Wednesday, 18th December 2024

BBK 11: ‘ಚೈತ್ರಾ ಜಾಗದಲ್ಲಿ ಗಂಡ್​​ಮಕ್ಕಳಿದ್ದಿದ್ರೆ..’: ಬಿಗ್ ಬಾಸ್​ನಲ್ಲಿ ಮೊದಲ ಬಾರಿ ರೊಚ್ಚಿಗೆದ್ದ ಹನುಮಂತ

Hanumantha Chaithra Kundapura Fight

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಜೊತೆಗೆ ಜಗಳಗಳು ಕೂಡ ಹೆಚ್ಚಾಗುತ್ತಿದೆ. ಹನ್ನೆರಡನೇ ವಾರಕ್ಕೆ ಕಾಲಿಟ್ಟಿ ಬಿಬಿಕೆಯಲ್ಲಿ ಟಾಸ್ಕ್​ಗಳು ಕಠಿಣವಾಗುತ್ತಿದ್ದು, ಸ್ಪರ್ಧಿಗಳು ಗೆಲ್ಲಲು ಹರಸಾಹಸ ಪಡುತ್ತಿದ್ದಾರೆ. ಸದ್ಯ ದೊಡ್ಮನೆ ಎರಡು ಗುಂಪುಗಳಾಗಿ ವಿಂಗಡನೆಗೊಂಡಿದೆ. ಒಂದು ಗುಂಪಿಗೆ ತ್ರಿವಿಕ್ರಮ್ ನಾಯಕನಾದರೆ ಮತ್ತೊಂದು ಗ್ರೂಪ್​ಗೆ ರಜತ್ ಕಿಶನ್ ಕ್ಯಾಪ್ಟನ್ ಆಗಿದ್ದಾರೆ.

ತ್ರಿವಿಕ್ರಮ್ ನಾಯಕನಾಗಿರುವ ಗ್ರೂಪ್​ನಲ್ಲಿ ಭವ್ಯಾ, ಗೌತಮಿ ಜಾಧವ್, ಮಂಜು ಹಾಗೂ ಚೈತ್ರಾ ಕುಂದಾಪುರ ಇದ್ದರೆ ಅತ್ತ ರಜತ್ ಗುಂಪಿನಲ್ಲಿ ಧನರಾಜ್, ಹನುಮಂತ, ಐಶ್ವರ್ಯಾ ಹಾಗೂ ಮೋಕ್ಷಿತಾ ಪೈ ಇದ್ದಾರೆ. ಈ ಎರಡೂ ಗ್ರೂಪ್​ಗಳ ಮಧ್ಯೆ ಕಾಲಕಾಲಕ್ಕೆ ಟಾಸ್ಕ್ ನಡೆಯುತ್ತೆ. ದೊಡ್ಮನೆಯಲ್ಲಿ ಇಷ್ಟು ದಿನ ತನ್ನದೇ ಶೈಲಿಯಲ್ಲಿ ಗೇಮ್ ಆಡಿಕೊಂಡು ಬರುತ್ತಿದ್ದ ಹಳ್ಳಿ ಹೈದ ಹನುಮಂತು ಇದೀಗ ಮೊದಲ ಬಾರಿಗೆ ರೊಚ್ಚಿಗೆದ್ದಿದ್ದಾರೆ.

ಟಾಸ್ಕ್​ ಮಧ್ಯೆ ಹನುಮಂತ ಅವರು ಚೈತ್ರಾ ಕುಂದಾಪುರ ಮೇಲೆ ಸಿಟ್ಟಾಗಿದ್ದಾರೆ. ಟಿವಿಯಲ್ಲಿರುವ ಪದವನ್ನು ನೋಡಿ, ದಿಂಬಲ್ಲಿ ಅಕ್ಷರವನ್ನು ಹುಡುಕಿ ತರಬೇಕು ಎಂಬ ಟಾಸ್ಕ್‌ ಬಿಗ್‌ ಬಾಸ್‌ ನೀಡಿದ್ದರು. ಈ ವೇಳೆ ಚೈತ್ರಾ ಹಾಗೂ ಹನುಮಂತನ ನಡುವೆ ವಾರ್‌ ಆಗಿದೆ. ಚೈತ್ರಾ ಜಾಗದಲ್ಲಿ ಗಂಡ್‌ಮಕ್ಳು ಇರ್ತಿದ್ರೆ ಕಥೆನೇ ಬೇರೆ ಆಗ್ತಿತ್ತು ಎಂದು ಚೈತ್ರಾ ಮೇಲೆ ಹನುಮ ಕೂಗಾಡಿದ್ದಾನೆ. ಜತೆಗೆ ರಜತ್‌ ಕೂಡ ಮೋಸ ಮೋಸ ಎಂದು ಕೂಗಿದ್ದಾರೆ.

ಟಾಸ್ಕ್​ನಲ್ಲಿ ಉಸ್ತುವಾರಿ ವಹಿಸಿಕೊಂಡಿದ್ದ ಚೈತ್ರಾ ಕುಂದಾಪುರ ಜೊತೆ ಹನುಮಂತು ವಾದ ಮಾಡುತ್ತಾರೆ. ನಾನು ಇನ್ನೂ ಇಲ್ಲೇ ಇದ್ದೇನೆ. ನಿಯಮ ಮೀರಿ ಗೆರೆ ದಾಟಿಲ್ಲ. ನನ್ ತಲೆ ಆಫ್ ಆದ್ರೆ.. ಮೊದಲೇ ಸರಿ ಇಲ್ಲ. ಚೈತ್ರಾ ಜಾಗದಲ್ಲಿ ಗಂಡುಮಕ್ಕಳಿದ್ದಿದ್ರೆ ಕಥೆಯೇ ಬೇರೆ ಆಗುತ್ತಿತ್ತು ಎಂದು ಹೇಳಿದ್ದಾರೆ. ಜೊತೆಗೆ ಧನರಾಜ್​-ಚೈತ್ರಾ ನಡುವೆಯೂ ದೊಡ್ಡ ಗಲಾಟೆ ಆಗಿದೆ. ಸ್ಪರ್ಧಿಗಳ ವರ್ತನೆಗೆ ಕೆರಳಿದ ಬಿಗ್​ ಬಾಸ್​​ ಟಾಸ್ಕ್​ ಅನ್ನೇ ರದ್ದುಗೊಳಿಸಿದ್ದಾರೆ. ಜೊತೆಗೆ, ಇದಕ್ಕೆ ಪರಿಣಾಮವಾಗಿ.. ಎಂದು ಬಿಗ್​ ಬಾಸ್​ ಏನೋ ಮಹತ್ವದ ನಿರ್ಧಾರ ಕೈಗೊಂಡಂತಿದೆ.

BBK 11: ಸುದೀಪ್​ ಮಾತಿಗೆ ಡೋಂಟ್​ ಕೇರ್: ಬಿಗ್ ಬಾಸ್​ನಲ್ಲಿ ನಿಲ್ಲದ ರಜತ್ ಆರ್ಭಟ