಸಿದ ಇವರು, 1973ರಲ್ಲಿ ಸಿದ್ಧಲಿಂಗಯ್ಯನವರ ಬೂತಯ್ಯನ ಮಗ ಅಯ್ಯು ಚಲನಚಿತ್ರದ ಸಹಾಯಕ ನಿರ್ದೇಶಕರಾಗುವ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಎರಡು ದಂಡೆಯ ಮೇಲೆ, ಒಲವಿನ ಕಾಣಿಕೆ, ಸೀತಾಂಜನೇಯ, ಶುಭಲಗ್ನ, ಲಂಚ ಸಾಮ್ರಾಜ್ಯ ಮುಂತಾದ ಚಿತ್ರಗಳನ್ನು ಬೂದಾಳ್ ನಿರ್ದೇಶಿಸಿದ್ದರು.

ಪ್ರೊಫೆಸರ್, ಶ್ರೀಗಂಧ, ಅರಿಶಿನ ಕುಂಕುಮ, ಬಲ್ ನನ್ಮಗ, ಪ್ರಜಾಶಕ್ತಿ, ನಿರ್ಣಯ, ಆರ್ಯಭಟ ಮುಂತಾದ ಚಿತ್ರಗಳಲ್ಲಿ ಬೂದಾಳ್ ಕೃಷ್ಣಮೂರ್ತಿ ಅಭಿನಯಿಸಿದ್ದರು.