Friday, 13th December 2024

’ಖಾಲಿ ಪೀಲಿ’ಗೆ ಸೆನ್ಸಾರ್‌ ಕಟ್

ಬೈ: ಆಕ್ಷೇಪಾರ್ಹ ಶಬ್ದಗಳ ಬಳಕೆಯಿರುವ ಬಾಲಿವುಡ್ ಚಿತ್ರ  ಖಾಲೀಪೀಲಿಯಿಂದ ಕೆಲವೊಂದು ದೃಶ್ಯಗಳನ್ನು ತೆಗೆದು ಹಾಕ ಬೇಕೆಂದು ಸಿಬಿಎಫ್‌ಸಿ ಶುಕ್ರವಾರ ತಿಳಿಸಿದೆ.

ಚಿತ್ರ ಈಗಾಗಲೇ ಗುರುಗ್ರಾಮ ಮತ್ತು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತೆರೆ ಕಂಡಿದೆ. ಕೌಟುಂಬಿಕ ವಾಗಿ ಚಿತ್ರ ವೀಕ್ಷಣೆಗೆ ಈ ಸಿನೆಮಾ ಹೇಳಿ ಮಾಡಿಸಿದ್ದಲ್ಲ. ಕೆಲವೊಂದು ಆಕ್ಷೇಪಾರ್ಹ ದೃಶ್ಯ ಗಳನ್ನು ತೆಗೆದುಹಾಕಲು ನಿರ್ದೇಶನ ನೀಡಿದೆ. ಇಶಾನ್ ಖಟ್ಟರ್‌ ಹಾಗೂ ಅನನ್ಯಾ ಪಾಂಡೆ ಪ್ರಮುಖ ಪಾತ್ರದಲ್ಲಿದ್ದಾರೆ.

ಓರ್ವ ಟ್ಯಾಕ್ಸಿ ಚಾಲಕ ಬ್ಲಾಕಿ (ಇಶಾನ್ ಖಟ್ಟರ್‌) ಅಪರಾಧ ಪ್ರಕರಣವೊಂದರಲ್ಲಿ ಜೈಲು ವಾಸ ಮಾಡಿ, ಜೀವನ ಸಾಗಿಸಲು ಕಾರು ಚಾಲಕ ವೃತ್ತಿ ಹಾಗೂ ಡ್ಯಾನ್ಸರ್‌ (ಅನನ್ಯಾ ಪಾಂಡೆ) ಹಣವನ್ನು ಕದ್ದು ಬ್ಲಾಕಿಯ ಕಾರಿನಲ್ಲಿ ಪರಾರಿಯಾಗುವ ಕಥೆಯಿದ್ದು, ಇದಕ್ಕೆ ಅಲಿ ಅಬ್ಬಾಸ್ ಜಫರ್‌, ಜೀ ಸ್ಟುಡಿಯೋ ಮತ್ತು ಹಿಮಾಂಶು ಮೆಹ್ರಾ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ.