ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ತನ್ನ ನೇರ ಮಾತುಗಳಿಂದ ಕೆಲವರ ವಿರೋಧ ಕಟ್ಟುಕೊಂಡು, ಇನ್ನೂ ಕೆಲವರ ಪ್ರೀತಿಯನ್ನು ಸಂಪಾದಿಸಿರುವ ಸ್ಪರ್ಧಿ ಎಂದರೆ ಅದು ಚೈತ್ರಾ ಕುಂದಾಪುರ. ಮೂಲತಃ ಕುಂದಾಪುರದವರಾದ ಚೈತ್ರಾ ಫೈರ್ ಬ್ರ್ಯಾಂಡ್ ಎಂದೇ ಫೇಮಸ್. ವಾಗ್ಮಿಯಾಗಿ ಗುರುತಿಸಿಕೊಂಡಿದ್ದ ಇವರು ಕಳೆದ ವರ್ಷ ಕೇಸ್ ಒಂದರಲ್ಲಿ ಜೈಲಿಗೆ ಹೋಗಿ ಬಂದ ಬಳಿಕ ಇವರ ಮೇಲಿದ್ದ ಗೌರವ ಕಡಿಮೆ ಆಗಿತ್ತು.
ಆದರೆ, ಈಗ ಬಿಗ್ ಬಾಸ್ ನೋಡುತ್ತಿರುವವರಿಗೆ ಅವರ ಮೇಲಿದ್ದ ಭಾವನೆ ನಿಧಾನವಾಗಿ ಬದಲಾಗುತ್ತಿದೆ. ತನ್ನ ನೇರ ಮಾತುಗಳಿಂದಲೇ ಜನರಿಗೆ ಹತ್ತಿರವಾಗುತ್ತಿದ್ದಾರೆ. ಆದರೆ, ಮನೆಯೊಳಗೆ ಚೈತ್ರಾ ಅವರು ಯಾರಿಗೂ ಬೇಡವಾದಂತಿದೆ. ಈ ಹಿಂದೆ ಅನೇಕ ಟಾಸ್ಕ್ಗಳಲ್ಲಿ ಗೆದ್ದು ಉತ್ತಮ ಆಟ ಆಡಿದ್ದರೂ ಇವರನ್ನು ಯಾವ ತಂಡ ಕೂಡ ಆಯ್ಕೆ ಮಾಡಲು ಮುಂದೆ ಬರುತ್ತಿಲ್ಲ.
ಬಿಗ್ ಬಾಸ್ ಮನೆ ಮಂದಿಗೆ ಲಕ್ಷುರಿ ಬಜೆಟ್ ಗಳಿಸಲು ಟಾಸ್ಕ್ ಒಂದನ್ನು ನೀಡಿದ್ದಾರೆ. ಇದರಲ್ಲಿ ಭವ್ಯಾ ಗೌಡ ಮತ್ತು ಗೌತಮಿ ಜಾಧವ್ ಎರಡು ಗುಂಪುಗಳಿವೆ. ಇವರು ತಮಗೆ ಬೇಕಾದ ಸದಸ್ಯರನ್ನು ಆರಿಸಿಕೊಳ್ಳಬೇಕು ಎಂದು ಹೇಳಲಾಗಿತ್ತು. ಭವ್ಯಾ ಮತ್ತು ಗೌತಮಿ ಜಾಧವ್ ಅವರು ಎರಡು ಟೀಮ್ಗಳನ್ನು ಆಯ್ಕೆ ಮಾಡಿಕೊಂಡರು. ಟೀಮ್ ಮಾಡುವಾಗ ಎಲ್ಲರೂ ಆಯ್ಕೆಯಾಗಿ ಕೊನೆಯಲ್ಲಿ ಉಳಿದುಕೊಂಡಿದ್ದು ಚೈತ್ರಾ ಕುಂದಾಪುರ ಮಾತ್ರ. ಇವರನ್ನು ಯಾರೂ ಆಯ್ಕೆ ಮಾಡಲಿಲ್ಲ. ಇನ್ನೇನು ಬೇರೆ ಆಪ್ಷನ್ ಇಲ್ಲದೇ ಅಂತಿಮವಾಗಿ ಗೌತಮಿಯ ಟೀಮ್ಗೆ ಚೈತ್ರಾ ಅವರ ಹೋಗಬೇಕಾಯಿತು.
ತನ್ನನು ಯಾರೂ ಕೂಡ ಆಯ್ಕೆ ಮಾಡಿಕೊಳ್ಳದ್ದಕ್ಕೆ ಚೈತ್ರಾ ಬೇಸರ ವ್ಯಕ್ತಪಡಿಸಿದರು. ಟಾಸ್ಕ್ ನಡೆದು ಗೌತಮಿ ಟೀಂ ವಿನ್ ಆಗಿ ಲಕ್ಷುರಿ ಬಜೆಟ್ ಪಡೆದರು. ಇಷ್ಟಾದರೂ ಚೈತ್ರಾ ಮಾತ್ರ ತನ್ನನ್ನು ಸೇರಿಸಿಕೊಳ್ಳದ್ದಕ್ಕೆ ಭವ್ಯಾ ಅವರ ಮೇಲೆ ಕೋಪಗೊಂಡು ಊಟದ ಸಮಯದಲ್ಲಿ ಅದನ್ನೇ ಹೇಳುತ್ತಿದ್ದರು. ಕೊನೆಗೆ ಭವ್ಯಾ ಅವರು ಚೈತ್ರಾ ಅವರ ವರ್ತನೆಯಿಂದ ಅರ್ಧಕ್ಕೆ ಊಟ ಕೂಡ ಬಿಟ್ಟರು.
ಇಲ್ಲಿಗೆ ನಿಲ್ಲದ ಈ ವಿಚಾರ ಸ್ವಿಮ್ಮಿಂಗ್ ಪೂಲ್ ಬಳಿ ಕೂಡ ಚರ್ಚೆ ನಡೆಯಿತು. ಆದರೆ, ಈ ಸಂದರ್ಭ ಭವ್ಯಾ ಹಾಗೂ ತ್ರವಿಕ್ರಮ್ ಈ ವಿಚಾರವನ್ನು ಕಾಮಿಡಿ ಆಗಿ ಪರಿವರ್ತಿಸಿದರು. ಚೈತ್ರಾ ಅವರ ಮಾತನ್ನು ನಿಲ್ಲಿಸಲು ಭವ್ಯಾ, ತ್ರಿವಿಕ್ರಮ್ ಸೇರಿ ಹಲವರು ಕೊನೆಗೆ ಅವರ ಮೈಕ್ ಅನ್ನು ತೆಗೆದು ಅಡಗಿಸಿಟ್ಟರು. ನಂತರ ಸ್ವಿಮ್ಮಿಂಗ್ ಪೂಲ್ಗೆ ಎತ್ತಿ ಬಿಸಾಡಿದರು. ಈ ಘಟನೆ ನಡೆದ ಬಳಿಕ ಚೈತ್ರಾ ಅವರು ಸಮಾಧಾನಗೊಂಡು ಎಲ್ಲರ ಜೊತೆ ಖುಷಿಯಲ್ಲಿದ್ದಾರೆ.