Sunday, 24th November 2024

BBK 11: ಬಿಗ್ ಬಾಸ್​ನಲ್ಲಿ ಬಿಗ್ ಟ್ವಿಸ್ಟ್: ಈ ವಾರ ಮನೆಯಿಂದ ಹೊರಹೋಗಲು 5 ಬಲಿಷ್ಠ ಸ್ಪರ್ಧಿಗಳು ನಾಮಿನೇಟ್

BBK 11 6 week Nomination

ಆರನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ರೋಚಕತೆ ಸೃಷ್ಟಿಸುತ್ತಿದೆ. ಸ್ಪರ್ಧಿಗಳು ತಮ್ಮದೇ ಆದ ಗೇಮ್ ಪ್ಲ್ಯಾನ್ ರೂಪಿಸುತ್ತಿದ್ದಾರೆ. ಇದರ ನಡುವೆ ಬಿಗ್ ಬಾಸ್ ಸ್ಪರ್ಧಿಗಳು ಆಡಿರುವ ಕೆಲ ಮಾತುಗಳ ಕ್ಲಿಪ್ ಅನ್ನು ಮನೆಮಂದಿಗೆ ತೋರಿಸಿ ಬೆಂಕಿ ಹತ್ತಿಸಿದ್ದಾರೆ. ಇದು ಆರುವ ಮುನ್ನವೇ ನಾಮಿನೇಷನ್ ಕೂಡ ನಡೆದಿದೆ. ಇದಕ್ಕೆಲ್ಲ ಕಾರಣವಾಗಿದ್ದು ಪಗಡೆ ಆಟ.

ಸದ್ಯಕ್ಕೆ ಈ ವಾರ ಮನೆಯಿಂದ ಹೊರ ಹೋಗಲು 5 ಬಲಿಷ್ಠ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ. ಈ ವಾರದ ಮೊದಲ ದಿನ ಬಿಗ್ ಬಾಸ್ ಮನೆ ಮಂದಿಗೆ ಪಗಡೆ ಆಟ ನೀಡಿದ್ದರು. ಇದಕ್ಕೆ ಮೂರು ಜನರಿರುವಂತಹ ನಾಲ್ಕು ಗುಂಪುಗಳನ್ನು ರಚಿಸಲಾಗಿದೆ. ಪಗಡೆ ಆಟದ 4 ಮೂಲೆಗೂ ಒಂದೊಂದು ಗುಂಪನ್ನು ನಿಲ್ಲಿಸಲಾಗಿತ್ತು. ಶಿಶಿರ್‌‌ ಟೀಂನಲ್ಲಿ ಧನರಾಜ್‌, ಐಶ್ವರ್ಯಾ ಇದ್ದರೆ, ಗೌತಮಿ ಟೀಂನಲ್ಲಿ ತ್ರಿವಿಕ್ರಮ್‌ ಅನುಷಾ ಇದ್ದರು. ಚೈತ್ರಾ ಟೀಂನಲ್ಲಿ ಮೋಕ್ಷಿತಾ, ಧರ್ಮ, ಮಂಜಣ್ಣ ಟೀಂನಲ್ಲಿ ಭವ್ಯಾ, ಸುರೇಶ್‌ ಇದ್ದರು.

ದಾಳ ಉರುಳಿಸುವ ಗೇಮ್‌ನಲ್ಲಿ ಮೊದಲಿಗೆ ಚೈತ್ರಾ ಅವರ ಟೀಂ ಎದುರಾಳಿ ತಂಡದ ಒಬ್ಬರನ್ನು ಉಳಿಸಿಬೇಕಿತ್ತು. ಅವರು ಗೌತಮಿ ಅವರನ್ನು ಉಳಿಸಿದರು. ಬಳಿಕ ಮಂಜು ಅವರ ಟೀಂನಿಂದ ಭವ್ಯಾ, ಚೈತ್ರಾ ಟೀಂನಿಂದ ಧರ್ಮ ಅವರು ನಾಮಿನೇಟ್‌ ಆದರು. ಬಳಿಕ ಗೌತಮಿ ಅವರ ಟೀಂ ನಿಂದ ತ್ರಿವಿಕ್ರಮ್‌ ಮತ್ತು ಅನುಷಾ ಅವರು ಒಮ್ಮತದ ನಿರ್ಧಾರದ ಮೇಲೆ ಮೋಕ್ಷಿತಾ ಅವರನ್ನು ಸೇವ್‌ ಮಾಡಿದರು.

ಬಳಿಕ ಕೊನೆಯಲ್ಲಿ ದಾಳ ಉರುಳಿಸಿ ಉಗ್ರಂ ಮಂಜು, ಸುರೇಶ್‌, ಐಶ್ವರ್ಯಾ, ಶಿಶಿರ್‌ ಅವರು ಸೇಫ್‌ ಆದರು. ಆದರೆ ಕೊನೆಗೆ ಚೈತ್ರಾ, ಧರ್ಮ, ಅನುಷಾ, ಭವ್ಯಾ ಹಾಗೂ ತ್ರಿವಿಕ್ರಮ್‌ ಉಳಿದಿದ್ದರು. ಹೀಗಾಗಿ ಈ ವಾರ ಬಿಗ್​ಬಾಸ್​ ಮನೆಯಲ್ಲಿ ಬಲಿಷ್ಠ ಸ್ಪರ್ಧಿಗಳೇ ನಾಮಿನೇಟ್​ ಆಗಿದ್ದಾರೆ.

ಚೈತ್ರಾ-ಅನುಷಾ ಜಗಳ:

ಚೈತ್ರ ಅವರು ಗೌತಮಿ, ತ್ರಿವಿಕ್ರಂ ಹಾಗೂ ಅನುಷಾ ಅವರು ಇರುವ ಗುಂಪಿನಿಂದ ಗೌತಮಿ ಅವರನ್ನು ಪಾರು ಮಾಡುತ್ತಾರೆ, ಇದೇ ವಿಚಾರವಾಗಿ ಟಾಸ್ಕ್ ಮುಗಿದ ಬಳಿಕ ಅನುಷಾ ಹಾಗೂ ಚೈತ್ರ ನಡುವೆ ಮಾತಿನ ಚಕಮಕಿ ನಡೆದಿದೆ. ಅನುಷಾ ಅವರು, ನಾವೆಲ್ಲರೂ ನಿಮ್ಮ ಕಣ್ಣಿಗೆ ಕಾಣಿಸಲಿಲ್ಲವಾ ಗೌತಮಿ ಅವರನ್ನು ಸೇವ್ ಮಾಡಿದ್ದೀರಿ ಎಂದು ಚೈತ್ರಾಗೆ ಹೇಳುತ್ತಾರೆ. ಆಗ, ಚೈತ್ರಾ ಹೌದು ನನ್ನ ಕಣ್ಣಿಗೆ ಕಾಣಿಸಿದರೂ ಕಾಣಿಸದಿರುವವರ ತರಹ ಆಟವಾಡ್ತೇನೆ ಎಂದು ಹೇಳುತ್ತಾರೆ. ಜೊತೆಗೆ ತಮಾಷೆಗೆ ಚೈತ್ರಾ ಅವರು ಅನುಷಾ ಅವರ ತಲೆಯ ಮೇಲೆ ಒಂದು ಬಾರಿ ಹೊಡೆದಿದ್ದಾರೆ. ಆಗ ಕೋಪಗೊಂಡ ಅನುಷಾ, ಚೈತ್ರಾಳಿಗೆ ಷಟ್ ಅಪ್, ಗೆಟ್ ಲಾಸ್ಟ್ ಎಂದು ಹೇಳುತ್ತಾರೆ. ಇದರಿಂದ ಚೈತ್ರಾ ಕೂಡ ಕೋಪಗೊಂಡಿದ್ದು, ಅಮ್ಮಾ… ತಪ್ಪಾಯ್ತು ತಾಯಿ.. ಇನ್ಯಾವತ್ತೂ ಮಾತನಾಡುವುದಿಲ್ಲ ಎಂದು ಅಲ್ಲಿಂದ ಎದ್ದು ಹೋಗಿದ್ದಾರೆ.

BBK 11: ಮುರಿದು ಬಿತ್ತು ಮಂಜು-ಗೌತಮಿ-ಮೋಕ್ಷಿತಾ ಫ್ರೆಂಡ್​ಶಿಪ್: ಏನು ಕಾರಣ?