ಬಿಗ್ ಬಾಸ್ (Bigg Boss) ಮನೆಯಲ್ಲಿ ಕೆಲವೊಂದು ಕಟ್ಟುನಿಟ್ಟಿನ ನಿಯಮಗಳಿವೆ. ಅದನ್ನು ಮೀರುವಂತಿಲ್ಲ, ಕೊನೆಗೂ ಮೀರಿದರೆ ಅದಕ್ಕೆ ತಕ್ಕ ಶಿಕ್ಷೆ ನೀಡಲಾಗುತ್ತದೆ. ಇದಲ್ಲಾ ಅಗ್ರಿಮೆಂಟ್ನಲ್ಲಿ ಬರೆದಿರುತ್ತಾರೆ. ಓರ್ವ ಸ್ಪರ್ಧಿ ಮನೆಯೊಳಗೆ ಕಾಲಿಡುವ ಮುನ್ನವೇ ಇದನ್ನೆಲ್ಲ ಓದಿ ಒಕೆ ಅಂದ ನಂತರವೇ ಕಳುಹಿಸಲಾಗುತ್ತದೆ. ಆದರೆ, ಇದೀಗ ದೊಡ್ಮನೆಯಲ್ಲಿ ಬಹುದೊಡ್ಡ ನಿಯಮ ಉಲ್ಲಂಘನೆ ಆಗಿದೆ. ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ರೂಲ್ಸ್ ಬ್ರೇಕ್ ಮಾಡಿದ್ದಾರೆ.
ಚೈತ್ರಾ ಮಾಡಿದ್ದೇನು?:
ಸ್ಪರ್ಧಿಗಳಿಗೆ ಏನಾದರು ಏಟಾದಾಗ ಅಥವಾ ಏನೇ ತೊಂದರೆಯಾದಾಗ ಚಿಕಿತ್ಸೆಗಾಗಿ ಹೊರಗೆ ವೈದ್ಯರ ಬಳಿ ಕರೆದೊಯ್ಯಲಾಗುತ್ತದೆ. ವಾಪಸ್ ಬಂದ ಬಳಿಕ ಹೊರಗಿನ ವಿಷಯವನ್ನು ಮನೆಯೊಳಗೆ ತರುವಂತಿಲ್ಲ. ಪಿಸುದನಿಯಲ್ಲಿ ಮಾತನಾಡುವಂತಿಲ್ಲ ಅನ್ನೋದು ಕೂಡಾ ಮನೆಯ ಪ್ರಮುಖ ನಿಯಮ. ಆದರೆ ಚೈತ್ರಾ ಅವರು ಈ ಎಲ್ಲ ನಿಯಮ ಉಲ್ಲಂಘಿಸಿದ್ದಾರೆ. ಜೈಲಿನೊಳಗಿದ್ದ ಧನರಾಜ್ ಮತ್ತು ಮಂಜು ಬಳಿ ಹಾಗೂ ಶಿಶಿರ್, ತ್ರಿವಿಕ್ರಮ್ ಬಳಿ ಇನ್ಡೈರೆಕ್ಟ್ ಆಗಿ ಹೊರಗೆ ಜನರ ಅಭಿಪ್ರಾಯ ಏನಿದೆ ಎಂದು ಹೇಳಿದ್ದಾರೆ.
ಕೋಪಗೊಂಡ ಸುದೀಪ್:
ಈ ವಿಚಾರವನ್ನು ಸುದೀಪ್ ಅವರು ವಾರದ ಪಂಚಾಯಿತಿಯನ್ನು ಎತ್ತಿದ್ದಾರೆ. ಆಸ್ಪತ್ರೆಗೆ ಹೋಗಿ ಬಂದ ನೀವು ಮಾಡಿದ ಕೆಲಸ ಏನು ಅಂತ ಚೈತ್ರಾ ಅವರನ್ನು ಕೇಳಿದ್ದಾರೆ. ಮನೆಬಿಟ್ಟು ಆಸ್ಪತ್ರೆಯಲ್ಲಿ ಕಾಲ ಕಳೀತೀರಾ, ಬೆಳಗ್ಗೆ ಬಂದು ಎಲ್ಲರ ಕಿವಿಗೆ ಹೇಳಿದ್ದೇನೆ. ಇದೆಲ್ಲಾ ಹೇಳುವ ನಿಮ್ಮ ಉದ್ದೇಶ ಏನಿತ್ತು ಎಂದು ಕಿಚ್ಚ ಸುದೀಪ್ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಚೈತ್ರಾ ಕುಂದಾಪುರ ನಂಗೆ ಡಾಕ್ಟರ್ಸ್, ನರ್ಸ್ ಹೊರಗಿನ ಕೆಲ ವಿಚಾರ ಹೇಳಿದರು. ನಾನು ಅವರು ಏನು ಹೇಳಿದ್ರೊ ಅದನ್ನೆಷ್ಟೆ ಇಲ್ಲಿ ಹೇಳಿದ್ದೇನೆ ಎಂದಿದ್ದಾರೆ.
ಚೈತ್ರಾ ಮಾತು ಕೇಳಿ ಸುದೀಪ್ ಕೋಪಗೊಂಡು, ಬಾಯಿ ಮುಚ್ಚುವಂತೆ ಚೈತ್ರಾಗೆ ಶ್.. ಎಂದು ಸನ್ನೆ ಮಾಡಿದ್ದಾರೆ. ಸುದೀಪ್ ಕೋಪ ಕಂಡು ಚೈತ್ರಾ ಗಪ್ ಚುಪ್ ಆಗಿದ್ದಾರೆ. ಇದಕ್ಕೆ ಬೆಚ್ಚಿದ ಚೈತ್ರಾ ಅವರು ಬಿಗ್ ಬಾಸ್ ಮನೆಯ ಕ್ಯಾಮೆರಾದ ಮುಂದೆ ಹೋಗಿ ನನಗೆ ಇಲ್ಲಿ ಉಸಿರುಗಟ್ಟಿಸುವ ವಾತಾವರಣ ಇರುವುದರಿಂದ ಮನೆಗೆ ಹೋಗಬೇಕಂತ ನಾನು ನಿರ್ಧಾರ ಮಾಡಿದ್ದೀನಿ ಬಿಗ್ ಬಾಸ್ ಎಂದು ಕಣ್ಣೀರು ಹಾಕಿದ್ದಾರೆ.
BBK 11: ಕಿಚ್ಚನ ಕೋಪ ಕಂಡು ನನ್ನನ್ನು ಮನೆಗೆ ಕಳುಹಿಸಿ ಎಂದ ಚೈತ್ರಾ ಕುಂದಾಪುರ