Sunday, 15th December 2024

ಸಿನಿಮಾ ಛಾಯಾಗ್ರಾಹಕ ಅರುಣ್‍ಕುಮಾರ್ ನಿಧನ

ಬೆಂಗಳೂರು: ‘ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ಅರುಣ್‍ಕುಮಾರ್ ನಿಧನರಾಗಿ ದ್ದಾರೆ.

ಬ್ರೈನ್ ಟ್ಯೂಮರ್‌ನಿಂದ ಬಳಲುತ್ತಿದ್ದ ಅರುಣ್‍ಕುಮಾರ್ (51) ಚಿತ್ರೀಕರಣದ ವೇಳೆಯೇ ಲೋ ಬಿಪಿ ಕಾಣಿಸಿಕೊಂಡಿದ್ದರಿಂದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದಾರೆ.

ಬೀರೂರು ಮೂಲದ ಅವರು ಮೂವರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಅರುಣ್‍ಕುಮಾರ್ ಅವರು ಕನ್ನಡ ಸೇರಿ ದಂತೆ ಹಿಂದಿ, ಮರಾಠಿ, ಗುಜರಾತಿ ಸೇರಿದಂತೆ ಸುಮಾರು 34ಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿದ್ದರು. ಗುಜರಾತ್  ಸಿನಿಮಾ ವೊಂದಕ್ಕೆ ಶ್ರೇಷ್ಠ ಛಾಯಾಗ್ರಾಹಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.