Friday, 13th December 2024

ಬಾಲಿವುಡ್ ನಟ ವಿವೇಕ್ ಒಬೆರಾಯ್ ನಿವಾಸದ ಮೇಲೆ ಸಿಸಿಬಿ ದಾಳಿ

ಮುಂಬೈ: ಸ್ಯಾಂಡಲ್ ವುಡ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರ ನಿವಾಸದ ಮೇಲೆ ಬೆಂಗಳೂರು ಕೇಂದ್ರ ಅಪರಾಧ ಶಾಖೆ (ಸಿಸಿಬಿ) ದಾಳಿ ನಡೆಸಿದೆ. ವಿವೇಕ್ ಸಂಬಂಧಿ ಆದಿತ್ಯ ಅಳ್ವಾ ಬೆಂಗಳೂರು ಡ್ರಗ್ಸ್ ಪ್ರಕರಣದ ಆರೋಪಿ. ಆತನನ್ನು ಹುಡುಕಿಕೊಂಡು ಪೊಲೀಸರು ವಿವೇಕ್ ಮುಂಬೈ ನಿವಾಸದ ಮೇಲೆ ದಾಳಿ ನಡೆಸಿ ದ್ದಾರೆ.

ಸಿಸಿಬಿ ನ್ಯಾಯಾಲಯದ ವಾರಂಟ್‌ನೊಂದಿಗೆ ವಿವೇಕ್ ಅವರ ಮನೆಯಲ್ಲಿ ಹುಡುಕಾಟ ನಡೆಸಿದೆ. ಸಿಸಿಬಿ ಹೊರಡಿಸಿದ ಹೇಳಿಕೆಯ ಪ್ರಕಾರ, ವಿವೇಕ್ ಒಬೆರಾಯ್ ಅವರ ಸಂಬಂಧಿ ಯಾಗಿರುವ ಆಳ್ವಾಗೆ ನಟ ಆಶ್ರಯ ನೀಡೀದ್ದನೆಂಬ ಮಾಹಿತಿ ಇದ್ದು ಅದಕ್ಕಾಗಿ ನಾವು ಒಬೆರಾಯ್ ಅವರ ನಿವಾಸದ ಮೇಲೆ ದಾಳಿ ಮಾಡಿದ್ದೇವೆ. ಇದಕ್ಕಾಗಿ ನ್ಯಾಯಾಲಯದಿಂದ ವಾರಂಟ್ ತೆಗೆದುಕೊಂಡು ಸಿಸಿಬಿ ತಂಡ ಮುಂಬೈನ ಅವರ ಮನೆಗೆ ತೆರಳಿದೆ.

ಸಿಸಿಬಿ ತಂಡ ಈ ಮೊದಲು ಆದಿತ್ಯ ಮನೆಯ ಮೇಲೆ ಸಹ ದಾಳಿ ಮಾಡಿತ್ತು. ಹೆಬ್ಬಾಳದ ಸಮೀಪ ವಿರುವ ಆದಿತ್ಯ ಮನೆ ‘ಹೌಸ್ ಆಫ್ ಲೈವ್ಸ್ ಅನ್ನು ಶೋಧಿಸಲಾಗಿದೆ.