ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Chaithra Kundapura) ಪ್ರಮುಖ ಸ್ಪರ್ಧಿಯಾಗಿ ಕಾಣಿಸಿಕೊಂಡಿರುವ ಚೈತ್ರಾ ಕುಂದಾಪುರ ಅವರು ಇದೀಗ ದಿಢೀರ್ ಆಗಿ ದೊಡ್ಮನೆಯಿಂದ ಹೊರಬಂದಿದ್ದಾರೆ. ಹಾಗಂತ ಇವರು ಹೊರಬಂದಿರುವುದು ಯಾರಿಗೊ ಹೊಡೆದೊ ಅಥವಾ ಅವಾಚ್ಯ ಶಬ್ದಗಳಿಂದ ಬೈದಿದ್ದಕ್ಕಲ್ಲ. ಬದಲಾಗಿ ವಂಚನೆಯ ಆರೋಪದ ಅಡಿಯಲ್ಲಿ ಈ ಹಿಂದೆ ದಾಖಲಾಗಿದ್ದ ಪ್ರಕರಣ ಹಿನ್ನೆಲೆ ಕೋರ್ಟ್‌ಗೆ ಹಾಜರಾಗಲು ಬಿಗ್ ಬಾಸ್ ಶೋನಿಂದ ಹೊರಬಂದಿದ್ದಾರೆ.
ಉಡುಪಿ ಜಿಲ್ಲೆಯ ಬೈಂದೂರಿನ ಉದ್ಯಮಿ ಹಾಗೂ ಸಮಾಜ ಸೇವಕ ಗೋವಿಂದ ಬಾಬು ಪೂಜಾರಿ ಅವರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ 5 ಕೋಟಿ ರೂ. ಪಡದು ವಂಚನೆ ಮಾಡಿದ್ದ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಹಾಗೂ ಅವರ ಗ್ಯಾಂಗ್ ಮೇಲೆ ಕೇಸ್ ಆಗಿತ್ತು. ಮೋಸ ಮಾಡಿರುವ ಬಗ್ಗೆ ಆರೋಪ ಇತ್ತು. ಈ ಪ್ರಕರಣದಲ್ಲಿ ಅವರು ಜೈಲು ಪಾಲಾಗಿದ್ದಾರೆ. ಆದರೆ, ಬಿಗ್ ಬಾಸ್ಗೆ ಬರುವ ಕೆಲ ದಿನಗಳ ಹಿಂದೆಯಷ್ಟೆ ಜಾಮೀನಿನ ಮೇಲೆ ಹೊರಬಂದಿದ್ದರು.
ಇದೀಗ ಈ ಹಿನ್ನಲೆಯಲ್ಲಿ ಚೈತ್ರ 1ನೇ ACMM ಕೋರ್ಟ್‌ಗೆ ಹಾಜರಾಗಿದ್ದಾರೆ. ಚೈತ್ರ, ಶ್ರೀಕಾಂತ್, ಹಿರೇ ಹಡಗಲಿಯ ಹಾಲಸ್ವಾಮಿ ಮಠದ ಸ್ವಾಮೀಜಿ ಸೇರಿದಂತೆ ಮೂವರು ಆರೋಪಿಗಳಾಗಿದ್ದಾರೆ. ಈ ಪೈಕಿ ಇಂದು ಚೈತ್ರಾ ಕುಂದಾಪುರ ಸೇರಿದಂತೆ ಮೂವರು ಆರೋಪಿಗಳು ಕೋರ್ಟ್‌ಗೆ ಹಾಜರು ಆಗಿದ್ದರು. ಇನ್ನು ಕೋರ್ಟ್‌ಗೆ ಹಾಜರಾಗಲೇಬೇಕು ಎಂಬ ವಾರೆಂಟ್ ಹಿನ್ನೆಲೆಯಲ್ಲಿ ಬಿಗ್ ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ಅವರ ನೇರವಾಗಿ ಕೋರ್ಟ್ ವಿಚಾರಣೆಗೆ ಹಾಜರಾಗಿದ್ದರು.
ಬಿಗ್ ಬಾಸ್ ಕಾರಿನಲ್ಲಿಯೇ ನೇರವಾಗಿ ಕೋರ್ಟ್‌ಗೆ ಬಂದಿರುವ ಚೈತ್ರಾ ಅವರನ್ನು ಯಾರ ಸಂಪರ್ಕಕ್ಕೂ ಸಿಗದಂತೆ ಕಾಪಾಡಲಾಗಿದೆ. ಈಗ ಚೈತ್ರಾ ಕುಂದಾಪುರ ಅವರ ಕೇಸ್ ವಿಚಾರಣೆಯನ್ನು ಜನವರಿ 13ಕ್ಕೆ ಮುಂದೂಡಲಾಗಿದ್ದು ಅವರು ಮತ್ತೆ ಬಿಗ್ಬಾಸ್ ಮನೆಗೆ ಹೋಗಲಿದ್ದಾರೆ ಎನ್ನಲಾಗಿದೆ.
ಬಿಗ್ ಬಾಸ್ ಮನೆಯಿಂದ ಕೋರ್ಟ್, ಕೇಸ್ ಎಂದು ಸ್ಪರ್ಧಿಗಳು ಹೊರಗೆ ಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 10 ಸೀಸನ್‌ನಲ್ಲಿ ವರ್ತೂರ್ ಸಂತೋಶ್ ಕೂಡ ಮನೆಯಿಂದ ಹೊರಬಂದು ಕೋರ್ಟ್‌ಗೆ ಹಾಜರ್ ಆಗಿದ್ದರು. ಹುಲ್ಲಿನ ಪೆಂಡೆಂಟ್ ದರಿಸಿದ್ದ ಕಾರಣಕ್ಕಾಗಿ ನೋಟಿಸ್ ಜಾರಿ ಮಾಡಲಾಗಿತ್ತು. ಆಗ ಸಂತೋಶ್ ಅವರು ಕೋರ್ಟ್‌ನಲ್ಲಿ ವಿಚಾರಣೆ ಎದುರಿಸಿ ಬಳಿಕ ಮತ್ತೆ ಬಿಗ್ ಬಾಸ್ ಮನೆಗೆ ಹೋಗಿದ್ದರು.